ಕಣಿವೆ ರಾಜ್ಯದಲ್ಲಿ ಗುಂಡಿನ‌ ಕಾಳಗ: ಸೇನಾ ಕಾರ್ಯಾಚರಣೆಯಲ್ಲಿ ಐವರು ಉಗ್ರರ ಹತ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದದಲ್ಲಿ ಉಗ್ರರ ವಿರುದ್ದ ಸೇನೆ ಭರ್ಜರಿ ಕಾದಾಟ ನಡೆಸಿದೆ. ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಲಷ್ಕರ್ ಭಯೋತ್ಪಾದಕರನ್ನು ಯೋಧರು ಹತ್ಯೆ ಮಾಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಉಗ್ರರು ಅವಿತು ಭಾರೀ ವಿಧ್ವಂಸಕ್ಕೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಕಳೆಹಾಕಿರುವ ಭದ್ರತಾ ಪಡೆ ಬೆಳ್ಳಂಬೆಳಿಗ್ಗೆಯೇ ಕಾರ್ಯಾಚರಣೆಗಿಳಿದಿದೆ. ಕುಲ್ಗಾಮ್‌ನಲ್ಲಿ ಉಗ್ರರು ಅವಿತಿದ್ದ ಸ್ಥಳಕ್ಕೆ ಲಗ್ಗೆ ಹಾಕಿದ ಯೋಧರತ್ತ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ‌ ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ.

Related posts