ಕೊಪ್ಪಳ: ಮೋಜು ಮಜಾ ಮಸ್ತಿ ಮೂಲಕ ಅನೈತಿಕ ದಂಧೆ ನಡೆಸಲಾಗುತ್ತಿದೆ ಎಂಬ ಆಕ್ರೋಶಕ್ಕೆ ಗುರಿಯಾಗಿರುವ ವಿರೂಪಾಪುರಗಡ್ಡೆಲ್ಲಿನ ರೆಸಾರ್ಟ್ ತೆರವು ಪ್ರಕ್ರಿಯೆ ಆರಂಭವಾಗಿದೆ. ಗಂಗಾವತಿ ತಾಲ್ಲೂಕಿನ ವಿದೇಶಿಗರ ಮೋಜುಮಸ್ತಿ ತಾಣ ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಗಂಗಾವತಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ಮುಂದಾಳುತ್ವದಲ್ಲಿ ಈ ಕಾರ್ಯಾಚರಣೆಯ ಪ್ರಕ್ರಿಯೆ ಆರಂಭವಾಗಿದ್ದು, ಆರೋಗ್ಯ, ವಿದ್ಯುತ್ ಹಾಗೂ ಪೊಲೀಸ್ ಇಲಾಖೆ ಸಾತ್ ನೀಡಿದೆ.
ಸುಪ್ರಿಂ ಕೋರ್ಟ್ ನಿರ್ದೇಶನ ಮೇರೆಗೆ ಈ ತೆರವು ಕಾರ್ಯ ನಡೆಯುತ್ತಿದೆ. ಬೆಳ್ಳಂಬೆಳಗ್ಗೆಯೇ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ಹತ್ತು ಗಂಟೆವರೆಗೂ ವಿರುಪಾಪುರ ಗಡ್ಡೆ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.