ದೆಹಲಿ: ಕೊರೋನಾ ಆತಂಕದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ರಿಲೀಫ್ ಕೊಟ್ಟಿದೆ. ಕೊರೋನಾ ಕಾರಣಕ್ಕಾಗಿ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣಕ್ಕೆ ವಿದ್ಯುತ್ ಪಾವತಿಯಿಂದಲೂ ವಿನಾಯಿತಿ ನೀಡಿದೆ. ಆದರೆ ಅಂತಿಮವಾಗಿ ಇದನ್ನು ರಾಜ್ಯ ಸರ್ಕಾರವೇ ನಿರ್ಧರಿಸಬೇಕಿದೆ
ಶುಕ್ರವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಬ್ಯಾಂಕುಗಳಲ್ಲಿ ಪಡೆದಿರುವ ಸಾಲದ ಕಂತು ಕಟ್ಟುವುದಕ್ಕೆ ವಿನಾಯಿತಿ ಪ್ರಕಟಿಸಿದೆ. ಜೂನ್ ತಿಂಗಳವರೆಗೆ ಸಾಲದ ಕಂತನ್ನು ಕಟ್ಟುವಂತಿಲ್ಲ ಎಂದು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜನ ನಿರಾಳರಾಗಿದ್ದಾರೆ. ಈ ನಡುವೆ ವಿದ್ಯುತ್, ಕುಡಿಯುವ ನೀರು ಸಹಿತ ಪಬಲಿಕ್ ಯುಟಿಲಿಟಿ ಬಿಲ್ ಪಾವತಿಗೂ ವಿನಾಯಿತಿ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಸಾರ್ವಜನಿಕರ ಈ ಕೂಗಿಗೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಇದನ್ನೂ ಓದಿ..
ಕೊರೋನಾ ನರ್ತನ; ಮತ್ತಷ್ಟು ಪ್ರಕರಣಗಳು ಪತ್ತೆ
ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರ ಹಾಗೂ ಎಲ್ಲ ಎಸ್ಕಾಂಗಳಿಗೆ ಕೇಂದ್ರ ಇಂಧನ ಸಚಿವಾಲಯ ಸೂಚಿಸಿದೆ. ಈ ಬಿಲ್ ಪಾವತಿ 3 ತಿಂಗಳು ವಿಳಂಬವಾಗುವ ಕಾರಣಕ್ಕಾಗಿ ದಂಡ ವಿಧಿಸುವಂತಿಲ್ಲ ಎಂದು ಸೂಚಿಸಿದೆ. ಆದ್ರೆ ವಿದ್ಯುತ್ ಕಂಪೆನಿಗಳು ರಾಜ್ಯ ಸರ್ಕಾರದ ಸುಪರ್ದಿಯಲ್ಲಿದ್ದು ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇದೆ ವೇಳೆ ಲಾಕ್ ಡೌನ್’ನಿಂದಾಗಿ ವರ್ತಕರು ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಬಿಬಿಎಂಪಿ ಹಾಗೂ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮಳಿಗೆ ಹೊಂದಿರುವ ಬಾಡಿಗೆದಾರರು ಮೂರು ತಿಂಗಳ ಬಾಡಿಗೆ ವಿನಾಯ್ತಿ ಕೋರಿದ್ದಾರೆ. ಇದಕ್ಕೆ ಬಿಬಿಎಂಪಿ ಕೂಡಾ ಸ್ಪಂದಿಸಲಿದೆ ಎಂದು ಮೂಲಗಳು ತಿಳಿಸಿವೆ.