ವರಮಹಾಲಕ್ಷ್ಮಿ ಹಬ್ಬ; ಸಚಿವ ಡಾ.ಸುಧಾಕರ್ ನೂತನ ಗೃಹ ಕಚೇರಿಯನ್ನು ಆರಂಭ

ಬೆಂಗಳೂರು: ಶ್ರಾವಣ ಮಾಸದ ಅದ್ಧೂರಿ ಹಬ್ಬ ಎಂದೇ ಗುರುತಾಗಿರುವ ವರಮಹಾಲಕ್ಷ್ಮೀ ಪೂಜೆಯನ್ನು ನಾಡಿನೆಲ್ಲೆಡೆ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕೊರೋನಾ ಸಂಕಟ ಕಾಲದಲ್ಲೂ ಅದೃಷ್ಟ ಲಕ್ಷ್ಮಿಯ ಪೂಜಾ ಕೈಂಕರ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ.

ಈ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದೇ ವೈದ್ಯಕೀಯ ಸಚಿವ ಡಾ.ಸುಧಾಕರ್ ಅವರು ತಮ್ಮ ನೂತನ ಗೃಹ ಕಚೇರಿಯನ್ನು ಆರಂಭಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ 7 ಮಿನಿಸ್ಟರ್ಸ್ ಕ್ವಾಟರ್ಸ್ ನ 4ನೇ ನಂಬರ್ ನಿವಾಸದಲ್ಲಿನ ಗೃಹ ಕಚೇರಿಯಿಂದಲೇ ಎಲ್ಲಾ ಸಾರ್ವಜನಿಕ ಭೇಟಿ, ಕಾರ್ಯಕಲಾಪಗಳನ್ನು ನಿರ್ವಹಿಸಲಿದ್ದೇನೆ ಎಂದಿದ್ದಾರೆ.

Related posts