ಪಿಜಿ ಖಾಲಿಮಾಡದಂತೆ ನೋಡಿಕೊಳ್ಳಿ.. ಬಾಡಿಗೆ ವಸೂಲಿ ಮಾಡಿದರೆ ಎಚ್ಚರಿಕೆ ಕೊಡಿ.. ಪೊಲೀಸರಿಗೆ ಕಮೀಷನರ್ ಆದೇಶ

ಬೆಂಗಳೂರು: ಕೊರೋನಾ ನಿಯಂತ್ರಣ ಹಾಗೂ  ಸಂಬಂಧ ದೇಶಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದ್ರೆ ಬೆಂಗಳೂರಿನ ಹಲವೆಡೆ ಲಾಕ್ ಡೌನ್ ರೀತಿಯ ಪರಿಸ್ಥಿತಿ ಕಂಡು ಬಂದಿಲ್ಲ. ಕೆಲವೆಡೆ ರಸ್ತೆಗಿಳಿದ ಮಂದಿಗೆ ಲಾಠಿ ಪ್ರಹಾರ ಮೂಲಕ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಈ ಬಗ್ಗೆ  ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶದಲ್ಲಿ ಮಾರ್ಪಾಡು ತರಲಾಯಿತು. ಅಷ್ಟೇ ಅಲ್ಲ ಲಾಕ್ ಡೌನ್ ಪರಿಪೂರ್ಣ ಜಾರಿ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಪೊಲೀಸ್ ಸಿಬ್ಬಂದಿಗೆ ಕೆಲ ಸೂತ್ರಗಳನ್ನೂ ಹೇಳಿಕೊಟ್ಟಿದ್ದಾರೆ.

ಇದನ್ನೂ ಓದಿ.. ಒಂದು ತಿಂಗಳ ಕಾಲ ಮನೆ ಬಾಡಿಗೆ ವಿನಾಯಿತಿ ; ಕೇಂದ್ರದ ಸೂಚನೆ 

ಪೊಲೀಸ್ ಆಯುಕ್ತರ ಸೂಚನೆಗಳು

  • ಹಾಲು, ಪೆಪರ್, ತರಕಾರಿ ವಿಒತ್ತರಿಸುವ ಮತ್ತು ಎಟಿಎಂಗೆ ಹಣ ತುಂಬುವ ವಾಹನಗಳಿಗೆ ಅಡ್ಡಿಯಾಗದಂತೆ ನೋಡಿಲೊಳ್ಳಬೇಕು. ತರಕಾರಿ, ದಿನ, ಹಣ್ಣು ಮತ್ತು ದಿನನಿತ್ಯದ ಅಂಗಡಿಗಳಲ್ಲಿ ಸೋಷಿಯಲ್ ಡಿಸ್ಟೇನ್ಸ್ ನ್ನು ನಿರ್ವಹಣೆ ಮಾಡಲು  ಪೈಂಟಿಂಗ್ ಮೂಲಕವೇ ವೃತ್ತ ಮಾಡಿ ಅದನ್ನು ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
  • ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗ ಸ್ಥಾಪಿಸಿ , ಅಧಿಕಾರಿಗಳನ್ನು ನಿಯೋಜಿಸಬೇಕು, ಜನ ಸಮಸ್ಯೆ ಹೇಳಿಕೊಂಡು ಬಂದಾಗ ಅವರೊಂದಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೆಳಹಂತದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಎಸಿಪಿ, ಡಿಸಿಪಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಬೇಕು.
     
  • ಎಲ್ಲಾ ಠಾಣೆಗಳಲ್ಲಿ ಸಂಚಾರಿ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ರಸ್ತೆಗಳನ್ನು ಮುಚ್ಚಬೇಕು. ಜನ ಸಂಚರಿಸದಂತೆ ಎಚ್ಚರಿಕೆ ವಹಿಸಬೇಕು.
  • ನಾಳೆಯಿಂದ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಿ ಲಾಕ್ ಡೌನ್ ಅವಧಿ ಮುಗಿಯುವವರೆಗು ಬಿಡಬೇಡಿ. ಎನ್ ಡಿ ಎಂ ಎ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ತಿಳುವಳಿಕೆ ನೀಡಿ.
  • ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ಜೊತೆಯಲ್ಲಿ ಕೆಲಸ ಮಾಡಬೇಕು. ಅಗತ್ಯವಿರುವಲ್ಲಿ  ಕಡೆ ವಿಡಿಯೋ ರೆರ್ಕಾಡ್ ಮಾಡಬೇಕು.
  • ತುರ್ತು ಸೇವೆಗಾಗಿ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಪಾಸ್ ಗಳು ದುರುಪಯೋಗದಂತೆ ಡಿಸಿಪಿಗಳು, ಎಸಿಪಿಗಳು ಗಮನ ಹರಿಸಬೇಕು. ಊಟ ಸರಬರಾಜು, ದಿನಸಿ ಅಂಗಡಿಗಳಿಗೆ, ಗ್ರಾಮೀಣ ಭಾಗದಿಂದ ತರಕಾರಿ ತಂದು ಮಾರಾಟ ಮಾಡುವವರಿಗೆ ಮಾತ್ರ ಪಾಸ್ ಗಳನ್ನು ನೀಡಬೇಕು.
  • ನೋ ಲಾಠಿ ಬಂದೋಬಸ್ತ್ ಮುಂದುವರೆಸಿ,
  • ಕೆಲವು ಪಿಜಿಗಳಲ್ಲಿ ತೊಂದರೆ ಕೊಡುತ್ತಿರುವುದು ಕಂಡು ಬಂದಿದೆ, ಅಂಥವರಿಗೆ ಎಚ್ಚರಿಕೆ ನೀಡಬೇಕು. ಮನೆ ಮಾಲೀಕರು ಬಾಡಿಗೆದಾರರಿಗೆ ತೊಂದರೆ ಕೊಡುವುದನ್ನು ಮಾಡದಂತೆ ಎಚ್ಚರಿಕೆ ನೀಡಬೇಕು.
  • ಈಗಾಗಲೇ ಸಂಚಾರಿ ಪೊಲೀಸರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಹನ್ನೆರೆಡು ಗಂಟೆ ಕೆಲಸ ಮಾಡುತ್ತಿದ್ದರೆ ಅವರಿಗೆ ವಿಶ್ರಾಂತಿ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಸೋಂಕು
  • ಡಯಾಲಿಸ್, ಕಿಮೋಥೆರಪಿ, ಹೃದಯಾಘಾತ ಸೇರಿದಂತೆ ಇತರ ತುರ್ತು ಆರೋಗ್ಯ ಸಂದರ್ಭದಲ್ಲಿ ಹೋಯ್ಸಳ ವಾಹನಗಳು ಖುದ್ದಾಗಿ ಹೋಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ದೂರ ಇದ್ದರೆ, ಬದಲಿ ವಾಹನದ ವ್ಯವಸ್ಥೆ ಮಾಡಬೇಕು.
  • ಮುಂಜಾನೆ ಚೆಡ್ಡಿಹಾಕಿಕೊಂಡು, ಶೂ ಹಾಕಿಕೊಂಡು ವಾಕಿಂಗ್ ಮಾಡುವವರಿಗೆ ಒಳ್ಳೆಯ ಮಾತಿನಲ್ಲಿ ಎಚ್ಚರಿಕೆ ಕೊಟ್ಟು ಕಳುಹಿಸಬೇಕು.
  • ಹೊರ ರಾಜ್ಯಗಳ ಜನರು ಬಂದು ಸಮಸ್ಯೆ ಹೇಳಿಕೊಂಡರೆ ಸಮಾಧಾನದಿಂದ ಕೇಳಿ ಬಗೆ ಹರಿಸಬೇಕು. ಠಾಣೆ ಮಟ್ಟದಲ್ಲಿ ಸಾಧ್ಯವಾಗದಿದ್ದರೆ ಡಿಸಿಪಿಗಳ ಗಮನಕ್ಕೆ ತರಬೇಕು, ಅಲ್ಲೂ ಸಾಧ್ಯವಾಗದಿದ್ದರೆ ಪೊಲೀಸ್ ಆಯುಕ್ತರ ಗಮನಕ್ಕೆ ತರಬೇಕು.
  • ದಾನಿಗಳ ಸೇವೆಯನ್ನು ಗೌರವಯುತವಾಗಿ ಸ್ವೀಕರಿಸಿ ಕಳುಹಿಸಬೇಕು. ಅನಗತ್ಯವಾಗಿ ಫೋಟೋ ಸೆಷನ್ಸ್ ನಡೆಸಿ ಪ್ರಚಾರದ ಸರಕನ್ನಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬಾರದು.
  • ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿ ಸಿಎಆರ್, ಕೆಎಸ್‍ಆರ್ ಪಿ ಕ್ವಾಟ್ರಸ್‍ಗಳನ್ನು ಸ್ವಚ್ಚಗೊಳಿಸುವ ಕೆಲಸ ಮಾಡಿಸಬೇಕು.

ಪೊಲೀಸ್ ಸಿಬ್ಬಂದಿಗೆ ಸಿಬ್ಬಂದಿಗಳಿಗೆ ದಾನಿಗಳಿಂದ ಸೋಂಕು ತಡೆಯುವ ಸಲಕರಣೆಗಳನ್ನು ಒದಗಿಸಬೇಕು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ.. 
ಲಾಕ್ ಡೌನ್ ವಿಸ್ತರಣೆಯಾಗುತ್ತಾ? ಏನಿದು ಗೊಂದಲ: ಕೇಂದ್ರದ ಸ್ಪಷ್ಟನೆ ಏನು?

Related posts