ತೇಜಸ್ ಯುದ್ಧವಿಮಾನ ಪತನ; ದುಬೈ ಏರೋ ಶೋ ವೇಳೆ ದುರಂತ

ದುಬೈ: ವಿಶ್ವದ ಗಮನ ಸೆಳೆದಿರುವ ದುಬೈ ಏರೋ ಶೋ ಕಾರ್ಯಕ್ರಮದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ದುರಂತಕ್ಕೆ ಗುರಿಯಾಗಿದೆ.

ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರದರ್ಶನ ಹಾರಾಟ ನಡೆಸುತ್ತಿದ್ದ ತೇಜಸ್, ತಕ್ಷಣವೇ ಬೆಂಕಿಗಾಹುತಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಸ್ಫೋಟದ ನಂತರ ಸ್ಥಳದೆಲ್ಲೆ ದಟ್ಟವಾದ ಕಪ್ಪು ಹೊಗೆ ಆವರಿಸಿತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ನಿರ್ಮಿಸಿದ LCA ತೇಜಸ್ ಯುದ್ಧ ವಿಮಾನವು ಪತನಗೊಂಡಿರುವುದಾಗಿ ತಿಳಿದುಬಂದಿದೆ.

ಪೈಲಟ್‌ನ ಸ್ಥಿತಿ, ಹಾಗೇ ಸ್ಫೋಟದ ನಿಖರ ಕಾರಣ ಕುರಿತು ಭಾರತೀಯ ವಾಯುಪಡೆ ಮೂಲಗಳು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

Related posts