ಲಾಕ್’ಡೌನ್-5.0; ಮೇ 31ರ ಮೋದಿ ಮಾತಿನತ್ತ ಎಲ್ಲರ ಚಿತ್ತ

ದೆಹಲಿ: ಲಾಕ್’ಡೌನ್ ಜಾರಿಯಲ್ಲಿದ್ದರೂ ಕೊರೋನಾ ಅಟ್ಟಹಾಸ ನಿಂತಿಲ್ಲ. ಹಾಗಾಗಿ ಐದನೇ ಅವಧಿಗೆ ಲಾಕ್’ಡೌನ್ ವಿಸ್ತರಣೆಯಾಗುತ್ತಾ ಎಂಬ ಸಂಶಯ ಮೂಡಿದೆ.

ಪ್ರಸ್ತುತ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್​ಡೌನ್ ಮೇ 31ರಂದು ಮುಕ್ತಾಯವಾಗಲಿದೆ. ಹಾಗಾಗಿ ಅಂದೇ ಪಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಲಾಕ್​ಡೌನ್​​ ವಿಸ್ತರಣೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ.

ಒಂದು ಮೂಲದ ಪ್ರಕಾರ ಐದನೇ ಹಂತದಲ್ಲಿ ಜೂನ್ 15 ರವರೆಗೂ ಲಾಕ್​ಡೌನ್​​ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಲಾಕ್​ಡೌನ್​​ ಸಂದರ್ಭದಲ್ಲಿ ಮತ್ತಷ್ಟು ಸಡಿಲಿಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಲಾಕ್’ಡೌನ್ ಕುರಿತಂತೆ ಈಗಾಗಲೇ ಆದೇಶಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ಲಾಕ್’ಡೌನ್ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಕುರಿತಂತೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’ 

 

Related posts