ಮಾವಿನ ದೋಸೆಯ ಸವಿ.. ಆಹಾ..

ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಖಾದ್ಯಗಳ ಪಟ್ಟಿಯೂ ಬೆಳೆಯುತ್ತಿವೆ. ಆ ಆ ಪಟ್ಟಿಗೆ ಮಾವಿನ ದೋಸೆ ಸೇರ್ಪಡೆಯಾಗಿದೆ.
ಮಾವು ಯಾರಿಗೆ ತಾನೇ ಇಷ್ಟವಿಲ್ಲ? ಅದರ ಖಾದ್ಯಗಳೂ ಅಷ್ಟೇ ರುಚಿ. ಅದರಲ್ಲೂ ಮಾವಿನ ದೋಸೆಯ ಸವಿ.. ಆಹಾ.. ಇದನ್ನು ಮಾಡುವ ವಿಧಾನವೂ ಬಲು ಸುಲಭ

ಬೇಕಾದ ಸಾಮಾಗ್ರಿ

  • ದೋಸೆ ಅಕ್ಕಿ 2 ಕಪ್
  • ಮಾವಿನಹಣ್ಣು 1 ಕಪ್
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಮಾವಿನಹಣ್ಣು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಬೇಕು. ರುಚಿಯಾದ ಆರೋಗ್ಯವಾದ ಮಾವಿನಹಣ್ಣು ದೋಸೆ ಸಿದ್ಧವಾಗುತ್ತದೆ. ಇದನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು.

ಇದನ್ನೂ ಮಾಡಿ ನೋಡಿ.. ‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನ ಬಲು ಸುಲಭ

 

Related posts