ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ; ಛಲವಾದಿ ನಾರಾಯಣ ಸ್ವಾಮಿ

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಅದರಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಅವರು ಅಕ್ರೋಶ ವ್ಯಕ್ತಪಡಿಸಿರುವ ವೈಖರಿ ಗಮನಸೆಳೆದಿದೆ.

‘ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿಯನ್ನೂ ಎತ್ತಿಲ್ಲ. ದಲಿತ ಸಮುದಾಯದ ಯಾವುದೇ ಹೋರಾಟಕ್ಕೂ ಕೈಜೋಡಿಸಿಲ್ಲ. ದಲಿತ ಸಮುದಾಯವನ್ನು ನಿಮ್ಮ ಸ್ವಾರ್ಥಕ್ಕಾಗಷ್ಟೇ ಬಳಸಿಕೊಂಡಿದ್ದೀರಿ’ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡಿದ್ದಾರೆ.

‘ನೂರು ವರ್ಷಗಳಿಂದ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಕೆಲಸ ಮಾಡಿರುವ ಸಂಘಟನೆಯನ್ನು ಗುರಿ ಮಾಡಿರುವುದು ನಿಮಗೆ ಶೋಭೆ ತರುವುದಿಲ್ಲ’ ಎಂದವರು ಹೇಳಿದ್ದಾರೆ.

Related posts