ಹೊಸದಿಲ್ಲಿ: ಸೌರಶಕ್ತಿ ಯೋಜನೆಯ ಒಪ್ಪಂದಕ್ಕಾಗಿ 2,200 ಕೋಟಿ ರೂಪಾಯಿ ಲಂಚ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಉದ್ಯಮಿ ಗೌತಮ್ ಅದಾನಿಗೆ ಸಂಕಷ್ಟ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿ ಮತ್ತು ಅವರ ಅಳಿಯ ಸಾಗರ್ ಅದಾನಿಗೆ ಅಮೆರಿಕ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ. ಅಹ್ಮದಾಬಾದ್‌ನಲ್ಲಿರುವ ಅದಾನಿ ನಿವಾಸಕ್ಕೆ ಈ ಸಮನ್ಸ್ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುರುತರ ಆರೋಪಗಳ ಕುರಿತಂತೆ 21 ದಿನಗಳೊಳಗೆ ಉತ್ತರಿಸಬೇಕು ಎಂದು ಅಮೆರಿಕ ಸೂಚಿಸಿದೆ.
ಒಂದು ವೇಳೆ ಸಮನ್ಸ್‌ಗೆ ಉತ್ತರ ನೀಡಲು ವಿಫಲವಾದರೆ ಉದ್ಯಮಿ ಅದಾನಿ ಅವರ ವಿರುದ್ದ ಅಮೆರಿಕ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ವೇಳೆ ವಿಷ್ಲೇಶಿಸಿದ್ದಾರೆ.