ಬೆಂಗಳೂರು, ಮಂಗಳೂರು, ಭಟ್ಕಳ in ಡೇಂಜರ್; ಕೊರೋನಾ ಹೆಲ್ತ್ ಬುಲೆಟಿನ್ ಮಾಹಿತಿ ಹೀಗಿದೆ ನೋಡಿ

ಬೆಂಗಳೂರು: ಕೊರೋನಾ ಆಘಾತಕಾರಿ ಸುದ್ದಿ ಮತ್ತೆ ಮತ್ತೆ ಮಾರ್ದನಿಸುತ್ತಲೇ ಇದೆ. ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಮುಂದುವರಿಯುತ್ತಲೇ ಇದ್ದು, ಶನಿವಾರದ ಹೆಲ್ತ್ ಬುಲೆಟಿನ್ ಕೂಡಾ ಆತಂಕಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಶುಕ್ರವಾರ ಸಂಜೆ ನಂತರದ ಬೆಳವಣಿಗೆಗಳನ್ನಾಧರಿಸಿ ಕೊರೋನಾ ವಿಚಾರಧಾರೆಯನ್ನು ಹರಿಯಬಿಟ್ಟಿರುವ ಈ ಹೆಲ್ತ್ ಬುಲೆಟಿನ್ ಬೆಂಗಳೂರು ನಗರ, ದಕ್ಷಿಣಕನ್ನಡ, ಉತ್ತರಕನ್ನಡ, ಚಿತ್ರದುರ್ಗ ಜಿಲ್ಲೆಗಳ ಚಿತ್ರಣಗಳತ್ತ ಬೊಟ್ಟು ಮಾಡಿವೆ. ರಾಜ್ಯದಲ್ಲಿ ಹೊಸದಾಗಿ 36 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿ ಹೇಳಿದೆ.

ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಮಧ್ಯಾಹ್ನವರೆಗೆ ರಾಜ್ಯದ ವಿವಿಧೆಡೆ 36 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ.. ಮಡ್ಯಂಗಡಿಗಳು ಮತ್ತೆ ಬಂದ್? ಕಿಕ್’ನಲ್ಲಿರುವ ಎಣ್ಣೆಪ್ರಿಯರಿಗೆ ಶಾಕ್

ಭಾನುವಾರ ಬೆಳಗ್ಗಿನ ಹೆಲ್ತ್ ಬುಲೆಟಿನ್’ನಲ್ಲಿ ರಾಜ್ಯದ ೮ ಜಿಲ್ಲೆಗಳ ಹೊಸ ಪಾಸಿಟಿವ್ ಕೇಸ್’ಗಳನ್ನೂ ಉಲ್ಲೇಖಿಸಿದೆ.

  • ಬೆಂಗಳೂರು ನಗರ – 12
  • ಉತ್ತರಕನ್ನಡ – 7
  • ದಾವಣಗೆರೆ – 6
  • ದಕ್ಷಿಣಕನ್ನಡ – 3
  • ಚಿತ್ರದುರ್ಗ – 3
  • ಬೀದರ್ – 3
  • ತುಮಕೂರು – 1
  • ವಿಜಯಪುರ – 1 

ಇದನ್ನೂ ಓದಿ.. ಪರೀಕ್ಷೆಗೆ ಮುಹೂರ್ತ ಫಿಕ್ಸ್; ಜು.1ರಿಂದ 15ರೊಳಗೆ 10 ಮತ್ತು 12ನೇ ತರಗತಿ ಎಕ್ಸಾಂ

ಬೆಂಗಳೂರು ನಗರದಲ್ಲಿನ ಹೊಸ ಪ್ರಕರಣಗಳು ಆತಂಕಕಾರಿ ವಿಚಾರವಾಗಿದ್ದರೆ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ, ಉತ್ತರಕನ್ನಡ ಜಿಲ್ಲೆ ಭಟ್ಕಳದ ಪ್ರಕರಣಗಳೂ ಸವಾಲು ಎಂಬಂತಾಗಿದೆ. ಅಹಮದಾಬಾದ್ ಪ್ರಯಾಣವು ಚಿತ್ರದುರ್ಗದಲ್ಲಿನ ಸೋಂಕಿತರ ಪ್ರಯಾಣ ಹಿಸ್ಟರಿ ಮೂಲವಾಗಿದೆ.

ಇದನ್ನೂ ಓದಿ.. ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ 

 

Related posts