ಕಲಬುರಗಿ: ಮದ್ಯ ಸೇವನೆಯ ಚಟ ತೊರೆಯಲು ನಾಟಿ ಔಷಧ ಸೇವಿಸಿದ ಮೂವರು ಮೃತಪಟ್ಟ ಘಟನೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಸೇಡಂ ಸಮೀಪದ ಬುರಗಪಲ್ಲಿ ಗ್ರಾಮದ ಲಕ್ಷ್ಮಿ ನರಸಿಂಹಲು ಬಟಗೇರಾ (55), ಮದಕಲ್ ಗ್ರಾಮದ ನಾಗೇಶ (32) ಹಾಗೂ ಗಣೇಶ ರಾಠೋಡ್ (30) ಎಂಬವರು ನಾಟಿ ಔಷಧ ಸೇವಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಔಷಧ ಸೇವಿಸಿದ್ದ ಲಿಂಗಪ್ಪ ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಮಡಾಪುರದ ಫಕೀರಪ್ಪ ಸಾಯಪ್ಪ ಎಂಬವರು ಕುಡಿತದ ಚಟ ಬಿಡಿಸಲು ನಾಟಿ ಔಷಧ ನೀಡುತ್ತಿದ್ದವರು ಎನ್ನಲಾಗಿದ್ದು, ಈ ಔಷಧವನ್ನೇ ಈ ವ್ಯಕ್ತಿಗಳು ಸೇವಿಸಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.