ಬೆಂಗಳೂರು: ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ರೂ.10,000 ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದು ಆಶಾ ಸಂಘಟನೆ ನಾಯಕಿ ಟಿ.ಸಿ.ರಮಾ ತಿಳಿಸಿದ್ದಾರೆ.
ಆಶಾ, ಕಾರ್ಯಕರ್ತೆಯರಿಗೆ ನಾಲ್ಕೈದು ತಿಂಗಳಿಂದ ಬಾಕಿ ಇರುವ ವೇತನ ಮತ್ತು ಮಾನ್ಯ ಮುಖ್ಯಮಂತ್ರಿಗಳು 2025 ಜನವರಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ರೂ.10,000 ಏಪ್ರಿಲ್ 2025 ರಿಂದ ಅನ್ವಯವಾಗುತ್ತದೆ ಎಂದು ಭರವಸೆ ನೀಡಿದ್ದರು. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈಎರಡು ಪ್ರಮುಖ ಬೇಡಿಕೆಯೊಂದಿಗೆ ಬೆಂಗಳೂರು ಜಿಲ್ಲಾಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಟಿ.ಸಿ.ರಮಾ ತಿಳಿಸಿದ್ದಾರೆ.
