ಇ-ಕಾಮರ್ಸ್‌ನಲ್ಲಿ ಡಾರ್ಕ್ ಪ್ಯಾಟರ್ನ್ ನಿಗ್ರಹಕ್ಕೆ ಕ್ರಮಗಳು ಕಠಿಣವಾಗಲಿದೆ: ಪ್ರಹ್ಲಾದ್ ಜೋಶಿ

ನವದೆಹಲಿ: ಇ-ಕಾಮರ್ಸ್ ಕ್ಷೇತ್ರದಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ‘ಡಾರ್ಕ್ ಪ್ಯಾಟರ್ನ್’ ವಿನ್ಯಾಸಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಕುರಿತಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

‘ಜಾಗೋ ಗ್ರಾಹಕ್ ಜಾಗೋ’ ಅಭಿಯಾನದ ಮುಂದಿನ ಹಂತವನ್ನು ಚರ್ಚಿಸಿರುವ ಜೋಶಿ, “ಮೋಸಗೊಳಿಸುವ ಆನ್‌ಲೈನ್ ತಂತ್ರಗಳನ್ನು ನಿಯಂತ್ರಿಸಲು ಮತ್ತು ಗ್ರಾಹಕರ ರಕ್ಷಣಾ ಚೌಕಟ್ಟುಗಳನ್ನು ಬಲಪಡಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಮ್ಮ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇ-ಕಾಮರ್ಸ್ ಕ್ಷೇತ್ರದಲ್ಲಿ ಡಾರ್ಕ್ ಪ್ಯಾಟರ್ನ್‌ಗಳ ಬಳಕೆಯ ಕುರಿತಾಗಿ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಚಿಂತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇ-ಕಾಮರ್ಸ್ ಕಂಪನಿಗಳು ತಮ್ಮ ಡಿಜಿಟಲ್ ವೇದಿಕೆಗಳ ಸ್ವಯಂ-ಪರಿಶೀಲನೆ ನಡೆಸುವಂತೆ ಕೇಂದ್ರ ಇಲಾಖೆ ಸೂಚನೆ ನೀಡಿದೆ.

“ಉದ್ಯಮಗಳು ಜವಾಬ್ದಾರಿಯುತ ನಡವಳಿಕೆಗೆ ಬದ್ಧವಾಗಬೇಕು. ಡಾರ್ಕ್ ಪ್ಯಾಟರ್ನ್ ಮಾರ್ಗಸೂಚಿಗಳನ್ನು ಕೈಗಾರಿಕಾ ಸಂಘಟನೆಗಳು ಹಾಗೂ ಪ್ರಮುಖ ಕಂಪನಿಗಳೊಂದಿಗೆ ಚರ್ಚಿಸಿ ರೂಪಿಸಲಾಗಿದೆ. ಈಗ ಎಲ್ಲಾ ಕಂಪನಿಗಳು ಅವನ್ನು ಸಂಪೂರ್ಣವಾಗಿ ಅನುಸರಿಸಬೇಕು” ಎಂದು ಜೋಶಿ ತೀವ್ರವಾಗಿ ಒತ್ತಾಯಿಸಿದರು.

ಪ್ರಸ್ತುತ ಗ್ರಾಹಕರು ಹೆಚ್ಚು ಜಾಗರೂಕರಾಗಿರುವುದನ್ನು ಬೆಳಿಗ್ಗೆ ಮಾಡಿದ ಜೋಶಿ, “ಅವರು ತಮ್ಮ ಹಕ್ಕುಗಳನ್ನು ಅರಿತವರು. ಅಂಥ ಗ್ರಾಹಕರಿಗೆ ಮೋಸಮಾಡುವುದು ಸಾಧ್ಯವಿಲ್ಲ. ಕಂಪನಿಗಳು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (CCPA) ಮಧ್ಯಪ್ರವೇಶಕ್ಕೆ ಕಾಯದೆ, ಈ ತಂತ್ರಗಳನ್ನು ತಾವು ಸ್ವತಃ ಪರಿಹರಿಸಬೇಕು” ಎಂದರು.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕರೆಯಿದ ಸಭೆಯಲ್ಲಿ ಪ್ರಮುಖ ಇ-ಕಾಮರ್ಸ್ ಕಂಪನಿಗಳು, ಕೈಗಾರಿಕಾ ಪ್ರತಿನಿಧಿಗಳು, ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ತಜ್ಞರು ಭಾಗವಹಿಸಿದ್ದರು.

ಇತ್ತೀಚೆಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಡಾರ್ಕ್ ಪ್ಯಾಟರ್ನ್ ಸಂಬಂಧಿತ ದೂರುಗಳಲ್ಲಿ ಹೆಚ್ಚಳ ಕಂಡುಬಂದಿರುವುದನ್ನೂ ಸಚಿವರು ಇಲ್ಲಿ ಉಲ್ಲೇಖಿಸಿದರು.

‘IIT-BHU’ ಸಹಯೋಗದಲ್ಲಿ ನಡೆದ ‘ಡಾರ್ಕ್ ಪ್ಯಾಟರ್ನ್ಸ್ ಬಸ್ಟರ್ ಹ್ಯಾಕಥಾನ್ 2023’ ನಿಂದ ಬಂದ ಸೃಜನಾತ್ಮಕ ಪರಿಹಾರಗಳು ಮತ್ತು ತಂತ್ರಜ್ಞಾನಗಳನ್ನು ಶ್ಲಾಘಿಸಿದ ಸಚಿವರು, “ಜಾಗೃತಿ ಅಪ್ಲಿಕೇಶನ್, ಜಾಗೋ ಗ್ರಾಹಕ ಜಾಗೋ ಅಪ್ಲಿಕೇಶನ್ ಮತ್ತು ಜಾಗೃತಿ ಡ್ಯಾಶ್‌ಬೋರ್ಡ್ ಎಂಬ ಮೂರು ಪ್ರಭಾವಿ ಸಾಧನಗಳು ಈ ಸಂಕಷ್ಟ ಎದುರಿಸಲು ನಮ್ಮ ಅಸ್ತ್ರಗಳಾಗಿವೆ” ಎಂದರು.

Related posts