ಸರ್ಕಾರಿ ವೈದ್ಯರ ಶಿಸ್ತು ಬಗ್ಗೆ ನಿಗಾ.. ಆಯೋಗದ ಶಿಫಾರಸು..

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದ ಆಡಳಿತ ಸುಧಾರಣ ಆಯೋಗ-2 ಸಲಹೆ ಮಾಡಿದೆ. ಸರ್ಕಾರ ವೈದ್ಯರು ಖಾಸಗಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಅಂಕುಶ ಹಾಕಬೇಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸೂತ್ರ ನಿರ್ವಹಣೆಗಾಗಿ ವ್ಯವಸ್ಥಾಪಕರನ್ನು ನೇಮಿಸಬೇಕೆಂದೂ ಆಯೋಗ ಶಿಫಾರಸು ಮಾಡಿದೆ. ಈ ವರದಿ ಸರ್ಕಾರಕ್ಕೆ ಗುರುವಾರ ಸಲ್ಲಿಕೆಯಾಗಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು ಹೀಗಿವೆ:  

  • ಆರೋಗ್ಯ ಇಲಾಖೆಯಲ್ಲಿ ನರ್ಸರಿಂಗ್‌ ನಿರ್ದೇಶನಾಲಯ ಸ್ಥಾಪಿಸಬೇಕು.

  • ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಪ್ರಾರಂಭಿಸಬೇಕು.

  • ಒಳರೋಗಿಗಳ ಮತ್ತು ಹೆರಿಗೆಗಳ ಸಂಖ್ಯೆಯನ್ನು ಆಧರಿಸಿ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಬೇಕು.

  • ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞರು, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದಲ್ಲಿ ಸೇವೆ ನೀಡುವಂತಾಗಬೇಕು.

  • ಮೂಳೆಚಿಕಿತ್ಸಕ, ಮನೋವೈದ್ಯರು, ಫಿಸಿಯೋಥೆರಪಿಸ್ಟ್‌ ತಿಂಗಳಿಗೊಮ್ಮೆ ಗಂಟೆಯ ಆಧಾರದಲ್ಲಿ ತಜ್ಞರ ಸೇವೆಗಳನ್ನು ಪಡೆಯಲು ಎಆರ್‌ಎಸ್‌ಗೆ ಹಣ ಒದಗಿಸಬಹುದು.

  • ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಡಳಿತಾಧಿಕಾರಿಯ ಅಡಿಯಲ್ಲಿ ಆಸ್ಪತ್ರೆ ವ್ಯವಸ್ಥಾಪಕರ ಹುದ್ದೆ ನೇಮಕ ಮಾಡುವುದು.

  • ಎಎನ್‌ಎಂಗಳು ಮತ್ತು ಪುರುಷ ಆರೋಗ್ಯ ಕಾರ್ಯಕರ್ತರಿಗಾಗಿ ದ್ವಿ-ಚಕ್ರ ವಾಹನಗಳನ್ನು ಖರೀದಿಸಲು 20 ಕೋಟಿ ರೂ. ವೆಚ್ಚದಲ್ಲಿ ಶೇ.50ರ ಸಬ್ಸಿಡಿ ನೀಡುವುದು.

  • ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಜೆ ಕ್ಲಿನಿಕ್‌ ತೆರೆಯುವುದು.

  • 100 ಹಾಸಿಗೆಗಳ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳಲ್ಲಿ ಜಿಎನ್‌ಎಂ ಅಥವಾ ಬಿಎಸ್‌ಸಿ ನರ್ಸಿಂಗ್‌ ಕೋರ್ಸ್‌ಗಳನ್ನು 20 ಸೀಟ್‌ಗಳೊಂದಿಗೆ ನರ್ಸಿಂಗ್‌ ಕಾಲೇಜು ಹಾಗೂ 10 ಪ್ಯಾರಾಮೆಡಿಕಲ್‌ ಸೀಟುಗಳೊಂದಿಗೆ ಪ್ಯಾರಾ ಮೆಡಿಕಲ್‌ ಕೋರ್ಸ್‌ ಪ್ರಾರಂಭಿಸಬೇಕು.

  • ವಿಭಾಗಿಯ ಮಟ್ಟದಲ್ಲಿ ಸಿಸ್ಟಂ ಇಂಪ್ರೂಮೆಂಟ್‌ ಟೀಮ್‌ ರಚಿಸುವುದು.

  •  ಪ್ರತಿ ಬುಧವಾರ ತಾಯಿಯ ಆರೋಗ್ಯ, ಮರಣ ಪ್ರಮಾಣ ಕುರಿತು ಪರಿಶೀಲಿಸುವುದು.

  • ಆರೋಗ್ಯ ಕರ್ನಾಟಕ ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮೆ ಯೋಜನೆಯಡಿ ವಿಕಲಚೇತನರಿಗೆ ಚಿಕಿತ್ಸೆ ಕಲ್ಪಿಸುವುದು.

Related posts