ಕೇಂದ್ರ ಉಕ್ಕಿನ ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ: ಚೆಲುವರಾಯಸ್ವಾಮಿ

ಬೆಂಗಳೂರು: ಕೇಂದ್ರದ ಉಕ್ಕಿನ ಸಚಿವರ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಿ.ಸಿ ಸಿ ಬ್ಯಾಂಕ್ ಚುನಾವಣೆಯಲ್ಲಿ 8 ಜನ ಕಾಂಗ್ರೆಸ್ ಬೆಂಬಲ 8 ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಎನ್ ಚೆಲುವರಾಯಸ್ವಾಮಿ ಅವರು ಹೇಳಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಜೆ ಡಿಎಸ್ ಪಕ್ಷದವರು ಚೇಸ್ಟೆ ಬಿಟ್ಟು ಸೋಲು-ಗೆಲುವನ್ನ ಸಮವಾಗಿ ತೆಗೆದುಕೊಳ್ಳಬೇಕು. ಇಂದು ಕಾಂಗ್ರೆಸ್ ಬೆಂಬಲಿತ ಮತ್ತೋಬ್ಬ ಪ್ರತಿನಿಧಿ ಆಯ್ಕೆಯಾಗುವ ಸಾಧ್ಯತೆ ಇದೆ, ಉಳಿದ 3 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಶಾಸಕರು, ಪಕ್ಷದ ಮುಖಂಡರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಮಾಡಿದ್ದಾರೆ ಎಂದು ಹೇಳಿದರು.

ಸಹಕಾರ ಕ್ಷೇತ್ರದ ಪರಿಕಲ್ಪನೆ ಕಟ್ಟಿದ್ದು ಶಂಕರೇಗೌಡರು, ನಾನು ಸಹ ಸಹಕಾರ ಕ್ಷೇತ್ರದಿಂದ ಬಂದಿಲ್ಲ ಸ್ಥಳಿಯ ಪಂಚಾಯತ್ ನಿಂದ ಬಂದವನು, ಸಹಕಾರ ಕ್ಷೇತ್ರ ಸಾರ್ವಜನಿಕರಿಗೆ ಅತ್ತಿರವಾಗಿದೆ ಎಂದು ತಿಳಿಸಿದರು.

ನಮ್ಮ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕೆಲಸ. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಅಧಿಕಾರ ಪಡೆದಿದೆ, ನಮ್ಮ ಪಕ್ಷ ಎಲ್ಲರಿಗೂ ಅವಕಾಶ ಕೊಟ್ಟು ಬೆಂಬಲಿಸುತ್ತಿದೆ. ರೈತರ ಸಾಲ ಮನ್ನಾ ಕ್ಕೆ ನೂರಾರು ಕೋಟಿಯನ್ನು ನೀಡಿದೆ, ನಮ್ಮ ಸರ್ಕಾರ ಬಂದ ಮೇಲೆ ಬದಲಾವಣೆ ಬೆಳಕಾಗಿದೆ. ಈಗಾಗಲೇ ಡಿ.ಸಿ ಸಿ ಬ್ಯಾಂಕ್ ನ 12 ರಲ್ಲಿ 8 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜೆಡಿಎಸ್ ಭದ್ರವಾಗಿದ್ದರು ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದೆ. ಚುನಾವಣೆ ಗೆದ್ದಾಗ ಹಿಗ್ಗುವುದು, ಸೋತಾಗ ಓಡೋಗೋದು ಎರಡೂ ತಪ್ಪು ಕಾಂಗ್ರೆಸ್ ಮಾಡಲ್ಲ, ನಾನು ಯಾವಾಗಲೂ ಹಿಗ್ಗಲ್ಲ ಅವಕಾಶ ಸಿಕ್ಕಾಗ ಕೆಲಸ ಮಾಡ್ತೇವೆ ಎಂದು ಹೇಳಿದರು.

ನಾನು ಜೆಡಿಎಸ್ ನಲ್ಲಿದ್ದಾಗಲೂ ನೂರಾರು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಈಗ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ನಾವು ನಮ್ಮ ಪಕ್ಷ ಟೀಮ್ ವರ್ಕ್ ಮಾಡ್ತಿದ್ದೇವೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

ಜೆಡಿಎಸ್ ಗೆದ್ದು ನಾವು ಏನಾದರೂ ಈ ಸೋತಿದ್ದರೆ ನಾವಾವೆಲ್ಲರು ಒಂದು ತಿಂಗಳಲ್ಲೆ ಊರು ಬಿಡಬೇಕಿತ್ತು ಅಷ್ಟು ಅವರ ಕಾರ್ಯಕರ್ತರು ಟೀಕಿಸ್ತಿದ್ರು ಜೆಡಿಎಸ್ ನಾಯಕರು ನಮ್ಮ ಬಗ್ಗೆ ಲಘುವಾಗಿ ಮಾತಾಡ್ತಿದ್ರು. ಅವರ ಹಾಗೆ ನಾವು ಟೀಕೆ ಮಾಡಲ್ಲ, ಲಘುವಾಗಿ ಮಾತನಾಡಲ್ಲ. ಚುನಾವಣೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ ಜೆಡಿಎಸ್ ಪಕ್ಷದ ಕೆಲವರು ಚೇಸ್ಟೆ ಬಿಟ್ಟು ಸೋಲು-ಗೆಲುವನ್ನ ಸಮವಾಗಿ ತೆಗೆದುಕೊಳ್ಳಿ ಜಿಲ್ಲೆಗೆ ಜೆ ಡಿ ಎಸ್ ಅವರ ಕೊಡುಗೆ ಏನು? ನಾವು ಯಾರು ಜೆಡಿಎಸ್ ನ ಜಿಲ್ಲೆಯಿಂದ ಹೋಡಿಸೋಕೆ ಎಂದು ಹೇಳಿದರು.

ಸಚಿನ್ ಚಲುವರಾಯಸ್ವಾಮಿ ಪಕ್ಷದ ಸಾಮಾನ್ಯ ಕಾರ್ಯಕರ್ತ, ನಮ್ಮ ಕುಟುಂಬದಲ್ಲಿ ನಾಲ್ಕೈದು ಜನರು ಕೆಲಸ ಮಾಡ್ತಾರೆ. ನಮ್ಮ ಅಣ್ಣ, ಅಣ್ಣನ ಮಗ,ನನ್ನ ಮಗ ಎಲ್ಲರು ಕೆಲಸ ಮಾಡ್ತಾರೆ. ನಮ್ಮ ಕುಟುಂಬದಲ್ಲಿ ಇಲ್ಲಿಯವರೆಗೆ ನೇರ ಚುನಾವಣೆಗೆ ಯಾರು ಬಂದಿರಲಿಲ್ಲ. ಪ್ರಥಮವಾಗಿ ನನ್ನ ಮಗ ಸಹಕಾರ ಕ್ಷೇತ್ರಕ್ಕೆ ಬಂದಿದ್ದಾನೆ. ನಮ್ಮ ಶಾಸಕರುಗಳ ಸಹಕಾರದಿಂದ ಈ ಸಕ್ಸಸ್ ಸಿಕ್ಕಿದೆ. ಸೊಸೈಟಿಯಿಂದ ಡಿಸಿಸಿ ಬ್ಯಾಂಕ್ ಗೆ ಕರೆತಂದಿದ್ದಾರೆ. ಅವನು ಜನರ ಜೊತೆ ಯಾವ ರೀತಿ ಬೆರಿತಾನೆ ಅನ್ನೊದು ಅವನಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಶಾಸಕರಾದ ಗಣಿಗ ರವಿಕುಮಾರ್,ದಿನೇಶ್ ಗೂಳಿಗೌಡ,ಮೈಶುಗರ್ ಅಧ್ಯಕ್ಷ ಸಿಡಿ ಗಂಗಾದರ್ ಇತರಿದ್ದರು

Related posts