ಪ್ರಕೃತಿಯ ಹೊಡೆತಕ್ಕೆ ನಲುಗಿದ ಸಿಕ್ಕಿಂ; ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಗ್ಯಾಂಗ್‌ಟಕ್: ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಸಿಕ್ಕಿಂ ಅಕ್ಷರಶಃ ನಲುಗಿದೆ. ಮೇಘ ಸ್ಫೋಟದಿಂದ ಸಂಭವಿಸಿದ ದಿಢೀರ್ ಪ್ರವಾಹ ಹಲವಾರು ಅನಾಹುತಗಳಿಗೆ ಕಾರಣವಾಗಿದ್ದು, ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಹಲವೆಡೆ ಸರಣಿ ಅವಘಡಗಳು ಸಂಭವಿಸಿದ್ದು, ಅವಶೇಷಗಳಿಂದ ಒಂಬತ್ತು ಸೈನಿಕರು ಸೇರಿದಂತೆ ಮೂವತ್ತೆರಡು ಶವಗಳನ್ನು ಪತ್ತೆಮಾಡಲಾಗಿದೆ. ಈವರೆಗೂ 2,563 ಜನರನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ತಂಡ ಹೇಳಿದೆ.

ನಾಪತ್ತೆಯಾಗಿರುವ 100ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಕ್ಕಿಂ ರಾಜ್ಯದ ಪಾಕ್ಯೊಂಗ್ ಜಿಲ್ಲೆಯಲ್ಲಿ 78, ಗ್ಯಾಂಗ್ಟಾಕ್ ಜಿಲ್ಲೆಯ 23, ಮಂಗನ್ ನಲ್ಲಿ 15 ಮತ್ತು ನಾಮ್ಚಿಯಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು ನಾಪತ್ತೆಯಾಗಿರುವ ನೂರಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts