ಕಾವೇರಿ ಕಿಚ್ಚಿನಿಂದಾಗಿ ಸಕ್ಕರೆ ನಾಡು ಸ್ತಬ್ಧ; ಮಂಡ್ಯ ಬಂದ್‌ಗೆ ಭಾರೀ ಬೆಂಬಲ

ಮಂಡ್ಯ: ಕಾವೇರಿ ಕಿಚ್ಚಿನಿಂದಾಗಿ ಸಕ್ಕರೆ ನಾಡು ಇಂದು ಸ್ತಬ್ಧವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆನೀಡಿವೆ.

ಕಾವೇರಿ ನೀರಿನ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶಗೊಂಡಿರುವ ಸಂಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ಬಂದ್ ಆಚರಿಸುತ್ತಿವೆ. ಮಂಡ್ಯ, ಮದ್ದೂರು ಸಹಿತ ಹಲವು ಪಟ್ಟಣಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಅಂಗಡಿ ಮುಂಗಟ್ಟುಗಳೂ ತೆರೆದಿಲ್ಲ.

ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಅನ್ನದಾತರ ಪ್ರತಿಭಟನೆ ಇದೀಗ ಬಂದ್​ ಸ್ವರೂಪ ಪಡೆದುಕೊಂಡಿದೆ. ಬಂದ್, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Related posts