ಹಾವೇರಿ ಸೋಲು; ಬೊಮ್ಮಾಯಿ ಕುಟುಂಬ ರಾಜಕಾರಣ ತಿರಸ್ಕರಿಸಿದ ಮತದಾರ?

ಹಾವೇರಿ: ಪ್ರತಿಷ್ಠೆಯ ಅಖಾಡವೆನಿಸಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಅಹ್ಮದ್‌ ಖಾನ್‌ ಪಠಾಣ್‌ ಜಯಗಳಿಸಿದ್ದಾರೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಹೀನಾಯ ಸೋಲು ಉಂಟಾಗಿದ್ದು ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿದೆ. ಬಿಜೆಪಿಯಿಂದ ಭರತ್‌ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಯಾಸೀರ್‌ಅಹ್ಮದ್‌ ಖಾನ್‌ ಪಠಾಣ್‌, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರವಿ ಕೃಷ್ಣಾ ರೆಡ್ಡಿ ಸೇರಿದಂತೆ 8 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಈ ಪೈಕಿ ಭರತ್‌ ಬೊಮ್ಮಾಯಿ ಮತ್ತು ಯಾಸೀರ್‌ ಅಹ್ಮದ್‌ಖಾನ್‌ ಪಠಾಣ್‌ ನಡುವೆ ನೇರ ಪೈಪೋಟಿ ಇತ್ತಾದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಅಹ್ಮದ್‌ ಖಾನ್‌ ಪಠಾಣ್‌ ಗೆದ್ದು ಬೀಗಿದ್ದಾರೆ. ಈ ಮೂಲಕ ಬಿಜೆಪಿಯು ಈ ಕ್ಷೇತ್ರವನ್ನು ಕಳೆದುಕೊಂಡಿದೆ.

ಈ ನಡುವೆ ಭರತ್ ಬೊಮ್ಮಾಯಿ ಸೋಲಿನ ಬಗ್ಗೆ ಬಿಜೆಪಿ ಕಾರ್ಯಕರು ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರ ಕುಟುಂಬ ರಾಜಕಾರಣದಿಂದಾಗಿ ತಮ್ಮ ಪಕ್ಷವು ಕ್ಷೇತ್ರವಒಂದನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

Related posts