ಅಧಿಕಾರಿಗೆ ಧಮ್ಕಿ ಪ್ರಕರಣ; ಭದ್ರಾವತಿ ಪೊಲೀಸರಿಂದ ಮೂವರ ಬಂಧನ

ಶಿವಮೊಗ್ಗ: ಭದ್ರಾವತಿ ಬಳಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯಕ್ಕೆ ಮುಂದಾದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೇ ವೇಳೆ, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರವಿ, ವರುಣ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ.

ಈ ನಡುವೆ, ಪ್ರಕರಣದಲ್ಲಿ ಶಾಸಕನ ಪುತ್ರನ ಹೆಸರು ನಮೂದಿಸದ ಪೊಲೀಸರ ನಡೆ ಬಗ್ಗೆ ವ್ಯಾಪಕ ಚರ್ಚೆ ಸಾಗಿದೆ. ಇನ್ನೊಂದೆಡೆ ಶಾಸಕರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಭದ್ರಾವತಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

Related posts