ಆಗಸ್ಟ್-ಸೆಪ್ಟೆಂಬರ್’ನಲ್ಲಿ ಕಾಲೇಜ್ ಆರಂಭ ; ವೇಳಾಪಟ್ಟಿ ಹೀಗಿದೆ

ದೆಹಲಿ: ಕೊರೊನಾ ಕಾರಣಕ್ಕಾಗಿ ಲಾಕ್‍ಡೌನ್ ಜಾರುಯಲ್ಲಿದ್ದು ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಳೆದ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಯಾವಾಗ ನಡೆಯುತ್ತೆ? ಮುಂದಿನ ಪ್ರವೇಶ ಪ್ರಕ್ರಿಯೆ ಆರಂಭವಾಗುವುದು ಯಾವಾಗ ಎಂಬಿತ್ಯಾದಿ ಗೊಂದಲಗಳೂ ಕಾಡುತ್ತಿದೆ.

ಈ ನಡುವೆ  ವಾರ್ಷಿಕ ಪರೀಕ್ಷೆ ಸಮಯ ಮತ್ತು 2020-21ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಯುಜಿಸಿ ಬಿಡುಗಡೆಗೊಳಿಸಿದೆ.

ಇದನ್ನೂ ಓದಿ.. ಮಲ್ಯ ಸಾಲ ಮನ್ನಾ ವಿಚಾರ; ಕೈ ನಾಯಕರ ಆರೋಪಕ್ಕೆ ಕೇಂದ್ರದ ಉತ್ತರ

ಯುಜಿಸಿ ಆದೇಶದಂತೆ ಕಾಲೇಜುಗಳು 2 ತಿಂಗಳು ತಡವಾಗಿ ಆರಂಭವಾಗಲಿದೆ. ಅಂದರೆ ಈಗಾಗಲೇ ಪದವಿ ಓದುತ್ತಿರುವವರ ಸೆಮಿಸ್ಟರ್ ಪರೀಕ್ಷೆ ಜುಲೈ ತಿಂಗಳಲ್ಲಿ ನಡೆದು ಆಗಸ್ಟ್’ನಲ್ಲಿ ತರಗತಿಗಳು ಆರಂಭವಾಗಲಿದೆ. ಹೊಸದಾಗಿ ಪ್ರವೇಶ ಪಡೆದವರಿಗೆ ಸೆಪ್ಟೆಂಬರ್’ನಲ್ಲಿ ತರಗತಿ ಆರಂಭವಾಗಲಿದೆ. ಎಂ.ಫಿಲ್, ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ.

2020-21 ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹೀಗಿದೆ:

  • 01-08-2020 ರಿಂದ 31-08-2010 : ದಾಖಲಾತಿ ಆರಂಭ
  • 01-08-2020 ಹಳೆಯ ವಿದ್ಯಾರ್ಥಿಗಳ ಸೆಮಿಸ್ಟರ್ ಪುನರಾರಂಭ
  •  01-09-2020: ಹೊಸದಾಗಿ ಪ್ರವೇಶ ಪಡೆದವರಿಗೆ ತರಗತಿ ಆರಂಭ
  • 01-01-2021 ರಿಂದ 25-01-2021: ಪರೀಕ್ಷಾ ಅವಧಿ
  • 27-01-2021 : ಕಾಲೇಜು ಪುನರಾರಂಭ
  • 25-05-2021: ಕೊನೆಯ ದಿನದ ತರಗತಿ
  • 26-05-2021 ರಿಂದ 25-06-2021: ಪರೀಕ್ಷಾ ಅವಧಿ
  •  01-07-2021 ರಿಂದ 30-07-2021: ರಜೆ ಅವಧಿ
  • 02-08-2021 : 2021-22 ಹೊಸ ಶೈಕ್ಷಣಿಕ ವರ್ಷ ಆರಂಭ 

ಇದನ್ನೂ ಓದಿ.. ಊರಿಗೆ ಹೋಗಬೇಕೆ..? ಸರ್ಕಾರದಿಂದ ಕೊನೆಗೂ ಗ್ರೀನ್ ಸಿಗ್ನಲ್ 

 

Related posts