ಬಿಎಸ್’ವೈ ಪಾಳಯಕ್ಕೆ ಜಿಗಿದರೇ ನಳಿನ್? ಸಿಎಂ ಯಡಿಯೂರಪ್ಪ ಸೇಫ್..!

ಬೆಂಗಳೂರು: ರಾಜ್ಯ ಸಂಪುಟ ವಿಸ್ತರಣೆಗೆ ರಂಗ ಸಜ್ಜಾಗುತ್ತಿದೆ. ಆದರೆ ಆಡಳಿತಾರೂಢ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಯಡಿಯೂರಪ್ಪ ಸಂಪುಟದ ವಿಸ್ತರಣೆಯಾಗಲೀ ಸರ್ಜರಿಯಾಗಲೀ ಗಜಪ್ರಸವವೇ ಸರಿ. ಆದರೆ ನಳಿನ್ ಕುಮಾರ್ ಅವರ ರಾಜಿಯ ನಡೆ ಸಿಎಂ ಬಿಎಸ್’ವೈ ಅವರಿಗೆ ವರದಾನವಾಗಲೂ ಬಹುದು. ಪ್ರಸ್ತುತ ಬಿಜೆಪಿಯಲ್ಲೀಗ ಬಣ ರಾಜಕೀಯ ಇಲ್ಲ. ಒಂದೆಡೆ ಬಿ.ಎಲ್.ಸಂತೋಷ್ ಬೆಂಬಲಿಗರು ಸಮರ ವಿರಾಮಕ್ಕೆ ತೀರ್ಮಾನಿಸಿದ್ದಾರೆನ್ನಲಾಗಿದೆ. ಬಿ.ಎಲ್. ಸಂತೋಷ್ ಬಂಟ ನಳಿನ್ ಕುಮಾರ್ ಕೂಡಾ ಯಡಿಯೂರಪ್ಪ ಹಾಗೂ ವಿಜಯೇಂದ್ರ ಜೊತೆ ರಾಜಿಯಾಗಿದ್ದು ರಾಜ್ಯ ಸರ್ಕಾರದ ವಿಚಾರದಲ್ಲಿ ಯಾವುದೇ ತಕರಾರು ಎತ್ತಿಲ್ಲ. ಬಿಜೆಪಿಯು ಭ್ರಷ್ಟಾಚಾರ ನಿರ್ಮೂಲನೆಯ ಮಂತ್ರ ಪಠಿಸುತ್ತಲೇ ಇರುವಾಗ ಕೊರೋನಾ ಹಗರಣದ ಆರೋಪ ತಮ್ಮ ಪಕ್ಷದ ವರ್ಚಸ್ಸಿಗೆ ಕಳಂಕ ಎನಿಸಿದರೂ ಸಂಬಂಧಪಟ್ಟ ಸಚಿವರ ಬಗ್ಗೆ ಆಡಳಿತ ಪಕ್ಷದ ಸಾರಥಿ ನಳಿನ್ ಕುಮಾರ್ ಕಟೀಲ್ ಮೃದು ದೋರಣೆ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮುನಿಸಿಕೊಂಡವರಿಂದಲೇ ಹೊಂದಾಣಿಕೆ..! ಭಾರತೀಯ ಜನತಾ ಪಕ್ಷದಲ್ಲೀಗ…

ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮತ್ತೆ 98 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮತ್ತೆ 98 ಮಂದಿ ಸಾವಿಗೀಡಾಗಿದ್ದಾರೆ. ಶನಿವಾರ 5,172 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 98 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ವಾರ ಸಂಖ್ಯೆ 2,412 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ 1,852 ಹೊಸ ಪ್ರಕರಣಗಳು ವರದಿಯಾಗಿದ್ದು, 27 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಮೈಸೂರಿನಲ್ಲಿ 65, ಬಳ್ಳಾರಿಯಲ್ಲಿ 269, ಕಲಬುರಗಿಯಲ್ಲಿ 219, ಬೆಳಗಾವಿ 219, ಧಾರವಾಡ 184, ಹಾಸನ 146, ದಕ್ಷಿಣಕನ್ನಡ 139, ಉಡುಪಿ 136, ಬಾಗಲಕೋಟೆ 134, ವಿಜಯಪುರ 129, ಶಿವಮೊಗ್ಗ 119, ರಾಯಚೂರು 109, ದಾವಣಗೆರೆ 108, ಕೊಪ್ಪಳ ಜಿಲ್ಲೆಯಲ್ಲಿ 107 ಹೊಸ ಪಾಸಿಟಿವ್ ಕೇಸ್’ಗಳು ವರದಿಯಾಗಿವೆ. ಇಂದಿನ 01/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka…

ಕೊರೋನಾ ವಿಚಾರ; ಕಣ್ಣಾಮುಚ್ಚಾಳೆಯಾಡುವ ಆಸ್ಪತ್ರೆಗಳಿಗೆ ಸರ್ಕಾರದ ಕಾನೂನು ಪ್ರಹಾರ

ಬೆಂಗಳೂರು: ಕೊರೋನಾ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಕಣ್ಣಾಮುಚ್ಚಾಲೆ ಆಟ ನೇಯುತ್ತಿದೆಯಾ? ರಾಜ್ಯ ಸರ್ಕಾರದ ನಿಯಮದ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಆದರೆ ಕೆಲವು ಆಸ್ಪತ್ರೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಕೆಂಡಾಮಂಡಲವಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಹೀಗಿದ್ದರೂ ನಿಯಮ ಪಾಲಿಸದ ಆಸ್ಪತ್ರೆ ವಿರುದ್ಧ ಸರ್ಕಾರ ಕಾನೂನು ಪ್ರಹಾರ ಮಾಡಿದೆ. ರಾಜ್ಯ ಸರ್ಕಾರ ಬೆಂಗಳೂರಿನ ಮಾರತ್ ಹಳ್ಳಿಯ ಸಾಕ್ರ ಖಾಸಗಿ ಆಸ್ಪತ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳಾಗಿ ಹೊಣೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸರ್ಕಾರದ ನಿಯಮದಂತೆ ಶೇ.50% ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಮಾರತ್ ಹಳ್ಳಿಯ ಸಾಕ್ರ ಆಸ್ಪತ್ರೆಯ…

ಕೊಂಚಾಡಿ ಕಾಶೀ ಮಠದಲ್ಲಿ 9 ದಿನಗಳ ಮಹಾ ವೈಭವ

ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಲೋಕ ಕಲ್ಯಾಣಾರ್ಥ ವಿವಿಧ ಕಿಂಕರ್ಯಗಳು ಆರಂಭವಾಗಿವೆ. ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಪ್ರಾರಂಭಗೊಂಡಿದ್ದು ಈ ಸಂದರ್ಭದಲ್ಲಿ ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪಾರಾಯಣಗಳು ಆಯೋಜಿತವಾಗಿವೆ. ಈ ಪುಣ್ಯಪ್ರದ ಶ್ರಾವಣ ಮಾಸದ ಪ್ರಾರಂಭದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ಲೀಲೆ – ವೈಭವ , ದೇವರ ಚರಿತ್ರೆ ” ಶ್ರೀ ರಾಮಾಯಣ ಪಾರಾಯಣ ಹಾಗೂ ಪ್ರವಚನ 9 ದಿನಗಳ ಕಾಲ ಜರುಗಲಿರುವುದು. ಆಗಸ್ಟ್ 4ರಂದು ಖುಗೋಪಾಕರ್ಮ, ಆಗಸ್ಟ್ 11ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಇದಲ್ಲದೇ ಆಗಸ್ಟ್ 22-26ರ ವರೆಗೆ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸೆಪ್ಟಂಬರ್ 1ರಂದು ಅನಂತ ಚತುರ್ದಶಿ ವ್ರತಾಚಾರಣೆ ನಡೆಯಲಿದೆ. ಇದನ್ನೂ…

ಅಮೆರಿಕಾದಲ್ಲೂ ಟಿಕ್ ಟಾಕ್ ಬ್ಯಾನ್?

ವಾಷಿಂಗ್ಟನ್: ಭಾರತ ಮಾದರಿಯಲ್ಲೇ ಅಮೆರಿಕದಲ್ಲೂ ಚೀನಾ ಮೂಲದ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಚೀನಾ ದೇಶದ ಟಿಕ್ ಟಾಕ್ ಅಪ್ಲಿಕೇಷನ‌ನ್ನು ಭಾರತ ಕೆಲವು ವಾರಗಳ ಹಿಂದಷ್ಟೇ ನಿಷೇಧಿಸಿತ್ತು.‌ ದೇಶದ ಭದ್ರತೆಯ ಕಾರಣಕ್ಕಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ. ಅಮೆರಿಕಾ ಕೂಡಾ ಇದೀಗ ಅದೇ ಹಾದಿ ತುಳಿಯಲು ತೀರ್ಮಾನಿಸಿದೆ. ಚೀನಾದ ಗುಪ್ತಚರಕ್ಕೆ ಟಿಕ್ ಟಾಕ್ ಮೂಲಕ ಮಾಹಿತಿ ರವಾನೆಯಾಗುತ್ತದೆ ಎಂಬ ಆತಂಕದಿಂದ ಟ್ರಂಪ್ ಆಡಳತ ಈ ಕ್ರಮಕ್ಕೆ ಮುಂದಾಗಿದೆ. ತನ್ನ ಗುಪ್ತಚರ ರಹಸ್ಯ ಚಟುವಟಿಕೆಗಳಿಗೆ ಸೋಷಿಯಲ್ ಮೀಡಿಯಾ ಆಪ್ ನ್ನು ಚೀನಾ ಬಳಸುತ್ತದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು ಮಾಹಿತಿ ಕಳೆಹಾಕಿರುವ ಹಿನ್ನೆಲೆಯಲ್ಲಿ ಸದ್ಯವೇ ಈ ಬಗ್ಗೆ ಆದೇಶ ಹೊರಡಿಸಲು ಟ್ರಂಪ್ ನಿರ್ಧರಿಸಿದ್ದಾರೆನ್ನಲಾಗಿದೆ.

ಯವಕರನ್ನೂ ಬಲಿತೆಗೆದುಕೊಳ್ಳುತ್ತದೆ ಕೊರೋನಾ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಯುವಕರನ್ನೂ ಬಲಿತೆಗೆದುಕೊಳ್ಳುತ್ತಿವೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಯುವ ಜನರೂ ಕೊರೋನಾ ವೈರಸ್‌ಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್, ವಿಶ್ವದಾದ್ಯಂತ 17.3 ದಶಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಯುವಕರನೇಕರು ಬಲಿಯಾಗಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ. ವಾಷಿಂಗ್ಟನ್‌ ‌ನಲ್ಲಿ ಹೇಳಿಕೆ ನೀಡಿರುವ ಅವರು, ವಿಷಮ ಪರಿಸ್ಥಿತಿ ಇರುವಾಗ ಯುವಕರೂ ಕೂಡಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಕರೆ ನೀಡಿದ್ದಾರೆ.

ದೇಶದಲ್ಲಿ ಕೊರೋನಾಗೆ ಒಟ್ಟು 35,747 ಮಂದಿ ಬಲಿ

ದೆಹಲಿ: ಭಾರತದಲ್ಲಿ ಕೊರೋನಾ ಆತಂಕ ಮುಂದುವರಿದಿದ್ದು, ಗುರುವಾರ ಒಂದೇ ದಿನ ವಿವಿಧ ರಾಜ್ಯಗಳಲ್ಲಿ 55 ಸಾವಿರ ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಮಾಹಿತಿ ಬಹಿರಂಗಪಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ , ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16 ಲಕ್ಷದ 38 ಸಾವಿರ ದಾಟಿದೆ ಎಂದು ಹೇಳಿದೆ. ಗುರುವಾರ 779 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 35 ಸಾವಿರದ 747ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರರಾಜ್ಯವೊಂದರಲ್ಲೇ 14 ಸಾವಿರದ 729 ಮಂದಿ ಮೃತಪಟ್ಟಿದ್ದರೆ, ತಮಿಳುನಾಡಿನಲ್ಲಿ 3 ಸಾವಿರದ 838 ಮಂದಿ ಮೃತಪಟ್ಟಿದ್ದಾರೆ.

ವರಮಹಾಲಕ್ಷ್ಮಿ ಹಬ್ಬ; ಸಚಿವ ಡಾ.ಸುಧಾಕರ್ ನೂತನ ಗೃಹ ಕಚೇರಿಯನ್ನು ಆರಂಭ

ಬೆಂಗಳೂರು: ಶ್ರಾವಣ ಮಾಸದ ಅದ್ಧೂರಿ ಹಬ್ಬ ಎಂದೇ ಗುರುತಾಗಿರುವ ವರಮಹಾಲಕ್ಷ್ಮೀ ಪೂಜೆಯನ್ನು ನಾಡಿನೆಲ್ಲೆಡೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕೊರೋನಾ ಸಂಕಟ ಕಾಲದಲ್ಲೂ ಅದೃಷ್ಟ ಲಕ್ಷ್ಮಿಯ ಪೂಜಾ ಕೈಂಕರ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಈ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದೇ ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ತಮ್ಮ ನೂತನ ಗೃಹ ಕಚೇರಿಯನ್ನು ಆರಂಭಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ 7 ಮಿನಿಸ್ಟರ್ಸ್ ಕ್ವಾಟರ್ಸ್ ನ 4ನೇ ನಂಬರ್ ನಿವಾಸದಲ್ಲಿನ ಗೃಹ ಕಚೇರಿಯಿಂದಲೇ ಎಲ್ಲಾ ಸಾರ್ವಜನಿಕ ಭೇಟಿ, ಕಾರ್ಯಕಲಾಪಗಳನ್ನು ನಿರ್ವಹಿಸಲಿದ್ದೇನೆ ಎಂದಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭ ದಿನದಂದು ಸ್ಯಾಂಕಿ ರಸ್ತೆಯಲ್ಲಿರುವ 7 ಮಿನಿಸ್ಟರ್ಸ್ ಕ್ವಾಟರ್ಸ್ ನ 4ನೇ ನಂಬರ್ ನಿವಾಸದಲ್ಲಿ ನನ್ನ ಗೃಹ ಕಚೇರಿ ಆರಂಭಿಸಲಿದ್ದೇನೆ. ಇಂದಿನಿಂದ ಎಲ್ಲಾ ಸಾರ್ವಜನಿಕ ಭೇಟಿ, ಕಾರ್ಯಕಲಾಪಗಳನ್ನು ಅಲ್ಲಿಂದಲೇ ನಿರ್ವಹಿಸಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಶುಭ…

‘ಟೆಲಿಗ್ರಾಮ್’ನಲ್ಲಿದೆ ದೈತ್ಯ ಫೇಲ್’ಗಳನ್ನು ಕಳುಹಿಸಲು ಅವಕಾಶ

ವಾಟ್ಸಾಪ್ ಜಗತ್ತಿನಲ್ಲೇ ಜನಪ್ರಿಯ ಮೆಸೆಂಜರ್ ಆಗಿ ಗಮನಸೆಳೆದಿದೆ. ಆದರೆ ಇದೀಗ ವಾಟ್ಸಾಪ್’ಗಿಂತಲೂ ಉತ್ತಮ ಆಯ್ಕೆಗೆ ‘ಟೆಲಿಗ್ರಾಮ್’ ವೇದಿಕೆಯಾಗುತ್ತಿದೆ. ವೀ ಟ್ರಾನ್’ಸ್ಫರ್ ನಿರ್ಬಂಧಿಸಲ್ಪಟ್ಟ ನಂತರ ದೈತ್ಯ ಫೈಲ್’ಗಳನ್ನು ಕಳುಹಿಸುವುದು ಪ್ರಯಾಸದ ಕೆಲಸವಾಗಿದೆ. ಇದೀಗ ಆ ಚಿಂತೆಯನ್ನು ಟೆಲಿಗ್ರಾಮ್ ದೂರ ಮಾಡಿದೆ. ಸೋಶಿಯಲ್ ಮೆಸೇಜಿಂಗ್ ಆ್ಯಪ್‌ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ತನ್ನ ಚಂದಾದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದು, ಸಂದೇಶ ರವಾನೆಯ ಜೊತೆಗೆ 2 ಜಿಬಿ ವರೆಗಿನ ಫೈಲ್’ ಗಳನ್ನು ಕಳಿಸುವ ಅವಕಾಶ ನೀಡಿದೆ. ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆಮಾಡಿರುವ ಟೆಲಿಗ್ರಾಮ್, 500 ಸದಸ್ಯರಿರುವ ಗ್ರೂಪ್ ರಚನೆಗೂ ಅವಕಾಶ ನೀಡಿದೆ. ಜೊತೆಗೆ ಅನಾಮಿಕ ಖಾತೆಯಿಂದ ಬರುವ ಸಂದೇಶಗಳನ್ನು ತಡೆಯುವ ಆಯ್ಕೆಗೂ ಅವಕಾಶವಿದೆ.

ವರಮಹಾಲಕ್ಷ್ಮಿ ಹಬ್ಬ; ಎಲ್ಲೆಲ್ಲೂ ಹಬ್ಬದ ಆಚರಣೆಯ ಸೊಬಗು

ಇಂದು ವರಮಹಾಲಕ್ಷ್ಮಿ ಹಬ್ಬ. ಎಲ್ಲೆಲ್ಲೂ ಹಬ್ಬದ ಆಚರಣೆಯ ಸೊಬಗು.. ಎಲ್ಲೆಲ್ಲೂ ಅದೃಷ್ಟ ಲಕ್ಷ್ಮಿಯ ಆರಾಧನೆಯ ಸೊಗಸು.. ಆಸ್ತಿಕ ಬಂಧುಗಳು ಮನೆಗಳಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ವರಮಹಾ ಲಕ್ಷ್ಮಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ನಾಡಿನ ದೇವಾಲಯಗಳಲ್ಲೂ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಈ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಜಗನ್ಮಾತೆಯು ಎಲ್ಲರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ. ಕೊರೋನಾ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಿಸೋಣ, ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ನಿಯಮಗಳನ್ನು ಪಾಲಿಸೋಣ. pic.twitter.com/rADdi5vf6j — B.S.Yediyurappa…