ಆಗಸದಲ್ಲಿ ನೆರಳು ಬೆಳಕಿನಾಟ; ಸೂರ್ಯ ಗ್ರಹಣದ ಅಪೂರ್ವ ಸನ್ನಿವೇಶ

ಬೆಂಗಳೂರು: ನಭೋಮಂಡಲ ಇಂದು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಭಾನು ಭುವಿ ಚಂದ್ರ ನಡುವಿನ ನೆರಳು ಬೆಳಕಿನ ಆಟವನ್ನು ಜನ ಕಣ್ತುಂಬಿಕೊಂಡರು.

ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಇದಾಗಿದ್ದು ಬೆಳಿಗ್ಗೆ 10.04 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.38ರ ತನಕ ನೆರಳು ಬೆಳಕಿನಾಟಕ್ಕೆ ಸಾಕ್ಷಿಯಾಯಿತು. ವಿವಿಧ ದೇಶಗಳಲ್ಲಿ ವಿಭಿನ್ನ ಸಮಯದಲ್ಲಿ ಈ ಗ್ರಹಣ ಗೋಚರಿಸಿತು. ಭಾರತದಲ್ಲೂ ಬೇರೆಬೇರೆ ಸಮಯದಲ್ಲಿ ಗ್ರಹಣ ಆರಂಭ ಹಾಗೂ ವಿಮುಕ್ತಿತಾಯಿತು.

ಈ ನಡುವೆ ಗ್ರಹಣದ ಸಂದರ್ಭದಲ್ಲಿ ನಾಡಿನ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯಲಿಲ್ಲ. ಮೈಸೂರಿನ ಚಾಮುಂಡೇಶ್ವರಿ, ಧರ್ಮಸ್ಥಳ ಮಂಜುನಾಥ ಕ್ಷೇತ್ರ, ಕುಕ್ಕೆ ಸುಬ್ರಹ್ಮಣ್ಯ ದೇಗುಲ, ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ, ಪೊಳಲಿ ರಾಜರಾಜೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ್ಯಂತ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ರಾಜ್ಯ ರಾಧಾನಿ ಬೆಂಗಳೂರಿನ ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ದೊಡ್ಡ ಗಣಪತಿ, ಕೋಟೆ ಆಂಜನೇಯ ಸ್ವಾಮಿ, ಬನಶಂಕರಿ ದೇವಾಲಯ ಸಹಿತ ಬಹುತೇಕ ದೇಗುಲಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.

Related posts