ತ್ರಿಭಾಷಾ ನೀತಿ ವಿರುದ್ಧ ಆಕ್ರೋಶ: ಉತ್ತರ ಭಾರತದಲ್ಲಿ ಮೂರನೇ ಭಾಷೆ ಯಾವುದು ಎಂದು ಸ್ಟಾಲಿನ್ ಪ್ರಶ್ನೆ

ಚೆನ್ನೈ: ಕೇಂದ್ರದ ತ್ರಿಭಾಷಾ ನೀತಿ ವಿರುದ್ಧ ಆಕ್ರೋಶ ಹೊರಹಾಕಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉತ್ತರ ಭಾರತದಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದು ಬೊಟ್ಟು ಮಾಡಿದ್ದಾರೆ. ಅಲ್ಲಿ ಹಾಗಿರುವಾಗ, ದಕ್ಷಿಣದ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಏಕೆ ಕಲಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್‌ ಕಾಕಿರುವ ಅವರು, ಉತ್ತರ ಭಾರತದಲ್ಲಿ ಮೂರನೇ ಭಾಷೆಯಾಗಿ ಯಾವ ಭಾಷೆಯನ್ನು ಕಲಿಸಲಾಗುತ್ತಿದೆ ಎಂಬುದನ್ನು ಮೊದಲು ಹೇಳಬೇಕು ಎಂದು ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.

ತಮಿಳುನಾಡಿನ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಲಿಯುವ ಅವಕಾಶವನ್ನು ನೀವು ಏಕೆ ನಿರಾಕರಿಸುತ್ತಿದ್ದೀರಿ? ಎಂಬ ಪ್ರಶ್ನೆಗಳ ಕುರಿತಂತೆಯೂ ಪ್ರತುಕ್ರಿಯಿಸಿರುವ ಸ್ಟಾಲಿನ್, ಉತ್ತರ ಭಾರತದಲ್ಲಿ ಮೂರನೇ ಭಾಷೆಯಾಗಿ ಯಾವ ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಮೊದಲು ಕೇಂದ್ರ ಉತ್ತರಿಸಲಿ ಎಂದು ಸಲಹೆ ಮಾಡಿದ್ದಾರೆ.

Related posts