ಜೈಸಲ್ಮೇರ್: ಜೈಸಲ್ಮೇರ್-ಜೋಧಪುರ ಹೆದ್ದಾರಿಯ ಥೈಯಾತ್ ಗ್ರಾಮದ ಬಳಿ ಪ್ರಯಾಣಿಕರಿದ್ದ ಬಸ್ ಧಗಧಗಿಸಿ ಹೊತ್ತಿಉರಿದಿದೆ. ಈ ಘಟನೆಯಲ್ಲಿ ಸಾವನ್ನಪಿದವರ ಸಂಖ್ಯೆ 15 ಕ್ಕೇರಿದೆ.
#breakingnews
राजस्थान के जैसलमेर में चलती एसी स्लीपर बस में आग लग गई। देखते ही देखते आग ने भीषण रूप ले लिया,बचने के लिए लोग चलती बस से कूद गए। बस में 57 लोग सवार थे। हादसे में 10-12 लोगों की जलने से मौत होने की आशंका है।#news #jaisalmer pic.twitter.com/79hsBUVtVz— Nihar Nath (@NiharNath01) October 14, 2025
ಜೈಸಲ್ಮೇರ್-ಜೋಧಪುರ ಹೆದ್ದಾರಿಯ ಥೈಯಾತ್ ಗ್ರಾಮದ ಬಳಿ ಮಧ್ಯಾಹ್ನ 3:30ರ ಸುಮಾರಿಗೆ ರಾಜಸ್ಥಾನದ ಜೈಸಲ್ಮೇರ್ನಿಂದ ಜೋಧಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ ಹೊತ್ತಿ ಉರಿದಿದೆ. ದುರಂತದಲ್ಲಿ ಮೂವರು ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ ಸುಮಾರು 15 ಪ್ರಯಾಣಿಕರು ಮೃತಪಟ್ಟಿದ್ದಾರೆ. ಈ ಬಸ್ಸಿನಲ್ಲಿ ಸುಮಾರು 57 ಪ್ರಯಾಣಿಕರು ಬಸ್ನಲ್ಲಿದ್ದರು ಎನ್ನಲಾಗಿದೆ. ಭೀಕರ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.