ನಳಪಾಕ ಪ್ರವೀಣರು ಏನು ಮಾಡಿದರೂ ಸ್ವಾದಿಷ್ಟ. ಆ ಪಟ್ಟಿಯಲ್ಲಿದೆ ಅನಾನಾಸು ದೋಸೆ. ಅನಾನಾಸು ಕೇವಲ ಹಣ್ಣಲ್ಲ, ಜ್ಯುಸ್ ಅಷ್ಟೇ ಅಲ್ಲ, ತಿಂಡಿ ತಿನಿಸಿಗೂ ಈ ಹಣ್ಣು ಸೂಕ್ತ. ಇದೇ ಹಣ್ಣಿನ ದೋಸೆ ಕೂಡಾ ಬಲು ರುಚಿ. ಇದನ್ನು ಮಾಡುವ ವಿಧಾನವೂ ಸುಲಭ..
ಬೇಕಾದ ಸಾಮಾಗ್ರಿ:
- ದೋಸೆ ಅಕ್ಕಿ 2 ಕಪ್
- ಅನಾನಾಸು 1 ಕಪ್
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಅನಾನಸ್, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಬೇಕು. ರುಚಿಯಾದ ಆರೋಗ್ಯವಾದ ಅನನಾಸ್ ದೋಸೆ ಸಿದ್ಧವಾಗುತ್ತದೆ. ಇದನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.
ಇದನ್ನೂ ಮಾಡಿ ನೋಡಿ.. ಮಾವಿನ ದೋಸೆಯ ಸವಿ.. ಆಹಾ..