ಒತ್ತುವರಿ ಆರೋಪ ನೆಪದಲ್ಲಿ ಮನೆ ತೆರವಿಗೆ ಕ್ರಮ; ಅರಣ್ಯಾಧಿಕಾರಿಗಳ ವಿರುದ್ಧ ಬಿಜೆಪಿ ಶಾಸಕರ ಆಕ್ರೋಶ

ಮಂಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮನೆಯನ್ನು ಧ್ವಂಸಗೊಳಿಸಲು ಕಾರ್ಯಾಚರಣೆ ಕೈಗೊಂಡರು. ಅರಣ್ಯ ಅಧಿಕಾರಿಗಳ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ನೋಟಿಸ್ ಇಲ್ಲದೆ ಕ್ರಮ ಕೈಗೊಂಡಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಲವಾರು ವರ್ಷಗಳಿಂದ ಬೆಳ್ತಂಗಡಿ ಗ್ರಾಮದ ಕಳೆಂಜ ಗ್ರಾಮದಲ್ಲಿ ವಾಸವಾಗಿದ್ದು ಧರ್ಮಣ್ಣ ಗೌಡ ಎಂಬವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಕೃಷಿಕನ ಮನೆಯನ್ನು ಏಕಾಏಕಿ ತೆರವು ಗೊಳಿಸಲು ಅರಣ್ಯ ಇಲಾಖೆಗೆ ಅರಣ್ಯ ಸಚಿವರು ಮೌಖಿಕ ಆದೇಶ ನೀಡಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಶಾಸಕ ಹರೀಶ್ ಪೂಂಜಾ ಅವರು ಇತ್ತೀಚೆಗಷ್ಟೇ ಅರಣ್ಯ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆ ತೆರವಿಗೆ ದೌಡಾಯಿದ್ದರೂ. ಇದರಿಂದ ಕೆರಳಿದ ಶಾಸಕ ಹರೀಶ್ ಪೂಂಜಾ ಬೆಳಂಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಮನೆ ತೆರವಿಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರೆ. ಈ ಬಗ್ಗೆ ಮಾಹಿತಿ ತಿಳಿದ ನೆರೆಯ ಕ್ಷೇತ್ರಗಳ ಶಾಸಕರಾದ ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್ ಕೂಡಾ ದೌಡಾಯಿಸಿ ಅರಣ್ಯ ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Related posts