ಶರವೇಗದಲ್ಲಿ ಹರಡುತ್ತಿರುವ ಕೊರೋನಾ; ಮುಂದಿದೆ ಆತಂಕದ ಕ್ಷಣ

ದೆಹಲಿ: ಇಡೀ ಜಗತ್ತನ್ನು ಚೈನಾ ಮಾಲ್ ಕೊರೋನಾ ವೈರಾಣು ಇದೀಗ ಸ್ಮಶಾನವನ್ನಾಗಿಸುತ್ತಿದೆಯೇ ಎಂಬ ಆತಂಕ ಇದೀಗ ಕಾಡಲಾರಂಭಿಸಿದೆ.  , ವೈರಾಣು ಶರವೇಗದಲ್ಲಿ ಹರಡುತ್ತಿರುವುದನ್ನು ಗಮನಿಸಿದರೆ ಈ ಆತಂಕ ಸಹಜವಾಗಿಯೇ ಕಾಡುತ್ತಿದೆ.

ಕೊರೋನಾ ಸೋಂಕಿತರ ವಿಚಾರ ಗಮನಿಸಿದರೆ ಕಳೆದ ಕೆಲವು ತಿಂಗಳ ಅಂಕಿ ಅಂಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಳೆದೆರಡು ದಿನಗಳಲ್ಲಿ ಸೋಂಕಿನ ಸಂಖ್ಯೆ ಗೊತ್ತಾಗಿದೆ. ಅಂದರೆ ಕಳೆದೊಂದೆ ದಿನದಲ್ಲಿ ಜಗತ್ತಿನ ವಿವಿದೆಡೆ ಸುಮಾರು 3 ಸಾವಿರ ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ..
ಮಂಗಳೂರು ಸುತ್ತಮುತ್ತ ಕಿಲ್ಲರ್ ಕೊರೋನಾ ಅಟ್ಟಹಾಸ

ಕಳೆದ ಡಿಸೇಂಬರ್ ನಲ್ಲಿ ಚೀನಾದ ವುಹಾನಿನಲ್ಲಿ ಕಾಣಿಸಿಕೊಂಡ ಕೋವಿಡ್ 19 ಸೋಂಕು 65 ದಿನಗಳಲ್ಲಿ 1 ಲಕ್ಷ ಜನರಲ್ಲಿ ಕಾಣಿಸಿಕೊಂಡಿತ್ತು. ಅನಂತರದ 10 ದಿನಗಳಲ್ಲಿ ಇದು ದುಪ್ಪಟ್ಟಾಗಿತ್ತು. ಆದರೆ ಇದೀಗ ಈ ಪ್ರಮಾಣ ಶರವೇಗದಲ್ಲಿ ಹೆಚ್ಚುತ್ತಿದ್ದು ಕಳೆದ 4 ದಿನಗಳಲ್ಲೇ ಸುಮಾರು 3 ಲಕ್ಷ ಜನರಿಗೆ ಈ ವೈರಾಣು ಅಂಟಿಕೊಂಡಿರುವುದು ಗೊತ್ತಾಗಿದೆ. ಐರೋಪ್ಯ ರಾಷ್ಟ್ರಗಳಲ್ಲೇ 3 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಪೈಕಿ ಇಟೆಲಿ ಮತ್ತು ಸ್ಪೇನ್ ದೇಶಗಳಲ್ಲಿ ಅತೀ ಹೆಚ್ಚು ಜನರು ಕೊರೋನಾಗೆ ಬಲಿಯಾಗುತ್ತಿದ್ದಾರೆ.

ಇದು ಭಾರತದಲ್ಲೂ ಆತಂಕ ಹೆಚ್ಚುವಂತೆ ಮಾಡಿದೆ. ಮೊದಲ ೫೦ ದಿನದಲ್ಲಿ 250 ಕೊರೋನಾ ಸೋಂಕಿತರ ಪಟ್ಟಿ ಇತ್ತು. ಈ ಪಟ್ಟಿಯಲ್ಲಿನ ಸಂಖ್ಯೆ ಒಂದೇ ಒಂದೇ ವಾರದಲ್ಲಿ ೯೦೦ ರ ಸಮೀಪಕ್ಕೇರ್ ಬಂದು ನಿಂತಿದೆ. ಶುಕ್ರವಾರ ಒಂದೇ ದಿನ 144ಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಕೇರಳ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಸೋಂಕು ಪತ್ತೆಯಾಗಿದೆ.

ಇದನ್ನೂ ಓದಿ.
ಕೊರೋನಾ ನಿತಂತ್ರನಾದ ಕೆಲಸ: ಶಾಸಕರೇ ಆಸ್ಪತ್ರೆಗೆ ದಾಖಲಾದರು

Related posts