‘ಅದ್ದೂರಿ’ ನಿರ್ದೇಶಕನ ಸರಳ ವಿವಾಹ; ‘ಕಿಸ್’ ವೀರನಿಗೆ ಶುಭಾಶಯಗಳ ಹೂಮಳೆ

ಬೆಂಗಳೂರು: ಕೊರೋನಾ ವೈರಾಣು ಹಾವಳಿ ಕಾರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ ಅದ್ದೂರಿ ಮದುವೆ ಸಮಾರಂಭಗಳಿಗೂ ನಿರ್ಬಂಧವಿದೆ. ಹಾಗಾಗಿ ಕನ್ನಡ ಸಿನಿಮಾ ರಂಗದ ನಿರ್ದೇಶಕ ಎ.ಪಿ.ಅರ್ಜುನ್ ವಿವಾಹ ಸರಳವಾಗಿಯೇ ನೆರವೇರಿದೆ.

ಪ್ರಸ್ತುತ ಕೊರೋನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್’ಡೌನ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈ ಮಾರ್ಗಸೂಚಿ ಉಲ್ಲಂಘನೆಯ ಆರೋಪದಿಂದ ದೂರ ಉಳಿಯುವ ಉದ್ದೇಶದಿಂದ ಎ.ಪಿ.ಅರ್ಜುನ್ ಅದ್ಧೂರಿ ವಿವಾಹದ ನಿರ್ಧಾರ ಕೈಗೊಳ್ಳಲೇ ಇಲ್ಲ.

ಇದನ್ನೂ ಓದಿ.. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವೀಡಿಯೋ ಕುತೂಹಲ

ಅಂಬಾರಿ ಖ್ಯಾತಿಯ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹಾಸನ ಮೂಲದ ಬಿ.ಆರ್.ಅನ್ನಪೂರ್ಣರನ್ನು ಇಂದು ನಾಗರಬಾವಿಯಲ್ಲಿರುವ ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ವಿವಾಹವಾದರು. ಸುಮಾರು 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅರ್ಜುನ್ ಮತ್ತು ಅನ್ನಪೂರ್ಣ ಜೋಡಿ ಸಪ್ತಪದಿ ತುಳಿದ ಸನ್ನಿವೇಶವನ್ನು ಸ್ಯಾಂಡಲ್‍ವುಡ್ ಕಲಾವಿದರು ಸಾಕ್ಷೀಕರಿಸಲು ಸಾಧ್ಯವಾಗಿಲ್ಲ. ಧ್ರುವ ಸರ್ಜಾ, ಹರಿ ಸಂತು, ವಿರಾಟ್ ಸೇರಿದಂತೆ ಅರ್ಜುನ್ ಆಪ್ತರಷ್ಟೇ ವಿವಾಹದಲ್ಲಿ ಭಾಗಿಯಾಗಿ ನವ ವಧೂ ವರಾರನಿಗೆ ಶುಭ ಹಾರೈಸಿದರು.

ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾದ ತಯಾರಿಯ ಬ್ಯುಸಿಯಲ್ಲಿರುವ ಅರ್ಜುನ್, ‘ಅದ್ಧೂರಿ’, ‘ಕಿಸ್’, ‘ಅಂಬಾರಿ’, ‘ಐರಾವತ’, ‘ರಾಟೆ’ ಸಿನಿಮಾಗಳ ನಿರ್ದೇಶನ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಾಗಿದ್ದಾರೆ. ಸಪ್ತಪದಿ ತುಳಿದ ಅರ್ಜುನ್’ಗೆ ಸಿನಿಮಾ ದಿಗ್ಗಜರನೇಕರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ.. ನರ್ಸ್’ಗೆ ಕರೆ ಮಾಡಿದ ಬಿ.ಎಸ್.ವೈ.. ಕುತೂಹಲಕಾರಿ ಸುದ್ದಿ 

 

Related posts