ಒಂದೇ ದಿನ 6,566 ಮಂದಿಗೆ ಸೋಂಕು; 194 ಮಂದಿ ಸಾವು

ದೆಹಲಿ: ನಹಾರಾಟದಲ್ಲಿ ಕೊರೋನಾ ವೈರಾಣು ಹಾವಳಿ ಸವಾಲಾಗಿ ಪರಿಣಮಿಸಿದ್ದು ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಗುರುವಾರಒಂದೇ ದಿನ 6,566 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ದೇಶದ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು 6,566 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವುದರೊಂದಿಗೆ ಕೊರೋನಾ ಕೇಸ್ ಸಂಖ್ಯೆ 1 ಲಕ್ಷ 58 ಸಾವಿರವನ್ನು ದಾಟಿದೆ.

ಇದೇ ವೇಳೆ ನಿನ್ನೆ ಒಂದೇ ದಿನದಲ್ಲಿ 194 ಮಂದಿ ಮೃತಪಟ್ಟಿದ್ದಾರೆಂದು ತಿಳಿಸಿದೆ. ಈ ಮೂಲಕ ಭಾರತದಲ್ಲಿ ಕೊರೋನಾಗೆ ಸಾವನ್ನಪ್ಪಿದವರ ಸಂಖ್ಯೆಯೂ ಸಾವಿನ ಸಂಖ್ಯೆ 4,531ಕ್ಕೆ ತಲುಪಿದೆ.

ಅತೀ ಹೆಚ್ಚು ಕೊರೋನಾ ಸೋಂಕಿತ ರಾಜ್ಯಗಳು;

  • ಮಹಾರಾಷ್ಟ್ರ – 56,948 ಕೇಸ್
  • ತಮಿಳುನಾಡು – 18,545 ಕೇಸ್
  • ಗುಜರಾತ್ – 15,195, ಕೇಸ್
  • ದೆಹಲಿ – 15,257 ಕೇಸ್

ಇದನ್ನೂ ಓದಿ.. ಲಾಕ್’ಡೌನ್-5.0; ಮೇ 31ರ ಮೋದಿ ಮಾತಿನತ್ತ ಎಲ್ಲರ ಚಿತ್ತ

Related posts