ಬೆಂಗಳೂರು: ರಾಜ್ಯದಲ್ಲಿ ಮತ್ತೆ 10 ಕೊರೋನಾ ಪಾಸಿಟಿವ್ ವರದಿ ಸರ್ಕಾರದ ಕೈಸೇರಿದ್ದು, ಈ ಮಹಾಮಾರಿ ವೈರಸ್ ಹಾವಳಿ ದಿನೇ ದಿನೇ ಆತಂಕ ಹೆಚ್ಚಿಸಿದೆ. ಆದರೆ ಹೊಸ ಪ್ರಕರಣಗಳು ಅಲ್ಪ ಸಂಖ್ತೆಗೆ ಇಳಿಕೆಯಾಗಿರುವುದು ಸಮಾಧಾನದ ವಿಚಾರ.
ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನವರೆಗಿನ ಕೊರೋನಾ ವಿದ್ಯಮಾನಗಳ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ನಲ್ಲಿ ಸೋಂಕಿತರ ಬಗ್ಗೆ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.
ರಾಜ್ಯದಲ್ಲಿ 10 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಐದು ಜಿಲ್ಲೆಗಳಲ್ಲಿ ಹೊಸದಾಗಿ ಪಾಸಿಟಿವ್ ಕೇಸ್ಗಳನ್ನು ಪಟ್ಟಿ ಮಾಡಲಾಗಿದೆ.
◼️ ದಾವಣಗೆರೆ ಜಿಲ್ಲೆಯಲ್ಲಿ 3 ಕೇಸ್
◼️ ಕಲಬುರ್ಗಿ ಜಿಲ್ಲೆಯಲ್ಲಿ 1 ಕೇಸ್
◼️ ಬೀದರ್ ಜಿಲ್ಲೆಯಲ್ಲಿ 2, ಹಾವೇರಿ
◼️ಹಾವೇರಿ ಜಿಲ್ಲೆಯಲ್ಲಿ 1 ಕೇಸ್
◼️ಬಾಗಲಕೋಟೆ ಜಿಲ್ಲೆಯಲ್ಲಿ 1 ಕೇಸ್
◼️ವಿಜಯಪುರ ಜಿಲ್ಲೆಯಲ್ಲಿ 1 ಕೇಸ್
ಈ ಪೈಕಿ ಬಾಗಲಕೋಟೆ ಹಾಗೂ ಬನಹಟ್ಟಿಯಲ್ಲಿ ಸೋಕು ಪ್ರಕರಣ ಪತ್ತೆಯಾಗಿದೆ.
ಬಾನುವಾರ ಒಂದೇ ದಿನ ರಾಜ್ಯದಲ್ಲಿ 54 ಪ್ರಕರಣಗಳು ದಾಖಲಾಗಿ ಮೂಲಕ ರಾಜ್ಯದಲ್ಲಿ ಆತಂಕ ಹೆಚ್ಚಿಸಿತ್ತು. ಹಾಗಾಗಿ ಇಂದಿನ ಹೆಲ್ತ್ ಬುಲೆಟಿನ್ ಬಗ್ಗೆ ಸಹಜವಾಗಿಯೇ ಆತಂಕ ಕಾಡಿತ್ತು. ಆದರೆ ಇಂದು ಈ ಪ್ರಮಾಣ 10ಕ್ಕೆ ಇಳಿಯುವ ಮೂಲಕ ರಾಜ್ಯದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಇಂದು ಬೆಂಗಳೂರಿನಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಈ ನಡುವೆ, ಕರ್ನಾಟಕದಲ್ಲಿ ಈ ವರೆಗೆ ಕೊರೋನಾ ಸೋಂಕಿನಿಂದಾಗಿ 31 ರೋಗಿಗಳು ಮೃತಪಟ್ಟಿದ್ದಾರೆ. 422 ರೋಗಿಗಳು ಚಿಕಿತ್ಸೆ ಪಡೆದುಒ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.