ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಅನ್ನದಾತರ ಆಕ್ರೋಶಕ್ಕೆ ಬಿಜೆಪಿ ಕಚೇರಿ ಹಾನಿಗೀಡಾಗಿದೆ. ಪಂಜಾಬ್’ನ ಬಟಿಂಡಾದಲ್ಲಿ ಶುಕ್ರವಾರ ರೈತರ ಪ್ರತಿಭಟನೆ ವೇಳೆ ಉದ್ರಿಕ್ತರು ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮ ಸಂದರ್ಭದಲ್ಲಿ ಹೊರಗಡೆ ರತರು ಪ್ರತಿಭಟನೆ ನಡೆಸುತ್ತಿದ್ದರು. ರೈತರ ಪ್ರತಿಭಟನೆ ನಡುವೆ ಕೆಲವರು ದಾಂಧಲೆ ನಡೆಸಿದ್ದಾರೆ. ಬಿಜೆಪಿ ಕಚೇರಿಯ ಕುರ್ಚಿ, ಟಿವಿ ಸಹಿತ ಪೀಠೋಪಕರಣಗಳನ್ನು ಹಾನಿಗೊಳಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Year: 2020
ಆರೆಸ್ಸೆಸ್’ನ ಕೌತುಕದ ಮಣಿ..! ಈ ಹೊಳ್ಳರ ಬಗ್ಗೆ ನಿಮಗೆ ಗೊತ್ತೇ?
ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ವೆಂಕಟರಮಣ ಹೊಳ್ಳರಿಗೆ ಶ್ರದ್ದಾಂಜಲಿಯ ಮಹಾಪೂರವೇ ಹರಿದುಬಂದಿದೆ. ಅಖಂಡ ಬ್ರಹ್ಮಾಚಾರ್ಯ ಮೂಲಕ ಆರೆಸ್ಸೆಸ್ ಭೀಷ್ಮ ಎಂದೇ ಕರಾವಳಿಯ ಕೇಸರಿ ಪಡೆಯಲ್ಲಿ ಗುರುತಿಸಿಕೊಂಡಿರುವ ವೆಂಕಟರಮಣ ಹೊಳ್ಳರ ಬಗ್ಗೆಯೇ ಇದೀಗ ಎಲ್ಲರಿಂದಲೂ ಗುಣಗಾನ. ಇದಕ್ಕೆ ಕಾರಣವೂ ಇದೆ. ದಕ್ಷಿಣ ಕನ್ನಡದ ಅದರಲ್ಲೂ ಪುತ್ತೂರು ಜಿಲ್ಲೆಯಲ್ಲಿ (ಆರೆಸ್ಸೆಸ್ ಪ್ರಕಾರ ಪುತ್ತೂರು ಒಂದು ಸಂಘಟನಾತ್ಮಕ ಜಿಲ್ಲೆ) ಬಹುತೇಕ ಕಾರ್ಯಕರ್ತರನ್ನು ಗುರುತಿಸಿ ಐಟಿಸಿ-ಒಟಿಸಿ ಮಾಡಿಸಿ ಸಂಗದ ಸೈನಿಕರನ್ನು ರೂಪಿಸಿದ ಹೆಗ್ಗಳಿಕೆ ಇವರದ್ದು. ಹಾಗಾಗಿಯೇ ಇವರ ನಿಧನದ ಸುದ್ದಿ ಅಪ್ಪಳಿಸಿದ ನಂತರವಂತೂ ಕರಾವಳಿಯ ಬಹುತೇಕ ಮನೆಗಳಲ್ಲಿ ಈಗ ಮೌನ ಆವರಿಸಿದೆ. ಅಗ್ರ ಬೈಲು ವೆಂಕಟರಮಣ ಹೊಳ್ಳರ ಬಗ್ಗೆ ಗುಣಗಾನಗಳು ಸಾಗುತ್ತಿದ್ದರೆ, ಇನ್ನೊಂದೆಡೆ ಅವರ ಬದುಕಿನ ಚಿತ್ರಣವನ್ನು ತಿಳಿಯುವ ಹಂಬಲ ಹಲವರದ್ದು. ಅದಾಗಲೇ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಹೊಳ್ಳರ ಬದುಕು ಚಿತ್ರಣವನ್ನು ಬರೆದು ನ್ಯೂಸ್ ರೂಮ್’ಗೆ ಕಳುಹಿಸಿಕೊಟ್ಟಿದ್ದಾರೆ. ಈ ಬರಹವನ್ನು ಯಥಾರೀತಿ…
ಜಪಾನ್’ನಲ್ಲೂ ರೂಪಾಂತರಿ ಕೊರೋನಾ ತಲ್ಲಣ
ಟೋಕಿಯೋ: ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಜಪಾನ್’ನಲ್ಲೂ ತಲ್ಲಣ ಉಂಟು ಮಾಡಿದೆ. ಬ್ರಿಟನ್ ನಲ್ಲಿ ಕಾಣಿಸಿಕೊಂಡ ಈ ಮಹಾಮಾರಿ ವೈರಾಣು ಜಪಾನಿಗೂ ಕಾಲಿಟ್ಟಿದೆ.ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್’ನಿಂದ ಜಪಾನ್’ಗೆ ಬಂದ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಪಾನ್ ಆರೋಗ್ಯ ಸಚಿವ ನೊರಿಹಿಸಾ ತಮುರಾ, ಸೋಂಕು ದೃಢಪಟ್ಟವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಸಂಪರ್ಕದ ಮಾಹಿತಿ ಪಡೆಯಲಾಗುತ್ತಿದೆ ಎಂದಿದ್ದಾರೆ. ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ ಸೋಂಕು ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ವಿಲೀನ ಚಿಂತನೆ ವಿಚಾರ; ಅತೃಪ್ತ ನಾಯಕರ ಬಗ್ಗೆ ಹೆಚ್ಡಿಕೆ ಗರಂ
ಬೆಂಗಳೂರು: ಬಿಜೆಪಿ-ಜೆಡಿಎಸ್ ವಿಲೀನ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಜೆಡಿಎಸ್’ನ ಅನೇಕರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇನ್ನೂ ಕೆಲವರು ಬಹಿರಂಗವಾಗಿಯೇ ಸಿಟ್ಟು ಹೊರಹಾಕಿದ್ದಾರೆ. ನಾಯಕರ ಈ ಹೇಳಿಕೆಯಿಂದ ಸಿಡಿಮಿಡಿಗೊಂಡಿರುವ ಕುಮಾರಸ್ವಾಮಿ, ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ಪಕ್ಷದ ನಿರ್ಧಾರ ಮತ್ತು ಪಕ್ಷದ ಸಿದ್ಧಾಂತಗಳಿಂದ ಅಸಂತುಷ್ಟವಾಗಿರುವ ನಾಯಕರು ಜೆಡಿಎಸ್’ನಿಂದ ಹೊರ ಹೋಗಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಹೆಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಿಂದ ಪ್ರತಿಕ್ರಿಯಿಸಿರುವ ಅವರು, ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪಕ್ಷದ ಮುಖಂಡರ ಬಗ್ಗೆ ಮಾತನಾಡುತ್ತಿರುವವರು ಪಕ್ಷ ತ್ಯಜಿಸಲು ಸ್ವತಂತ್ರರು ಎಂದು ಹೇಳಿದ್ದಾರೆ. ಅಸಮಾಧಾನವಿದ್ದರೆ ತಾವೇ ನಿರ್ಗಮಿಸಬಹುದು. ಇಲ್ಲವಾದರೆ ಪಕ್ಷವೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಜೆಡಿಎಸ್ ಬೇರೆ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಹೆಚ್ಡಿಕೆ, ಪಕ್ಷವನ್ನು ಬಲಪಡಿಸಲು ನಾಯಕರು ಜನವರಿ 15…
ಐದು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ ಸಚಿವ ಜಾರಕಿಹೊಳಿ.
ಬೆಳಗಾವಿ: ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಾನವೀಯತೆ ಮೆರೆದಿದ್ದಾರೆ. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಗೋಕಾಕ್ ತಾಲೂಕಿನ ಐದು ಶಾಲೆಗಳನ್ನು ದತ್ತು ಪಡೆದುಕೊಂಡು ಶಿಕ್ಷಣ ಇಲಾಖೆಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪಧಾಳದ…
ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಚೇರಿ ಮುಂದೆ ಪಿಎಫ್ಐ ಪ್ರತಿಭಟನೆ; ಬಿಜೆಪಿ ಗರಂ
ಬೆಂಗಳೂರು: ವಿದೇಶಕ್ಕೆ ಪರಾರಿಯಾಗಲು ಕೇರಳದ ತಿರುವನಂತಪುರ ಅಂತರರಾಷ್ಟಿಯ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದ ಪಿಎಫ್ಐ ನಾಯಕ ರವೂಫ್ ಶರೀಫ್ ಬಂಧನವನ್ನು ಖಂಡಿಸಿ ಪಿಎಫ್ಐ ಸಂಘಟನೆಯು ಮಂಗಳೂರಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂಸದೀಯ ಕಚೇರಿ ಮುಂದೆ ನಡೆಸಿರುವ ಪ್ರತಿಭಟನೆ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರತಿಭಟನೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅನೇಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೂಲಭೂತವಾದಿ ಮತ್ತು ಪ್ರತ್ಯೇಕತಾವಾದಿ ಪಿಎಫ್ಐ ಸಂಘಟನೆಯನ್ನು ಕೂಡಲೇ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶಿಕ್ಷಾರ್ಹರಾದ ಅಪರಾಧಿ ಹಿನ್ನೆಲೆಯ ಈ ವ್ಯಕ್ತಿಗಳು ಮತ್ತು ಸಂಘಟನೆಗಳು ದೇಶದ ಹಿತದೃಷ್ಟಿಯಿಂದ ಜಾರಿ ನಿರ್ದೇಶನಾಲಯ ಕೈಗೊಂಡಿರುವ ತನಿಖೆಯ ಕ್ರಮಗಳನ್ನು ಪ್ರತಿಭಟಿಸುವ ನೈತಿಕ ಮತ್ತು ಪ್ರಜಾಸತ್ತಾತ್ಮಕ ನೆಲೆಯನ್ನು…
ಎಂಜಿನಿಯರಿಂಗ್, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ; ಸರ್ಕಾರ ಭರವಸೆ
ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಗೆ ತೆರೆದುಕೊಳ್ಳುವ ಉದ್ದಶದಿಂದ ಖಾಸಗಿ ಹಾಗೂ ಸಾರ್ವಜನಿಕ ಸ್ವಾಮ್ಯದ ಎಂಜಿನಿಯರಿಂಗ್, ಡಿಪ್ಲೊಮೋ, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ʼಉತ್ತಮ ಆಡಳಿತ ದಿನʼ (ಗುಡ್ ಗವರ್ನೆನ್ಸ್ ಡೇ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಎಲ್ಲ ಸವಾಲುಗಳನ್ನು ಎದುರಿಸಲು ಹಾಗೂ ವೈಯಕ್ತಿಕವಾಗಿಯೂ ಯಾವುದೇ ಸಮಸ್ಯೆಯನ್ನು ಮೆಟ್ಟಿ ನಿಲ್ಲಲು ಶಿಕ್ಷಣವೇ ಏಕೈಕ ರಾಜಮಾರ್ಗ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು. ಜಾಗತಿಕ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ, ರಚನಾತ್ಮಕ ಸ್ವಾಯತ್ತತೆ ನೀಡಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲಾಗುತ್ತಿದೆ.…
‘ಲವ್ ಜಿಹಾದಿ’ಯಲ್ಲಿ ಅಸಲಿ ಯಾರು..? ಸೋಶಿಯಲ್ ಮೀಡಿಯಾದಲ್ಲಿ ಕ್ರಾಸ್ ಫೈರ್?
ಕರಾವಳಿಯ ಸಿನಿಮಾ ಮಂದಿಯ ಮೇಲಿನ ಸಿಟ್ಟೋ? ಅಥವಾ ರಹಸ್ಯ ವಿಚಾರಕ್ಕೆ ತೀರಿಸಿದ ಸೇಡು ಇರಬಹುದೇ? ಲವ್ ಜಿಹಾದಿ ಆರೋಪದ ಅಸ್ತ್ರ ಬಿಜೆಪಿ ಪಾಳಯದಲ್ಲೇ ತಳಮಳಕ್ಕೆ ಕಾರಣವಾಗಿದೆ. ‘ಲವ್ ಜಿಹಾದ್’ ವಿರುದ್ಧ ಕೇಸರಿ ಕಾರ್ಯಕರ್ತರು ಬಹುಕಾಲದಿಂದಲೇ ಸಮರ ನಿರತರಾಗಿದ್ದಾರೆ. ಈ ಅಸ್ತ್ರವನ್ನೇ ರಹಸ್ಯವಾಗಿ ಪ್ರಯೋಗಿಸಿದ ಆರೆಸ್ಸೆಸ್ ವಿರೋಧಿಗಳು ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿದ್ದಾರೆ. ಹಿಂದೂ ಕಾರ್ಯಕರ್ತರ ಸೋಗಿನಲ್ಲಿ ವಿರೋಧಿಗಳು ಬಿಜೆಪಿ ಕಾರ್ಯಕರ್ತರ ಮೇಲೆಯೇ ಲವ್ ಜಿಹಾದಿಯ ಕಥೆ ಕಟ್ಟಿ ವಾಟ್ಸಾಪ್’ನಲ್ಲಿ ಹಾಕಿದ ಪೋಸ್ಟನ್ನು ತಾರಾತುರಿಯಲ್ಲೇ ಕೇಸರಿ ಕಾರ್ಯಕರ್ತರು ಶೇರ್ ಮಾಡಿ ಹಿಂದೂ ಕಾರ್ಯಕರ್ತರನ್ನೇ ಪೇಚಿಗೆ ಸಿಲುಕಿಸಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗುವಷ್ಟರಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರೇ ಅವಮಾನ ಅನುಭವಿಸುವಂತಾಯಿತು. ಏನಿದು ಪ್ರಕರಣ? ಬಣ್ಣ ಬಣ್ಣದ ಸಿನಿಮಾ ಖ್ಯಾತಿಯ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಇದೀಗ ತುಳು ಸಿನಿಮಾ ಕ್ಷೇತ್ರದಲ್ಲೂ ಕೆಲವು ಸಿನಿಮಾ ಮಾಡುತ್ತಿದ್ದಾರೆ. ‘ಭೋಜರಾಜ್ ಎಂಬಿಬಿಎಸ್’, ‘ಭಟ್ಕಳ್ ಟು ಮುಂಬೈ’…
ವಾಜಪೇಯಿ ಮಾರ್ಗದಲ್ಲಿ ಸಾಗಿ ರಾಷ್ಟ್ರ ಕಟ್ಟೋಣ; ಸಿ.ಟಿ.ರವಿ ಸಂಕಲ್ಪ
ಚಿಕ್ಕಮಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ದೇಶವ್ಯಾಪಿ ಇಂದು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಅಜಾತ ಶತ್ರು ವಾಜಪೇಯಿಯವರು ರೈತರ ಅಭ್ಯುದಯದ ಯೋಜನೆಗಳಿಗೆ ಮುನ್ನುಡಿ ಬರೆದವರು. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ರೈತರ ದಿನವಾನ್ನಾಗಿ ಬಿಜೆಪಿ ಕಾರ್ಯಕರ್ತರು ಆಚರಿಸುತ್ತಿದ್ದಾರೆ. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ ಗಮನಸೆಳೆಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತಿಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ನಾಯಕರು ಹಾಗೂ ಕಾರ್ಯಕರ್ತರು ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಭಾರತ ಮಾತೆ ಪರ ಜಯಘೋಷ ಮೊಳಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಪ್ರಧಾನಿ ವಾಜಪೇಯಿಯವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗಿ ಪಕ್ಷವನ್ನು ಬಲಗೊಳಿಸಿ ರಾಷ್ಟ್ರ ಕಟ್ಟುವ ಕೆಲಸ ಮಾಡೋಣ ಎಂದು ಕಾರ್ಯಕರ್ತರ ಜೊತೆ ಸಂಕಲ್ಪ ಮಾಡಿದರು.
ಕ್ರಿಸ್’ಮಸ್ ಹಿನ್ನೆಲೆ; ಆರ್ಚ್ ಬಿಷಪ್ ಭೇಟಿ ಭೇಟಿಯಾದ ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಬೆಂಗಳೂರಿನ ಆರ್ಚ್ ಬಿಷಪ್ ರೆವೆರೆಂಡ್ ಡಾ.ಪೀಟರ್ ಮೆಕಾಡೋ ಅವರನ್ನು ಭೇಟಿಯಾಗಿ ಕ್ರಿಸ್ ಮಸ್ ಹಾಗೂ ಹೊಸವರ್ಷದ ಶುಭಾಶಯಗಳನ್ನು ತಿಳಿಸಿದರು.
