ಅತ್ತಿಬೆಲೆ ಪಟಾಕಿ ದುರಂತ; ಪೊಲೀಸರಿಂದ ಗೋದಾಮು ಮಾಲೀಕರ ಪುತ್ರನ ವಶ

ಬೆಂಗಳೂರು ರಾಜಧಾನಿ ಹೊರವಲಯದ ಆನೇಕಲ್ ಸಮೀಪದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದಅಗ್ನಿ ದುರಂತ ಭಾರೀ ಸಾವು ನೋವಿಗೆ ಕಾರಣವಾಗಿದೆ. ಶನಿವಾರ ಅಪರಾಹ್ನ 3.30ರ ಸುಮಾರಿಗೆ ಲಾರಿಯಿಂದ ಪಟಾಕಿ ಇಳಿಸುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ಮೃತಪಟ್ಟವರು ಕಾರ್ಮಿಕರಾಗಿದ್ದು ಬಹುತೇಕರು ಮಂದಿ ತಮಿಳುನಾಡಿನ ಶಿವಕಾಶಿ ಮೂಲದವರೆನ್ನಲಾಗಿದೆ. ಗೋದಾಮಿನ ನಿರ್ಲಕ್ಷ್ಯದಿಂದ ದುರಂತಕ್ಕೆ ಸಂಭವಿಸಿದೆ. ಅಗ್ನಿಶಾಮಕ ನಿಯಮ ಉಲ್ಲಂಘನೆಯು ಈ ಅನಾಹತಕ್ಕೆ ಕಾರಣ ಎನ್ನಲಾಗಿದೆ. ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಇದೇ ವೇಳೆ, ಪಟಾಕಿ ರವಾನೆ ಮಾಡಿದವರು ಯಾರು? ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಗೋದಾಮು ಮಾಲಿಕರ ಪುತ್ರ ನವೀನ್ ಎಂಬವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಗಾಗಿ ಚಿಕಿತ್ಸೆ ಪಡೆದಿದ್ದಾರೆ. ನವೀನ್ ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts