ದೆಹಲಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಸುಮಾರು 17 ದಿನಗಳಿಂದ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಂಗದಿಂದ ಮಂಗಳವಾರ ಸಂಜೆ ಯಶಸ್ವಿಯಾಗಿ ಹೊರತರಲಾಗಿದೆ.
ಈ ಯಶಸ್ವೀ ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಅತ್ಯಂತ ಕಷ್ಟಕರ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದನ್ನು ಅದ್ಭುತ ನಿರ್ವಹಿಸಿದ ತಂಡಗಳು ಮತ್ತು ಎಲ್ಲಾ ತಜ್ಞರನ್ನು ನಾನು ಅಭಿನಂದಿಸುತ್ತೇನೆ ಎಂದು ಮುರ್ಮು ಅವರು ಹೇಳಿದ್ದಾರೆ.
ಕಾರ್ಮಿಕರನ್ನು ಸುರಂಗದಿಂದ ಹೊರತಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡದ ಧೈರ್ಯ ಮತ್ತು ಸಂಕಲ್ಪವು ಕಾರ್ಮಿಕರರಿಗೆ ಹೊಸ ಬದುಕನ್ನು ಕರುಣಿಸಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಕಾರ್ಯಾಚರಣೆಯಲ್ಲಿ ತೊಡಗಿದ ಪ್ರತಿಯೊಬ್ಬರೂ ಮಾನವೀಯತೆ ಪ್ರದರ್ಶಿಸಿದ್ದಾರೆ ಎಂದಿದ್ದಾರೆ.