ತರಾತುರಿಯಲ್ಲಿ ಶಾಲೆಗಳ ಆರಂಭ ಇಲ್ಲ; ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು: ಕೊರೋನಾ ವೈರಾಣು ಸೋಂಕಿನ ಭೀತಿ ಇನ್ನೂ ದೂರ ಸರಿದಿಲ್ಲ. ಅದಾಗಲೇ ಶಾಲಾ ಕಾಲೇಜು ಪುನರಾರಂಭಕ್ಕೆ ಪ್ರಕ್ರಿಯೆ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸರ್ಕಾರದ ಈ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಈಗಿನ್ನೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚತ್ತಲೇ ಇವೆ. ಹೀಗಿರುವಾಗ ತರಾತುರಿಯಲ್ಲಿ ಶಾಲೆಗಳ ಆರಂಭ ಬೇಡ ಎಂದು ಪೋಷಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಇದೇ ವೇಳೆ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂಬ ಅಭಿಯಾನ ಸಾಗಿದ್ದು ಸರ್ಕಾರದ ವಿರುದ್ಧ ಅಭಿಪ್ರಾಯಾಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ನಡುವೆ, ಶಾಲೆಗಳ ಆರಂಭ ಕುರಿತು ಸರ್ಕಾರ ತರಾತುರಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಫೇಸ್ ಬುಕ್’ನಲ್ಲಿ ಸಂದೇಶ ಪೋಸ್ಟ್ ಮಾಡಿರುವ ಅವರು ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಆ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದವರು ಹೇಳಿದ್ದಾರೆ.

ಸಚಿವರ ಈ ಸ್ಪಷ್ಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಸಾಗಿದೆ. ಫೇಸ್ಬುಕ್’ನಲ್ಲಿ ಹಲವಾರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಚಿವರ ಪೋಸ್ಟ್ ಹಾಗೂ ಸಾರ್ವಜನಿಕರ ಕಾಮೆಂಟ್ ಹೀಗಿದೆ ನೋಡಿ..

ಇದನ್ನೂ ಓದಿ.. ಇನ್ನೂ ಎರಡು ತಿಂಗಳು ಶಾಲೆ ಆರಂಭ ಬೇಡ; ಸರ್ಕಾರಕ್ಕೆ ಪ್ರತಿಪಕ್ಷ ಸಲಹೆ 

 

Related posts