ದೆಹಲಿ: ಕಾಂಗ್ರೆಸ್’ನ ಹಿರಿಯ ನಾಯಕ ರಾಜ್ಯಸಭಾ ಸದಸ್ಯಹಮೀದ್ ಪಟೇಲ್ ನಿಧನಕ್ಕೆ ಮುಖಂಡರನೇಕರು ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ನಿಧನ ಬಗ್ಗೆ ಶೋಕ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಅಹ್ಮದ್ ಪಟೇಲ್ ಅವರು ಉತ್ತಮ ರಾಜಕಾರಣಿಯಾಗಿದ್ದರು. ಅವರ ನಿಧನದಿಂದಾಗಿ ದೇಶಕ್ಕೆ ಭಾರೀ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. I'm shocked and deeply saddened by the demise of senior Congress leader and Rajya Sabha MP Shri. @AhmedPatel. This is a great loss to our nation and the INC. May his soul rest in peace. — H D Deve Gowda (@H_D_Devegowda) November 25, 2020
Year: 2020
ಅಹ್ಮದ್ ಪಟೇಲ್ ಒಬ್ಬ ಜನಾನುರಾಗಿ ನಾಯಕ ; ಪ್ರಧಾನಿ ಮೋದಿ ಬಣ್ಣನೆ
ದೆಹಲಿ: ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಅಹ್ಮದ್ ಪಟೇಲ್ ರಾಜ್ಯಸಭಾ ಸದಸ್ಯರಾಗಿದ್ದರು. ಕಾಂಗ್ರೆಸ್ ಹಿರಿಯ ನಾಯಕನ ನಿಧನಕ್ಕೆ ಮುಖಂಡರನೇಕರು ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ನಿಧನ ಬಗ್ಗೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಹ್ಮದ್ ಪಟೇಲ್ ಅವರು ಉತ್ತಮ ರಾಜಕಾರಣಿಯಾಗಿದ್ದರು. ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿರುವ ಜನಾನುರಾಗಿ ನಾಯಕರಾಗಿದ್ದಾರೆಂದು ಬಣ್ಣಿಸಿದ್ದಾರೆ. Saddened by the demise of Ahmed Patel Ji. He spent years in public life, serving society. Known for his sharp mind, his role in strengthening the Congress Party would always be remembered. Spoke to his son Faisal and expressed condolences. May Ahmed Bhai’s soul rest in peace. — Narendra Modi (@narendramodi) November…
ವಿದ್ಯುತ್ ಹಗರಣದ ಸುಳಿಯಲ್ಲಿ ಬಿಜೆಪಿ ಸರ್ಕಾರ; ಏನಿದು ಆಪ್ ಸವಾಲು?
ಬೆಂಗಳೂರು: ವಿದ್ಯುತ್ ಖರೀದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಭಾರೀ ಹಗರಣ ನಡೆದಿದೆಯೇ? ಈ ಕುರಿತ ಆಮ್ ಆದ್ಮಿ ಪಕ್ಷದ ನಾಯಕರು ಮೂರು ಪ್ರಶ್ನೆಗಳನ್ನು ಮುಂದಿಟ್ಟು ಸಿಎಂ ಯಡಿಯೂರಪ್ಪ ಅವರನ್ನು ಕೆಣಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ನಾಯಕ ಪೃಥ್ವಿ ರೆಡ್ಡಿ, ಅದಾನಿಯ ಉಡುಪಿ ಪವರ್‌ನಿಂದ 2018 ರಿಂದ 2020 ರವರೆಗೆ ಪ್ರತಿ ಕಿಲೋವ್ಯಾಟ್‌ಗೆ 4.78 ರೂ.ನಿಂದ 6.80 ರೂ.ಗೆ ಖರೀದಿ ಬೆಲೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ ಎಂದು ಆರೋಪಿಸಿದ್ದಾರೆ. ವಿದ್ಯುತ್ ಖರೀದಿಯಲ್ಲಿನ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆಯಿಂದ ಆಗಿರುವ ಈ ನಷ್ಟವನ್ನು ಕರ್ನಾಟಕದ ಜನರ ಮೂಲಕ ಹೇಗೆ ವಸೂಲಿ ಮಾಡಲಾಗುತ್ತಿದೆ ಎಂಬ ಬಗ್ಗೆ ಅವರು ದಾಖಲೆಗಳನ್ನೂ ನೀಡಿದ್ದಾರೆ. ಈ ಹಗರಣ ಸಂಬಂಧ ಇಂಧನ ಖಾತೆಯನ್ನು ಹೊಂದಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ 3 ಪ್ರಶ್ನೆಗಳನ್ನು ಆಪ್ ನಾಯಕ ಪೃಥ್ವಿ ರೆಡ್ಡಿ, ಮುಂದಿಟ್ಟಿದ್ದಾರೆ. ಮೂರು…
ಲವ್ ಜಿಹಾದ್’ಗೆ ಬ್ರೇಕ್; ಬಿಜೆಪಿ ಸರ್ಕಾರದಿಂದ ಕಾನೂನು ಜಾರಿ
ಲವ್ ಜಿಹಾದ್ ವಿರುದ್ಧ ಸಂಘ ಪರಿವಾರ ನಿರಂತರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಇದೀಗ ಸಂಘದ ವಿವಿಧ ಕ್ಷೇತ್ರಗಳಲ್ಲೊಂದಾದ ರಾಜಕೀಯ ಪಕ್ಷ ಬಿಜೆಪಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಲವ್ ಜಿಹಾದಿ ತಡೆಯಲು ಕಾನೂನಿನ ಅಗತ್ಯದ ಬಗ್ಗೆ ಚರ್ಚೆ ಸಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ಕಾನೂನು ಜಾರಿಗೆ ಮುನ್ನುಡಿ ಬರೆದಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಈ ಸಂಬಂಧ ಸುಗ್ರೀವಾಜ್ಯೇಯನ್ನು ಹೊರಡಿಸಿ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ವಿವಾಹಕ್ಕಾಗಿ ಧಾರ್ಮಿಕ ಮತಾಂತರವಾಗುವುದರ ವಿರುದ್ಧ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದ್ದು ಬಳಿಕ ಇದೀಗ ಕಾನೂನಾಗಿ ಮಾರ್ಪಟ್ಟಿದೆ. ಕಾನೂನು ಉಲ್ಲಂಘಿಸಿದರೆ 10 ವರ್ಷದವರೆಗೂ ಜೈಲು ಶಿಕ್ಷೆಯಾಗಲಿದೆ. ಆರೆಸ್ಸೆಸ್ ವಿಚಾರ ಧಾರೆಗಳನ್ನು ಕಾನೂನು ರೂಪದಲ್ಲಿ ಜಾರಿಗೊಳಿಸುವುದರಲ್ಲಿ ಮೊದಲಿಗರಾಗಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಲವ್ ಜಿಹಾದ್ ವಿರುದ್ಧವೂ ಕಾನೂನು ರೂಪಿಸಿ ದೇಶದ…
ಅಸಾದುದ್ದೀನ್ ಓವೈಸಿಗೆ ಬಿಜೆಪಿ ಬಿರಿಯಾನಿ
ಹೈದರಾಬಾದ್: ಜಿಹೆಚ್ಎಂಸಿ ಚುನಾವಣೆಯಲ್ಲಿ ಬಿರಿಯಾನಿ ರಾಜಕೀಯ ಕುರಿತು ನಾಯಕರ ನಡುವೆ ಕಾದಾಟ ಶುರುವಾದಂತಿದೆ. ರಾಜಕೀಯ ಟೀಕಾಸ್ತ್ರಗಳ ನಡುವೆ ಇದೀಗ ಬಿರಿಯಾನಿ ವಿಚಾರ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಏನಿದು ಬಿರಿಯಾನಿ ತಗಾದೆ ಅಂತೀರಾ.. ಜಿಹೆಚ್ಎಂಸಿ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಾದಾಟವಾಗಿದ್ದು ಬಿಜೆಪಿ ನಾಯಕರ ಕಾರ್ಯವೈಖರಿ ಬಗ್ಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕಟು ಟೀಕೆ ಮಾಡಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಓವೈಸಿ, ಬಿಜೆಪಿ ನಾಯಕರು ಹತಾಶೆಗೊಳಗಾಗಿದ್ದಾರೆ, ಅವರಿಗೆ ಏನೂ ಅರ್ಥವಾಗುತ್ತಿಲ್ಲ. ಅವರು ಬೀಫ್ ಬಿರಿಯಾನಿ ತಿನ್ನಲಿ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಗೋಶಮಹಲ್ ನ ಶಾಸಕ ರಾಜ ಸಿಂಗ್, ಓವೈಸಿಯ್ವರನ್ನು ಹಂದಿ ಮಾಂಸ ಬಿರಿಯಾನಿ ತಿನ್ನಲು ಆಹ್ವಾನಿಸಿದ್ದಾರೆ. ನಮ್ಮಲ್ಲಿ ಸ್ವಾದಿಷ್ಟ ಪೋರ್ಕ್ ಬಿರಿಯಾನಿ ತಯಾರಾಗಲಿದೆ. ಬಿರಿಯಾನಿ ತಿನ್ನುವ ಆಸೆ ಇದ್ದರೆ, ನಾನು ಕೊಡಿಸುತ್ತೇನೆ ಎಂದು ಓವೈಸಿಗೆ ರಾಜ ಸಿಂಗ್ ಆಹ್ವಾನಿಸಿದ್ದಾರೆ. ಬಿರಿಯಾನಿ ಟೀಕೆಗಳು…
ಸೋನಿಯಾ ಗಾಂಧೀ ಆಪ್ತ ಅಹ್ಮದ್ ಪಟೇಲ್ ವಿಧಿವಶ
ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಇನ್ನಿಲ್ಲ. ಕೊರೋನಾ ಸೋಂಕಿನಿಂದ ಪಾರಾದರೂ ಅನಂತರದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹ್ಮದ್ ಪಟೇಲ್ ಅವರು ಬರಬರುತ್ತಾ ಅಂಗಾಂಗ ವೈಫಲ್ಯಕ್ಕೊಳಗಾಗಿದ್ದರೆನ್ನಲಾಗಿದೆ. ಇಂದು ನಸುಕಿನ ಜಾವ ೩.೩೦ ರ ಸುಮಾರಿಗೆ ಕೊನೆಯುಸಿರೆಳೆದರೆಂದು ಅವರ ಆಪ್ತರು ತಿಳಿಸಿದ್ದಾರೆ. ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿದ್ದ ಅಹ್ಮದ್ ಪಟೇಲ್ ರಾಜ್ಯಸಭಾ ಸದಸ್ಯರಾಗಿದ್ದರು. ಕಾಂಗ್ರೆಸ್ ಹಿರಿಯ ನಾಯಕನ ನಿಧಾನಕ್ಕೆ ಮುಖಂಡರನೇಕರು ಸಂತಾಪ ಸೂಚಿಸಿದ್ದಾರೆ.
ಮತ್ತೊಬ್ಬರು ಖ್ಯಾತ ಸಿನಿಮಾ ತಾರೆ ಬಿಜೆಪಿಗೆ
ದಕ್ಷಿಣದ ರಾಜ್ಯಗಳಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಮುಂದುವರಿದಿದ್ದು, ದಕ್ಷಿಣ ಭಾರತದ ಮತ್ತೊಬ್ಬರು ಖ್ಯಾತ ಸಿನಿಮಾ ನಟಿ ಬಿಜೆಪಿ ಸೇರಲು ಸಿದ್ದರಾಗಿದ್ದಾರೆ. ಕೆಲ ಸಮಯದ ಹಿಂದಷ್ಟೇ ಬಹುಭಾಷಾ ತಾರೆ ಖುಷ್ಬೂ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದ್ದರು. ಇದೀಗ ಮತ್ತೊಬ್ಬರು ಬಹುಭಾಷಾ ತಾರೆ ವಿಜಯಶಾಂತಿ ಕೂಡಾ ಕಮಲ ಹಿಡಿಯಲಿದ್ದಾರೆ. ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ. ಅಮಿತ್ ಷಾ ಸಮ್ಮುಖದಲ್ಲಿ ವಿಜಯಶಾಂತಿ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ. ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಸಂದರ್ಭದಲ್ಲೇ ವಿಜಯಶಾಂತಿ ಬಿಜೆಪಿ ಸೇರುತ್ತಿರುವುದು ತೀವ್ರ ಕುತೂಹಲಕಾರಿ ಬೆಳವಣಿಗೆಯಾಗಿದೆ.
ಮತ್ತೊಂದು ತ್ರಿಲ್ಲರ್ ಮೂವೀ ‘ಮನೆ ನಂಬರ್ 13’
ಕನ್ನಡದಲ್ಲಿ ಮತ್ತೊಂದು ತ್ರಿಲ್ಲರ್ ಮೂವೀ ಸಿದ್ಧಗೊಳ್ಳುತ್ತಿದೆ. ರಮಣ ಮತ್ತು ಐಶ್ವರ್ಯ ಗೌಡ ಅಭಿನಯದ ‘ಮನೆ ನಂಬರ್ 13’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿವಿ ಕತಿರೆಸನ್ ನಿರ್ದೇಶಿಸಿರುವ ‘ಮನೆ ನಂಬರ್ 13’ ಭಾಯಾನಕ ಸನ್ನಿವೇಶದ ದೃಶ್ಯಗಳನ್ನು ಹೊಂದಿದ್ದು ನೋಡುಗರ ಎದೆಬಡಿತವನ್ನು ಹೆಚ್ಚಿಸುವಂತಿದೆ.
ಕಾರಜೋಳ ಏತನೀರಾವರಿ ವ್ಯಾಪ್ತಿಯ ಡಿಸ್ಟ್ರೀಬ್ಯುಟರಿ ಜಾಲ ಕಾಮಗಾರಿ ತಕ್ಷಣ ಕೈಗೊಳ್ಳಿ; ಅಧಿಕಾರಿಗಳಿಗೆ ಡಿಸಿಎಂ ನಿರ್ದೇಶನ
ಜಯಪುರ : ಕಾರಜೋಳ ಏತನೀರಾವರಿ ವ್ಯಾಪ್ತಿಯ ಡಿಸ್ಟ್ರಿಬ್ಯುಟರಿಸ್ ಜಾಲದ ಕಾಮಗಾರಿಗಳಿಗಾಗಿ 3.80 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾಮಗಾರಿ ಆರಂಭಿಸುವಂತೆ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಿರ್ದೇಶನ ನೀಡಿದ್ದಾರೆ. ಕಾರಜೋಳ ಗ್ರಾಮದಲ್ಲಿ ಬಬಲೇಶ್ವರ, ಕಾಖಂಡಕಿ, ಕಾರಜೋಳ ರಾಷ್ಟ್ರೀಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆ 15 ಕಿ.ಮೀ ರಿಂದ 21 ಕಿ.ಮೀ ವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, 45 ಲಕ್ಷ ರೂ. ವೆಚ್ಚದ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಗೋವಿಂದ ಕಾರಜೋಳಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಾರಜೋಳ ಗ್ರಾಮ ಅತ್ಯಂತ ಕಡೆಗಣಿಸಿದ ಗ್ರಾಮವಾಗಿತ್ತು. ಸದ್ಯಕ್ಕೆ ಇತ್ತೀಚೆಗೆ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಈ ಭಾಗದ ರೈತರ ಅನುಕೂಲಕ್ಕಾಗಿ ಹೊಲಗಾಲುವೆಗಳಿಗೆ 7 ಕೋಟಿ ರೂ.ಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕಾರಜೋಳ ಗ್ರಾಮ ಕಡು ಬಡವರಿಂದ ಕೂಡಿದ…
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಜಯಪ್ರಕಾಶ್ ಹೆಗ್ಡೆ ನೇಮಕ
ಬೆಂಗಳೂರು: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಜಯಪ್ರಕಾಶ್ ಹೆಗ್ಡೆಯವರು ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಪಕ್ಷಗಲಿಂದ ಸ್ಪರ್ಧಿಸಿ ಶಾಸಕ, ಸಂಸದರಾಗಿದ್ದರು. ಬದಲಾದ ಪರಿಸ್ತಿತಿಯ್ಲಲಿ ಕೆಲ ವರ್ಷಗಳಿಂದ ಇವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಇದೀಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
