ಮುಂಬೈ: ತಮ್ಮ ಹೊಸ ಚಿತ್ರ ‘ಕಾಂತಾರ: ಅಧ್ಯಾಯ 1’ ವ್ಯಾಪಕ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿರುವ ಸಂದರ್ಭದಲ್ಲಿ ನಟ-ನಿರ್ಮಾಪಕ ರಿಷಬ್ ಶೆಟ್ಟಿ ಚಿತ್ರಕಥೆಯನ್ನು ಅಂತಿಮಗೊಳಿಸಲು ತೆಗೆದುಕೊಂಡ ಡ್ರಾಫ್ಟ್ಗಳ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ.
ಬಾಂದ್ರಾ ವೆಸ್ಟ್ನಲ್ಲಿ ಯಶಸ್ಸು ಆಚರಿಸುತ್ತಾ ರಿಷಬ್ ಶೆಟ್ಟಿ ಸುದ್ದಿಸಂಸ್ಥೆ ಜೊತೆ ಮಾತನಾಡಿ, ಚಿತ್ರದಲ್ಲಿ ಪ್ರತಿಯೊಂದು ಥೀಮ್ ಮತ್ತು ನಿರೂಪಣೆಯನ್ನು ನೇರವಾಗಿ ಚಿತ್ರಕಥೆಯಲ್ಲಿ ಸಾಧಿಸಲು 15-16 ಡ್ರಾಫ್ಟ್ಗಳು ಬೇಕಾಗಿದ್ದವು ಎಂದು ತಿಳಿಸಿದ್ದಾರೆ.
“ಮೊದಲ ಭಾಗದಲ್ಲಿ ನಾವು 3-4 ಡ್ರಾಫ್ಟ್ಗಳನ್ನು ಮಾತ್ರ ಬರೆದಿದ್ದೆವು ಮತ್ತು 3-4 ತಿಂಗಳಲ್ಲಿ ಶೂಟಿಂಗ್ಗೆ ಹೋಗಿದ್ದೆವು. ಆದರೆ ಹಿಂದಿನ ಭಾಗದ ಹಿನ್ನೆಲೆ ಕಥೆಯನ್ನು ಸೇರಿಸಲು ನಂತರ 15-16 ಡ್ರಾಫ್ಟ್ಗಳಿಗೆ ಅಗತ್ಯವಾಯಿತು. ಹೀಗಾಗಿ ಸಂಪೂರ್ಣ ಕಥೆಯನ್ನು ರೂಪಿಸಿಕೊಂಡು ಶೂಟಿಂಗ್ ಆರಂಭಿಸಲಾಯಿತು” ಎಂದವರು ವಿವರಿಸಿದ್ದಾರೆ.