‘ವೇವ್ಸ್ 2025’: ಚಲನಚಿತ್ರ ಸಂಘಗಳೊಂದಿಗೆ ಮುರುಗನ್ ವರ್ಚುವಲ್‌ ಸಭೆ

ನವದೆಹಲಿ: ಕೇಂದ್ರದ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ದಕ್ಷಿಣ ಭಾರತದ ಚಲನಚಿತ್ರ ಸಂಘಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದರು. ತಂತ್ರಜ್ಞರು, ನಿರ್ಮಾಪಕರು ಮತ್ತು ನಿರ್ದೇಶಕರು ವೇವ್ಸ್ 2025 ಕ್ಕೆ ಜೊತೆಯಾಗುವಂತೆ ಮನವಿ ಮಾಡಿದರು.

ಸಚಿವರಾದ ಡಾ. ಎಲ್. ಮುರುಗನ್ ಅವರು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಪ್ರತಿನಿಧಿಸುವ ಚಲನಚಿತ್ರ ಸಂಘಗಳ ಪದಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು. ಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು, ಜಂಟಿ ಕಾರ್ಯದರ್ಶಿ (ಐಪಿ) ಸಿ. ಸೆಂಥಿಲ್ ರಾಜನ್ ಮತ್ತು ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಡಾ. ಅಜಯ್ ನಾಗಭೂಷಣ್ ಎಂ.ಎನ್ ಭಾಗವಹಿಸಿದ್ದರು.

ಮೇ 1 ರಿಂದ 5, 2025 ರವರೆಗೆ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಪ್ರಗತಿಯ ಕುರಿತು ಪ್ರಮುಖ ಚರ್ಚೆಗಳು ನಡೆದವು. ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಸೇರಿದಂತೆ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಿಂದ ಗರಿಷ್ಠ ಭಾಗವಹಿಸುವಿಕೆಯ ಅಗತ್ಯವನ್ನು ಸಭೆ ಒತ್ತಿಹೇಳಿತು. ಪ್ರಮುಖ ನಿರ್ಮಾಣ ಸಂಸ್ಥೆಗಳ ಒಳಗೊಳ್ಳುವಿಕೆ ಮತ್ತು ವೇವ್ಸ್ ಪ್ರದರ್ಶನ ಸ್ಥಳದಲ್ಲಿ ಮೀಸಲಾದ ಪೆವಿಲಿಯನ್ ಅಥವಾ ಬೂತ್ ಸ್ಥಾಪನೆಯ‌ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು.

ವೇವ್ಸ್ ಎಲ್ಲಾ ಮಾಧ್ಯಮ ವಿಭಾಗಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಒತ್ತಿ ಡಾ. ಎಲ್. ಮುರುಗನ್ ಹೇಳಿದರು. ಇದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ, ಈ ಉಪಕ್ರಮವು ಭಾರತವನ್ನು ಸೃಜನಶೀಲ ಉದ್ಯಮದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.

ವೇವ್ಸ್ 2025 ಕುರಿತು.. 

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯಕ್ಕೆ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ಈ ಐತಿಹಾಸಿಕ ಶೃಂಗಸಭೆಯು ಜಾಗತಿಕ ನಾಯಕರು, ಮಾಧ್ಯಮ ವೃತ್ತಿಪರರು, ಕಲಾವಿದರು, ನೀತಿ ನಿರೂಪಕರು ಮತ್ತು ಉದ್ಯಮದ ಪಾಲುದಾರರನ್ನು ಒಂದೆಡೆ ಸೇರಿಸುತ್ತದೆ. ಡಿಜಿಟಲ್ ಯುಗವು ಸವಾಲುಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ. ಕೃತಕ ಬುದ್ಧಿಮತ್ತೆ, ಸ್ಟ್ರೀಮಿಂಗ್ ಕ್ರಾಂತಿಗಳು, ಬೌದ್ಧಿಕ ಆಸ್ತಿ ಹಕ್ಕುಗಳು, ತಪ್ಪು ಮಾಹಿತಿ ಮತ್ತು ಮಾಧ್ಯಮ ಸುಸ್ಥಿರತೆ ಪ್ರಮುಖ ಕಾಳಜಿಗಳಾಗಿವೆ. ಈ ರೀತಿಯ ಮೊದಲ ಕಾರ್ಯಕ್ರಮವಾಗಿ, ವೇವ್ಸ್ 2025 ಸಾಂಸ್ಕೃತಿಕ ವೈವಿಧ್ಯತೆ, ನಾವೀನ್ಯತೆ ಮತ್ತು ಮಾಧ್ಯಮ ವೇದಿಕೆಗಳಿಗೆ ಸಮಾನ ಪ್ರವೇಶವನ್ನು ಉತ್ತೇಜಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ.‌

ಸಾಮರಸ್ಯದ ಮಸೂರದಲ್ಲಿ ಜಗತ್ತನ್ನು ನೋಡುವ ಮೂಲಕ, ವೇವ್ಸ್‌ 2025 ಅರ್ಥಪೂರ್ಣ ಸಂಪರ್ಕಗಳು, ಸಹಯೋಗದ ಪ್ರಗತಿ ಮತ್ತು ಸಾಂಸ್ಕೃತಿಕ ಏಕತೆಯನ್ನು ಪ್ರೇರೇಪಿಸುವ ಆಶಯ ಹೊಂದಿದೆ. ಡಿಜಿಟಲ್ ಯುಗದಲ್ಲಿ ದೇಶದಿಂದ ದೇಶಕ್ಕೆ, ಜನರಿಂದ ಜನರಿಗೆ ಮತ್ತು ಸಂಸ್ಕೃತಿಯಿಂದ ಸಂಸ್ಕೃತಿಗೆ ಅತಿದೊಡ್ಡ ಏಕೀಕರಣ ಅಂಶವಾಗಿ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಪಾತ್ರವನ್ನು ಬಲಪಡಿಸುವಲ್ಲಿ ಈ ಶೃಂಗವು ನಿರ್ಣಾಯಕ ಹೆಜ್ಜೆಯಾಗಲಿದೆ. ಸಮಾನ ಕಾಳಜಿಗಳು, ಮಾನವೀಯತೆ ಎದುರಿಸುತ್ತಿರುವ ಸವಾಲುಗಳು, ಹಂಚಿಕೆಯ ಅವಕಾಶಗಳು, ಸಹಯೋಗದ ಬೆಳವಣಿಗೆ ಮತ್ತು ಪ್ರಗತಿಯ ಮೇಲೆ ಕೇಂದ್ರೀಕರಿಸುವ ಮೂಲಕ ವೇವ್ಸ್ 2025 ಏಕತೆಯ ಶಕ್ತಿಯನ್ನು ಒತ್ತಿಹೇಳುತ್ತದೆ. ಈ ದೃಷ್ಟಿಕೋನವು ವೇವ್ಸ್ 2025 ಅನ್ನು ಸಾಮರಸ್ಯ, ಅರ್ಥಪೂರ್ಣ ಸಂವಾದ ಮತ್ತು ಗಡಿಗಳನ್ನು ಮೀರಿದ ಕ್ರಿಯೆಯನ್ನು ಉತ್ತೇಜಿಸಲು ಜಾಗತಿಕ ವೇದಿಕೆಯಾಗಿಸುತ್ತದೆ.

ಮುಂಬೈನಲ್ಲಿ ವೇವ್ಸ್ 2025 ಅನ್ನು ಆಯೋಜಿಸುವ ಮೂಲಕ, ಶೃಂಗಸಭೆಯು ಚಿಂತನಾ ನಾಯಕರಿಗೆ ವೇದಿಕೆಯನ್ನು ಒದಗಿಸುತ್ತದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಮಾಧ್ಯಮ ಉದ್ಯಮವು ಹೇಗೆ ಒಂದು ದೊಡ್ಡ ಒಗ್ಗೂಡಿಸುವ ಅಂಶವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವರು ಚರ್ಚಿಸುತ್ತಾರೆ. ಈ ಕ್ಷೇತ್ರವು ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಜನರು, ಸಂಸ್ಕೃತಿಗಳು ಮತ್ತು ರಾಷ್ಟ್ರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

Related posts