ಕರುನಾಡಲ್ಲಿ ಕೊರೋನಾ ಸವಾರಿ; ಮತ್ತೆ 267 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸವಾರಿ ಆತಂಕಕಾರಿ ರೀತಿಯಲ್ಲಿ ಮುಂದುವರಿದಿದ್ದು, ಇಂದು ಮತ್ತೆ 267 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಸಂಜೆಯಿಂದ ಇಂದು ಸಂಜೆವರೆಗಿನ ಕೊರೋನಾ ಕುರಿತ ಬೆಳವಣಿಗೆಗಳತ್ತ ಬೆಳಕು ಚೆಲ್ಲಿರುವ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 267 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದನ್ನು ವರದಿ ಮಾಡಿದೆ. ಕಲಬುರಗಿಯಲ್ಲಿ 105 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 62 ಕೇಸ್’ಗಳು ವರದಿಯಾಗಿವೆ.

  • ಕಲಬುರಗಿ : 105 ಹೊಸ ಕೇಸ್
  • ಉಡುಪಿ : 62 ಹೊಸ ಕೇಸ್
  • ರಾಯಚೂರು : 35 ಹೊಸ ಕೇಸ್
  • ಬೆಂಗಳೂರು ನಗರ : 20 ಹೊಸ ಕೇಸ್
  • ಮಂಡ್ಯ : 13 ಹೊಸ ಕೇಸ್
  • ಯಾದಗಿರಿ : 9 ಹೊಸ ಕೇಸ್
  • ವಿಜಯಪುರ : 6 ಹೊಸ ಕೇಸ್
  • ದಾವಣಗೆರೆ : 3 ಹೊಸ ಕೇಸ್
  • ದಕ್ಷಿಣಕನ್ನಡ : 2 ಹೊಸ ಕೇಸ್
  • ಮೈಸೂರು : 2 ಹೊಸ ಕೇಸ್
  • ಬಾಗಲಕೋಟೆ : 2 ಹೊಸ ಕೇಸ್
  • ಶಿವಮೊಗ್ಗ : 2 ಹೊಸ ಕೇಸ್
  • ಹಾಸನ : 1 ಹೊಸ ಕೇಸ್
  • ಬಳ್ಳಾರಿ : 1 ಹೊಸ ಕೇಸ್
  • ಧಾರವಾಡ : 1 ಹೊಸ ಕೇಸ್
  • ಕೋಲಾರ : 2 ಹೊಸ ಕೇಸ್
  • ಬೆಂಗಳೂರು ಗ್ರಾಮಾಂತರ : 1 ಹೊಸ ಕೇಸ್

ಈ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾದವರ ಸಂಖ್ಯೆ 4063 ಗೆ ಏರಿಕೆಯಾಗಿದೆ. ಈ ಪೈಕಿ 1504 ಮಂದಿ ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.

ಇದನ್ನೂ ಓದಿ.. ತರಾತುರಿಯಲ್ಲಿ ಶಾಲೆಗಳ ಆರಂಭ ಇಲ್ಲ; ಶಿಕ್ಷಣ ಸಚಿವರ ಸ್ಪಷ್ಟನೆ 

 

Related posts