40 ಅಡಿ ಆಳದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ಪಾರು ಮಾಡಿದ ಪೇಜಾವರ ಶ್ರೀ..

ಉಡುಪಿ: ಸಮಾಜಮುಖಿ ಸ್ವಾಮೀಜಿಗಳು ಸಮಾಜಕ್ಕೆ ಕಂಟಕ ಎದುರಾದಾಗ ಸಮಸ್ಯೆ ಬಗೆಹರಿಸಲು ತಾವೇ ಆಖಾಡಕ್ಕೆ ಧುಮುಕುವುದುಂಟು. ಕೆಲವೊಮ್ಮೆ ಪವಾಡ ಮೂಲಕ ಶಿಷ್ಯ ಸಮುದಾಯವನ್ನು ಅಚ್ಚರಿಗೊಳಿಸಿದ್ದೂ ಉಂಟು. ಇಲ್ಲಿ ಪೇಜಾವರ ಶ್ರೀಗಳು ಕೂಡಾ ಮೂಕ ಪ್ರಾಣಿಯನ್ಬು ರಕ್ಷಿಸಲು ಮುಂದಾದ ಪ್ರಸಂಗ ನೋಡುಗರನ್ನು ನಿಬ್ಬೆರಗಾಗಿಸಿದೆ.

ಉಡುಪಿಯ ಪೇಜಾವರ ಮಠಾಧೀಶರು ಕೃಷ್ಣ ಮಠ ಸಮೀಪದ ಬಾವಿಯೊಂದಕ್ಕೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ತಾವೇ ಬಾವಿಗಿಳಿದರು. ಕಾವಿ ತೊಟ್ಟಿರುವ ಶ್ರೀಗಳು ತಮ್ಮ ಕಾವಿ ವಸ್ತುವನ್ನು ಕಳಚಿ ಸರಸರನೆ ಬಾವಿಗಿಳಿದ ವೈಖರಿಯು ಅಚ್ಚರಿ ಹಾಗೂ ಕುತೂಹಲದ ಸನ್ನಿವಶಕ್ಕೆ ಕಾರಣವಾಯಿತು.

ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಕಾರ್ಯಕ್ಕೂ ಸೈ, ಸಾಮಾಜಿಕ ಕಾರ್ಯಕ್ಕೂ ಸೈ ಎನಿಸಿಕೊಂಡವರು. ತಮ್ಮ ಬಿಡುವಿನ ವೇಳೆ ನೀಲಾವರದ ಗೋಶಾಲೆಯಲ್ಲಿ ಕಳೆಯುವ ಶ್ರೀಗಳಿಗೆ ಮೂಕ ಪ್ರಾಣಿಗಳ ಮೇಲೂ ಹೆಚ್ಚಿನ ಕರುಣೆ. 

ಮಠದ ಸಮೀಪದ ಬಾವಿಯೊಂದಕ್ಕೆ ಬೆಕ್ಕಿನ ಮರಿ ಬಿದ್ದಿತ್ರು. ಪ್ರಾಣಸಂಕಟದಲ್ಲಿದ್ದ ಮರಿಯ ಮೂಕ ವೇದನೆಯನ್ನು ಗಮನಿಸಿದ ಶ್ರೀಗಳು, ಬಾವಿಯ ಹಗ್ಗವನ್ನು ಗಟ್ಟಿಗೊಳಿಸಿ ತಾವೇ ಬಾವಿಗಿಳಿದರು. ಸುಮಾರು 40 ಅಡಿ ಆಳದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಸ್ವಾನೀಜಿಯ ಈ ಕ್ಷಿಪ್ರ ನಿರ್ಧಾರ ಮತ್ತು ಯುವಕರನ್ನೂ ನಾಚಿಸುವ ರೀತಿ ಬಾವಿಗಿಳಿದ ವೈಖರಿ ಶಿಷ್ಯ ಸಮುದಾಯವ ಅಚ್ಚರಿಗೆ ಕಾರಣವಾಯಿತು.

https://twitter.com/unsocial2023/status/1670621295711780865?t=fMtwp8tsuKcUZv_gmz9jmg&s=19

Related posts