ಬೆಳಗಾವಿ: ಯಾವುದೇ ಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಇಲ್ಲ; ಸಚಿವ ಈಶ್ವರಪ್ಪ

ಬೆಳಗಾವಿ: ಹಿಂದುತ್ವದ ಕೇಂದ್ರವಾದ ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಯಾವುದೇಕಾರಣಕ್ಕೂ ಮುಸ್ಲೀಂರಿಗೆ ಟಿಕೇಟ್ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಬೇಕಾದರೆ ರಾಯಣ್ಣನ ಶಿಷ್ಯರು, ಶಂಕರಾಚಾರ್ಯರ ಶಿಷ್ಯರಿಗೆ ಅಥವಾ ಚೆನ್ನಮ್ಮಳ ಶಿಷ್ಯರಿಗೆ ಟಿಕೆಟ್ನೀ ಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಮುಸ್ಲಿಂ ಸಮಾಜಕ್ಕೆ ಟಿಕೆಟ್ ಕೊಡುವುದಿಲ್ಲ ಎಂ‌ದು ಸ್ಪಷ್ಟಪಡಿಸಿದರು. ಭಾರತೀಯ ಜನತಾ ಪಕ್ಷಕ್ಕೆ ಕುರುಬರ, ಒಕ್ಕಲಿಗರ, ಲಿಂಗಾಯತರ ಅಥವಾ ಬ್ರಾಹ್ಮಣರ ಸಮಾಜದ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡುತ್ತೇವೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ, ನಮ್ಮ ಪಕ್ಷ ಬಿಟ್ಟರೆ ಬೇರೆ ಯಾವ ಪಾರ್ಟಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಿಲ್ಲ ಎಂದರು. ಯಾರು ಜನರ ಮಧ್ಯೆ ಇರುತ್ತಾರೋ ಅವರನ್ನು ಹುಡುಕಿ ಟಿಕೆಟ್ ಕೊಡಲಾಗುತ್ತದೆ. ಅದನ್ನು ಹೈಕಮಾಂಡ ನಿರ್ಧರಿಸುತ್ತದೆ ಎಂದು ಈಶ್ವರಪ್ಪ ಹೇಳಿದರು.

ಸಂತೋಷ್ ಆತ್ಮಹತ್ಯೆಯತ್ನ ಪ್ರಕರಣ; ವೀಡಿಯೋ ಬಿಡುಗಡೆ ಮಾಡಿ; ಕಾಂಗ್ರೆಸ್’ಗೆ ಬಿಜೆಪಿ ಸವಾಲು

ಬೆಳಗಾವಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವೀಡಿಯೋವೊಂದು ಕಾರಣ ಎಂದಿರುವ ಡಿಕೇಶಿ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮುಠ್ಠಾಳತನದ್ದು, ಈ ರೀತಿ ಹೇಳಿಕೆ ಕೊಡೋಕೆ ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು ಎಂದಿದ್ದಾರೆ. ವಿಡಿಯೊ ಲೀಕ್ ಆಗಿದೆ ಅಂದರೆ ವಿಡಿಯೊ ಇವರ ಹತ್ತಿರ ಇರಬೇಕಲ್ಲ. ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಿ ಎಂದು ಡಿಕೆಶಿಗೆ ಈಶ್ವರಪ್ಪ ಸವಾಲು ಹಾಕಿದರು. ಏನೇ ಅಪಾದನೆ ಮಾಡಬೇಕು ಅಂದರೆ ದಾಖಲೆ ಬೇಕು ಎಂದ ಈಶ್ವರಪ್ಪ, ಎಂಎಲ್ಎ ಯಾರು, ಎಂಎಲ್ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಡಿಕೆಶಿ ಪೂಜೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಡುಪಿ ಜಿಲ್ಲೆ ಕುಂದಾಪುರದ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಮತ್ತಿತರರು ಹಾಜರಿದ್ದರು.

ಸಂತೋಷ್ ಆತ್ಮಹತ್ಯೆಯತ್ನ ಪ್ರಕರಣ; ಪೊಲೀಸರಿಂದ ಪ್ರಕರಣ ದಾಖಲು

ಬೆಂಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಏನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಬೆಂಗಳೂರಿನ ಸದಾಶಿವ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಂತೋಷ್ ಅವರು ಶುಕ್ರವಾರ ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ತಕ್ಷಣ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆ ಅಧಿಕಾರಿಗಳು ಎಂಎಲ್ ಸಿ ರಿಪೋರ್ಟ್ ಕೆಳುಹಿದ್ದಾರೆನ್ನಲಾಗಿದ್ದು ಈ ವರದಿ ಆಧರಿಸಿ ಸದಾಶಿವನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಯುವರತ್ನ’ದ ‘ಪವರ್ ಆಫ್ ಯೂತ್…’ ಪ್ರೋಮೋಗೆ ಸಕತ್ ಮೆಚ್ಚುಗೆ

ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರ ಕನ್ನಡ ಸಿನಿಲೋಕದಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ರಾಜ್ ಪರಿವಾರ ಕೂಡಾ ಈ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈ ನಡುವೆ’ಯುವರತ್ನ’ ಚಿತ್ರದ ‘ಪವರ್ ಆಫ್ ಯೂತ್…’ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ.ಸಂತೋಷ್ ಆನಂದರಾಮ್ ನಿರ್ದೇಶಿಸಿರುವ ಈ ಸಿನಿಮಾದ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.  

ಕೊರೋನಾ ನಿಯಂತ್ರಣ ಲಸಿಕೆ; ಬಯೋಟೆಕ್ ಪಾರ್ಕ್’ಗೆ ಪ್ರಧಾನಿ ಭೇಟಿ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿಗೆ ಬ್ರೇಕ್ ಹಾಕುವ ಲಸಿಕೆ ಸಿದ್ಧವಾಗಿದೆ. ಈ ಸಂಜೀವಿನಿ ಸಿದ್ಧಪಡಿಸುವಲ್ಲಿ ತೊಡಗಿರುವ ಸಂಶೋಧಕರನ್ನು ಹುರಿದುಂಬಿಸುವ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಅಹಮದಾಬಾದ್’ಗೆ ತೆರಳಿ, ಝೈಡಸ್ ಬಯೋಟೆಕ್ ಪಾರ್ಕ್’ಗೆ ಭೇಟಿ ನೀಡಿದರು. ಅಲ್ಲಿನ ವಿಜ್ಞಾನಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ ಕೊರೋನಾಗೆ ಔಷಧಿಯಾಗಿರುವ ಲಸಿಕೆ ಬಗ್ಗೆ ಮಾಹಿತಿ ಪಡೆದರು. ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿರುವ ಪುಣೆಯ ಸೀರಂ ಇನ್’ಸ್ಟಿಟ್ಯೂಟ್ ಹಾಗೂ ಹೈದರಾಬಾದ್ ಸಮೀಪದ ಹಕೀಂಪೇಟ್’ನಲ್ಲಿನ ಭಾರತ್ ಬಯೋಟೆಕ್ ಘಟಕದ ಪ್ರಧಾನಿ ಭೇಟಿಯೂ ಕುತೂಹಲ ಕೆರಳಿಸಿದೆ.

ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ

ಮಂಗಳೂರು : ಕಡಲ ತಡಿ ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶಿ ಮಠದ ಶಾಖಾಮಠದಲ್ಲಿ ತುಳಸಿ ಪೂಜೆ ಅದ್ಧೂರಿಯಾಗಿ ನೆರವೇರಿತು. ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಯವರ ಮೊಕ್ಕಾಂ ನಡೆಯುತ್ತಿದ್ದು ಅವರ ಉಪಸ್ಥಿತಿಯಲ್ಲಿ ವಿಶೇಷ ಕೈಂಕರ್ಯ ನೆರವೇರಿತು. ‘ತುಳಸಿ ಪೂಜೆ’ ಪ್ರಯುಕ್ತ ಸಂಸ್ಥಾನದ ಶ್ರೀ ಕೃಷ್ಣ ದೇವರಿಗೆ ಶ್ರೀಗಳ ಮುಂದಾಳುತ್ವದಲ್ಲಿ ಪಂಚಾಮೃತ, ಕ್ಷೀರಾಭಿಷೇಕ  ಅಭಿಷೇಕ ನೆರವೇರಿತು

ಕಟೀಲ್’ರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ: ಡಿಕೆಶಿ ಗುಟುರು

ಕಾರವಾರ: ಕಾಂಗೇಸ್ ವಿರುದ್ಧ ಟೀಕೆ ಮಾಡಿರುವ ಬಿಜೆಪಿ ರಾಜ್ಯಅಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಗರಂ ಆಗಿದ್ದಾರೆ. ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಕಟೀಲ್’ರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಅವರು ಮಾದಕ ದ್ರವ್ಯ ಹಣದಿಂದ ಸರ್ಕಾರ ನಡೆಸಿದ್ದರೆ, ಇದುವರೆಗೂ ಯಾಕೆ ಎಫ್ ಐಆರ್ ದಾಖಲಿಸಿಲ್ಲ ಎಂದು ಪ್ರಡಿಕೆಶಿ, ನಳಿನ್ ಕುಮಾರ್ ಗೆ ಹೆಚ್ಚುಕಮ್ಮಿ ಆಗಿರಬೇಕು. ಅವರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ ಎಂದರು. ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ಕಟೀಲ್ ಆ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿ. ಅವರಿಗೆ ಅಲ್ಪಸ್ವಲ್ಪ ರಾಜಕೀಯ ಜ್ಞಾನ ಇದೆ ಎಂದುಕೊಂಡಿದ್ದೆ. ಒಂದು ಸರ್ಕಾರವನ್ನು ಡ್ರಗ್ಸ್ ಹಣದಿಂದ ನಡೆಸಲಾಗುತ್ತದೆ ಎಂಬ ಹೇಳಿಕೆ ಅವರ ಸ್ಥಾನಕ್ಕೆ ಕಳಂಕ ತರುವಂತಿದೆ ಎಂದು ಪ್ರತಿಕ್ರಿಯಿಸಿದರು. ನಾವು ವಿರೋಧ ಪಕ್ಷದವರು. ನಮಗೂ ಬಿಜೆಪಿ ಆಂತರಿಕ…

BSY ಆಪ್ತ ಸಂತೋಷ್ ಆತ್ಮಹತ್ಯೆಯತ್ನಕ್ಕೆ ಕಾರಣವಾದ ವೀಡಿಯೋ ಯಾವುದು?

ಕಾರವಾರ: ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ರಾಜ್ಯ ರಾಜಕಾರಣದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ಸರ್ನ್ದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ದಂಡನಾಯಕರು ನೀಡಿರುವ ಸ್ಪೋಟಕ ಹೇಳಿಕೆಯೊಂದು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಏನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಕುರಿತಂತೆ ಕಾರವಾರದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದೊಂದು ಗಂಭೀರವಾದ ವಿಚಾರ. ಸಂತೋಷ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಸುದ್ದಿ ಎರಡು ತಿಂಗಳಿಂದ ಹರಿದಾಡಿತ್ತು. ಇದರಲ್ಲಿ ಸಾಕಷ್ಟು ಗೌಪ್ಯ ಅಡಗಿವೆ. ಈ ಪ್ರಕರಣವನ್ನು ಸರ್ಕಾರ ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ. ಉನ್ನತ ಮಟ್ಟದ ತನಿಖೆ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ನನಗೆ ಗೊತ್ತಿದೆ. ಅವರ ಯಾವುದೋ ಒಂದು ವಿಡಿಯೋವನ್ನು ಬಳಸಿ ಒಬ್ಬ ಸಚಿವ ಹಾಗೂ ಎಂಎಲ್ ಸಿ ಬೆದರಿಕೆ…

ಗ್ರಾಮ ಪಂಚಾಯ್ತಿ ಚುನಾವಣೆಗೆ ಬಿಜೆಪಿ ರಣಕಹಳೆ; ಗ್ರಾಮ ಸ್ವರಾಜ್ಯ ಸಮಾವೇಶ

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿರುವ ಬಿಜೆಪಿ, ಇದೀಗ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸುತ್ತಿದೆ. ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೋದಿ ಸರ್ಕಾರದ ಸಾಧನೆಗಳತ್ತ ಬೆಳಕು ಚೆಲ್ಲಿದರು. ರಾಜ್ಯ ಸರ್ಕಾರವೂ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸಂಸದರಾದ ಮುನಿಸ್ವಾಮಿ, ಶೋಭಾ ಕರಂದ್ಲಾಜೆ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಲಾಲಾಜಿ ಆರ್. ಮೆಂಡನ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಮೊದಲಾದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.