ನೇಪಾಳ ಹಿಂಸಾಚಾರ; ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನ

ಕಠ್ಮಂಡು: ನೇಪಾಳದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನವಾಗಿದ್ದಾರೆ.

ಸಾಮಾಜಿಕ ಜಾಲತಾಣದ ಮೇಲಿನ ನಿಷೇಧ ಖಂಡಿಸಿ ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಪ್ರತಿಭಟನೆ ಹಿಂಸಾರೂಪ ತಳೆದಿದೆ.
ಪ್ರತಿಭಟನೆಗೆ ಬೆಚ್ಚಿದ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.

ಈ ನಡುವೆ ನೇಪಾಳದ ಪ್ರಧಾನಿಯ ಬಂಗಲೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಈ ವೇಳೆ, ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಸಜೀವ ದಹನವಾಗಿದ್ದಾರೆ. ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

Related posts