ಹಿಂದೂತ್ವ ವಿಚಾರ: ಪತ್ರ ಮೂಲಕ ಅರೆಸ್ಸಸ್ಸನ್ನು ಕೆಣಕಿದ ಶಿವಸೇನೆ

ನಾಗ್ಪುರ: ಕಟ್ಟಾ ಹಿಂದುತ್ವವಾದಿ ಪಕ್ಷ ಶಿವಸೇನೆ ಇದೀಗ ಬಿಜೆಪಿ ವಿರುದ್ದದ ರಾಜಕೀಯ ಸಮರವನ್ನು ತೀವ್ರಗೊಳಿಸಿದೆ. ಭಾರತೀಯ ಜನತಾ ಪಕ್ಷವನ್ನು ರಾಕ್ಷಸನಿಗೆ ಹೋಲಿಸಿರುವ ಶಿವಸೇನೆ, ಭಾರತ ಮಾತೆಯನ್ನು ಬಿಜೆಪಿಯಿಂದ ರಕ್ಷಿಸುವಂತೆ ಆರೆಸ್ಸೆಸ್ ಅಧಿನಾಯಕನಿಗೆ ಮೊರೆಯಿಟ್ಟಿದೆ.

ಈ ಕುರಿತಂತೆ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಶಿವಸೇನಾ ನಾಯಕ ಕಿಶೋರ್ ತಿವಾರಿ ಅವರು, ಬಿಜೆಪಿಯ ನೀತಿಯಿಂದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ, ಉದ್ಯೋಗಗಳಲ್ಲಿ ಎಲ್ಲಾ ಸಮುದಾಯದವರಿಗೆ ಮೀಸಲಾತಿ ಸಿಗಬೇಕೆಂಬುದು ಸಂಘ ಹಾಗೂ ಇತರೆ ಹಿಂದೂ ಸಂಘಟನೆಗಳ ಒತ್ತಾಸೆಯಾಗಿದೆ, ಆದರೆ ಮಹಾರಾಷ್ಟ್ರದಲ್ಲಿ ಸರ್ಕಾರ ಮುಸ್ಲಿಮರಿಗೆ ಶೇ.5 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಶಿವಸೇನಾ ನಾಯಕ ಕಿಶೋರ್ ತಿವಾರಿ ತಮ್ಮ ಪಾತ್ರದಲ್ಲಿ ಹೇಳಿದ್ದಾರೆ. ಬಿಜೆಪಿಯು ಹಿಂದೂಗಳಿಗೆ ಮತ್ತು ಹಿಂದೂತ್ವಕ್ಕಾಗಿ ಏನನ್ನೂ ಮಾಡಿಲ್ಲ ಎಂದು ತಿವಾರಿ ಸರಸಂಘಚಾಲಕರಿಗೆ ಬರೆದಿರುವ ಪಾತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Related posts