ಪೈನಾಪಲ್ ದೋಸಾ.. ಸ್ವಾದಿಷ್ಟದ ಖಾದ್ಯ

ನಳಪಾಕ ಪ್ರವೀಣರು ಏನು ಮಾಡಿದರೂ ಸ್ವಾದಿಷ್ಟ. ಆ ಪಟ್ಟಿಯಲ್ಲಿದೆ ಅನಾನಾಸು ದೋಸೆ. ಅನಾನಾಸು ಕೇವಲ ಹಣ್ಣಲ್ಲ, ಜ್ಯುಸ್ ಅಷ್ಟೇ ಅಲ್ಲ, ತಿಂಡಿ ತಿನಿಸಿಗೂ ಈ ಹಣ್ಣು ಸೂಕ್ತ. ಇದೇ ಹಣ್ಣಿನ ದೋಸೆ ಕೂಡಾ ಬಲು ರುಚಿ. ಇದನ್ನು ಮಾಡುವ ವಿಧಾನವೂ ಸುಲಭ.. ಬೇಕಾದ ಸಾಮಾಗ್ರಿ: ದೋಸೆ ಅಕ್ಕಿ 2 ಕಪ್ ಅನಾನಾಸು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ:  ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಅನಾನಸ್, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ ಎಣ್ಣೆ…

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ‌ ಸಿಂಧೂ ಬಿ.ರೂಪೇಶ್ ವರ್ಗಾವಣೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ‌ ಸಿಂಧೂ ಬಿ ರೂಪೇಶ್ ವರ್ಗಾವಣೆ ಮಾಡಿ‌ ರಾಜ್ಯ ಸರ್ಕಾರ ಆದೇಶಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಡಾ.ರಾಜೇಂದ್ರ ಕೆ.ವಿ ಸರ್ಕಾರ ನಿಯುಕ್ತಿಗೊಳಿಸಿದೆ.

ಶಹಬ್ಬಾಸ್ ರೂಪ.. ಪ್ರಭಾವಿಗಳಲ್ಲೇ ನಡುಕ ಹುಟ್ಟಿಸಿದ ಐಜಿಪಿಗೆ ಅಭಿನಂದನೆಗಳ ಮಹಾಪೂರ

ಬೆಂಗಳೂರು: ರಾಜ್ಯದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿದೆ. ಈ ಸಂಕಟ ಕಾಲದಲ್ಲಿ ಜನರ ನೆರವಿಗೆ ಧಾವಿಸಿರುವ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಹೀಗಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ವೆಚ್ಚವನ್ನು ಪಾವತಿಸುವಂತೆ ರೋಗಿಗಳಿಗೆ ಒತ್ತಾಯಿಸುವ ದೂರುಗಳೂ ಕೇಳಿಬರುತ್ತಿವೆ. ಈ ಪೈಕಿ ಬೆಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆ 20 ಕ್ಕೂ ಹೆಚ್ಚು ಕೋವಿಡ್-19 ಸೋಂಕಿತರಿಂದ ಹೆಚ್ಚುವರಿ ಶುಲ್ಕ ಪಡೆದಿರುವ ದೂರುಗಳು ಸರ್ಕಾರದ ಗಮನಸೆಳೆದಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಮಹಾ ನಿರೀಕ್ಷಕಿ ಡಿ.ರೂಪಾ ಅವರು ಕಾರ್ಯಾಚಣೆಯ ಅಖಾಡಕ್ಕೆ ಧುಮುಕಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು, ಖಾಸಗಿ ಆಸ್ಪತ್ರೆಗಳ ಅಕ್ರಮಗಳ ವಿರುದ್ಧ ಸಮರಕ್ಕೆ ಮುಂದಾದರು. ಅಧಿಕಾರಿಗಳ ತಂಡವನ್ನು ಆಸ್ಪತ್ರೆಗಳಿಗೆ ಕಳುಹಿಸಿ ಸತ್ಯಾಸತ್ಯತೆಗಳನ್ನು ಪರಾಮರ್ಶೆ ನಡೆಸಿದರು. ಅಕ್ರಮ ಮೇಲ್ನೋಟಕ್ಕೆ ತಿಳಿದಿದ್ದೇ ತಡ, ಸಿಡಿಮಿಡಿಗೊಂಡ ಐಜಿಪಿ ಡಿ.ರೂಪಾ ಅವರು…

ಭಾರೀ ಸದ್ದು ಮಾಡುತ್ತಿದೆ ರಾಗಿಣಿ ಪ್ರಜ್ವಲ್ ಅಭಿನಯದ ‘ಲಾ’ ಚಿತ್ರ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ನಿರ್ಮಾಣದ ‘ಲಾ’ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್’ಗಳಲ್ಲಿ ಪ್ರದರ್ಶನವಿಲ್ಲದ ಕಾರಣದಿಂದಾಗಿ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕ್ರೈಮ್-ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರ, ಭೀಕರ ಅಪರಾಧದ ವಿರುದ್ಧ ನ್ಯಾಯಕ್ಕಾಗಿ ಹೋರಾಡಲು ಯುವತಿಯೊಬ್ಬಳು ಅನುಸರಿಸಿದ ಮಾರ್ಗವನ್ನು ಅನಾವರಣ ಮಾಡಿದೆ. ನಟಿ ರಾಗಿಣಿ ಪ್ರಜ್ವಲ್ ತನ್ನ ಪಾತ್ರಕ್ಕೆ ಜೀವ ತುಂಬುವಲ್ಲೂ ಯಶಸ್ವಿಯಾಗಿದ್ದಾರೆ. ತನ್ನ ಮಾರ್ಗದರ್ಶಕರ ಸಹಾಯದಿಂದ ಕಾನೂನು ವ್ಯವಸ್ಥೆಯ ವಿರುದ್ಧ ಹೋರಾಡುವ ಈ ಚಲನಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ‘ಲಾ’ ಚಿತ್ರವನ್ನು ರಘು ಸಮರ್ತ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಸಕತ್ ಲೈಕ್ ಗಿಟ್ಟಿಸಿಕೊಂಡಿದೆ.    

ನಟಿ ಸುಧಾರಾಣಿಗೆ ವೈದ್ಯರ ರಗಳೆ; ಆಸ್ಪತ್ರಗೆ ಎಚ್ಚರಿಕೆ ನೀಡಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ಈ ಸಂದರ್ಭದಲ್ಲೇ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೊರೋನಾ ಮಾತ್ರವಲ್ಲ ಇತರೆ ಕಾಯಿಲೆಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ನಟಿ ಸುಧಾರಾಣಿಗೂ ಇದೇ ರೀತಿ ಅನುಭವವಾಗಿದೆ. ಸುಧಾರಾಣಿಯ ಸಂಬಂಧಿ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ರೋಗಿಯನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಸುಧಾರಾಣಿ ಸಹಿತ ರೋಗಿಯ ಸಂಬಂಧಿಗಳೂ ಇದರಿಂದಾಗಿ ಗೊಂದಲಕ್ಕೀಡಾಗಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿದ್ದು ಸರ್ಕಾರಕ್ಕೂ ಮುಜುಗರ ಉಂಟಾಗಿದೆ. ಇಂತಹಾ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದು, ನಟಿ ಸುಧಾರಾಣಿ ಸಂಬಂಧಿ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ…

ರಾಜ್ಯದಲ್ಲಿ 1 ಲಕ್ಷದ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಸೋಮವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 5324 ಪಾಸಿಟಿವ್ ಪ್ರಕರಣಗಳು ಹೊಸದಾಗಿ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿ 1470 ಪ್ರಕರಣಗಳು ಪತ್ತೆಯಾಗಿದ್ದು, ಬಳ್ಳಾರಿಯಲ್ಲಿ 840, ಕಲಬುರಗಿಯಲ್ಲಿ 631 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ 296, ಉಡುಪಿಯಲ್ಲಿ 225, ಧಾರವಾಡದಲ್ಲಿ 193, ಬೆಳಗಾವಿಯಲ್ಲಿ 155, ಕೋಲಾರದಲ್ಲಿ 142, ಬೆಂಗಳೂರು ಗ್ರಾಮಾಂತರದಲ್ಲಿ 138 ಪ್ರಕರಣಗಳು ಪತ್ತೆಯಾಗಿವೆ. ರಾಯಚೂರಿನಲ್ಲಿ 120, ದಕ್ಷಿಣ ಕನ್ನಡದಲ್ಲಿ 119, ವಿಜಯಪುರ 110, ದಾವಣಗೆರೆಯಲ್ಲಿ 110 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮಹಾಮಾರಿಗೆ ಸೋಮವಾರ 75 ಮಂದಿ ಬಲಿಯಾಗಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾಗಿ ಮೃತಪಟ್ಟವರ ಸಂಖ್ಯೆ 1953ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಹೆಲ್ತ್ ಬುಲೆಟಿನ್’ನಲ್ಲಿ ಮಾಹಿತಿ ಬಹಿರಂಗಪಡಿಸಿದೆ. ರಾಜ್ಯದಲ್ಲಿ ಇಂದು 5,324 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು…

ಸಿನಿ ರಸಿಕರ ನಿರೀಕ್ಷೆ ಹೆಚ್ಚಿಸಿದ ‘ಖುದಾ ಹಫಿಜ್’ ಟ್ರೈಲರ್

‘ಖುದಾ ಹಫಿಜ್’ ಚಿತ್ರ ಬಾಲಿವುಡ್’ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ವಿದ್ಯುತ್ ಜಮ್ವಾಲ್ ಅಭಿನಯದ ಖುದಾ ಹಫಿಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸುತ್ತಿದೆ. ಫಾರೂಕ್ ಕಬೀರ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಹಲವು ಪತಿಭಾನ್ವಿತ ತಾರೆಯರು ತೆರೆಹಂಚಿಕೊಂಡಿದ್ದಾರೆ.    

ಮಾವಿನ ದೋಸೆಯ ಸವಿ.. ಆಹಾ..

ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಖಾದ್ಯಗಳ ಪಟ್ಟಿಯೂ ಬೆಳೆಯುತ್ತಿವೆ. ಆ ಆ ಪಟ್ಟಿಗೆ ಮಾವಿನ ದೋಸೆ ಸೇರ್ಪಡೆಯಾಗಿದೆ. ಮಾವು ಯಾರಿಗೆ ತಾನೇ ಇಷ್ಟವಿಲ್ಲ? ಅದರ ಖಾದ್ಯಗಳೂ ಅಷ್ಟೇ ರುಚಿ. ಅದರಲ್ಲೂ ಮಾವಿನ ದೋಸೆಯ ಸವಿ.. ಆಹಾ.. ಇದನ್ನು ಮಾಡುವ ವಿಧಾನವೂ ಬಲು ಸುಲಭ ಬೇಕಾದ ಸಾಮಾಗ್ರಿ ದೋಸೆ ಅಕ್ಕಿ 2 ಕಪ್ ಮಾವಿನಹಣ್ಣು 1 ಕಪ್ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ದೋಸೆ ಅಕ್ಕಿಯನ್ನು 4 ಗಂಟೆ ಅಥವಾ ರಾತ್ರಿ ಇಡಿ ನೆನೆ ಹಾಕಿ. ನಂತರ ಒಂದು ಜಾರಿನಲ್ಲಿ ನೆನೆ ಹಾಕಿದ ಅಕ್ಕಿ, ತುಂಡು ಮಾಡಿಕೊಂಡ ಮಾವಿನಹಣ್ಣು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದಲ್ಲಿ ನೀರು ಹಾಕಿ ಹಿಟ್ಟಿನ ಹದ ಮಾಡಿಕೊಳ್ಳಬೇಕು. ಬಿಸಿ ಬಿಸಿ ಕಾವಲಿಗೆ ಹಿಟ್ಟನ್ನು ಹಾಕಿ ದೋಸೆ ಎರೆದು ಬೇಯಿಸಿ. ಬೇಯಿಸುವಾಗ ತುಪ್ಪ ಅಥವಾ…

ಕಡಲ ತೀರದಲ್ಲಿ ಸುನಾಮಿ ರೀತಿ ಅಲೆ? ಪ್ರವಾಹದ ಸುಳಿಯಲ್ಲಿ ಸಿಲುಕಿದ ಜನ.. ಭಾಯಾನಕ ದೃಶ್ಯ

ಮಂಗಳೂರು: ಮಳೆಗಾಲ ಸಂದರ್ಭದಲ್ಲಿ  ಕಡಲು ಕೊರೆತದ ಘಟನೆಗಳು ಸಂಭವಿಸುತ್ತಿದೆ. ಸಮುದ್ರ ತೀರದ ಪ್ರದೇಶಗಳ ಜನರು ಆತಂಕದಲ್ಲಿ ದಿನಕಳೆಯುವಂತಾಗಿದೆ. ಈ ನಡುವೆ ಕಡಲಿನ ಅಬ್ಬರ ಜೋರಾಗಿ ಸುನಾಮಿ ರೀತಿ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ. https://www.facebook.com/UdayaNewsUpdate/videos/4396151823735982/ ಈ ಮಧ್ಯೆ ಕಡಲ ತೀರದಲ್ಲಿ ಎದ್ದಿರುವ ಅಲೆಯೊಂದು ಸುನಾಮಿ ರೀತಿಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದೃಶ್ಯ ಭಯಾನಕ ಎಂಬಂತಿದೆ. ಸುನಾಮಿಯಂತೆ ದೈತ್ಯ ಅಲೆಗಳು ಅಪ್ಪಳಿಸಿದ್ದು ಪ್ರವಾಹ ರೀತಿಯಲ್ಲಿ ಸಮುದ್ರದ ನೀರು ತೀರದ ನಿವಾಸಿಗಳ ಮನೆಯಂಗಳಗಲ್ಲಿ ಹರಿದಿದೆ. ಹಲವಾರು ಈ ಪ್ರವಾಹದ ಸುಳಿಯಲ್ಲಿ ಸಿಲುಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಮಲಬಾರ್ ತೀರದಲ್ಲಿನ ದೃಶ್ಯ ಎನ್ನಲಾಗುತ್ತಿದೆ. ಮಂಗಳೂರು ಹೊರವಲಯದ ಮುಲ್ಕಿ, ಹೆಜಮಾಡಿ, ಉಡುಪಿ ಜಿಲ್ಲೆಯ ಹಲವೆಡೆ ಅರಬೀ ಸಮುದ್ರದಲ್ಲಿ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಸನ್ನಿವೇಶಗಳು ಆತಂಕ ಸೃಷ್ಟಿಸಿವೆ. ಇದನ್ನೋ ಓದಿ.. ನಟಿ…

ನಾಗರಪಂಚಮಿಯಂದು ಕುಕ್ಕೆ ಕ್ಷೇತ್ರದಲ್ಲಿ ಪವಾಡ..? ಪೂಜೆ ವೇಳೆ ನಾಗರಾಜ ಪ್ರತ್ಯಕ್ಷ; ಪುರೋಹಿತರಿಂದ ಕ್ಷೀರ ಸಮರ್ಪಣೆ

ಮಂಗಳೂರು: ನಾಗರ ಪಂಚಮಿ ದಿನವಾದ ಇಂದು ಕುಕ್ಕೆ ಕ್ಷೇತ್ರದಲ್ಲಿ ಪಾವಾಡ ನಡೆಯಿತೇ? ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗರ ಪಂಚಮಿ ಪೂಜೆ ನೆರವೇರುತ್ತಿದ್ದಂತೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗರಾಜ ಪ್ರತ್ಯಕ್ಷವಾಗಿದೆಯಂತೆ. ಇದನ್ನು ಕಂಡ ದೇವಾಲಯದವರು ನಾಗರಾಜನಿಗೆ ಹಾಲನ್ನು ಸಮರ್ಪಿಸಿದ್ದಾರಂತೆ. ಈ ಹಾಲಿನ ನೈವೇದ್ಯವನ್ನು ಸ್ವೀಕರಿಸಿದ ನಾಗರ ಹಾವು ಅಲ್ಲಿಂದ ನಿರ್ಗಮಿಸಿದೆ. ತುಳುನಾಡಿನಲ್ಲಿ ನಾಗರ ಹಾವನ್ನು ದೇವರೆಂದೇ ಆಸ್ತಿಕರು ತಿಳಿದಿದ್ದಾರೆ. ಈ ರೀತಿಯ ಹಾವುಗಳು ಅಲ್ಲಿನ ಮನೆಗಳಲ್ಲೂ ಪ್ರತ್ಯಕ್ಷವಾಗುವುದುಂಟು. ಹೀಗಿರುವಾಗ ನಾಗರಾಜನ ಸನ್ನಿದಿ ಎಂದೇ ಗುರುತಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಾವಿನ ಸವಾರಿ ಅಚ್ಚರಿಯೇನಲ್ಲ. ಆದರೆ ನಾಗರ ಪಂಚಮಿಯ ದಿನವಾದ ಇಂದು ನಾಗರಾಜ ಪ್ರತ್ಯಕ್ಷವಾದದ್ದು ಹಾಗೂ ದೇವಾಲಯದವರು ಸಮರ್ಪಿಸಿದ ಹಾಲನ್ನು ಸ್ವೀಕರಿಸಿದ ಅನನ್ಯ ಸನ್ನಿವೇಶ ಕುತೂಹಲಕಾರಿಯೆನಿಸಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. https://www.facebook.com/watch/?v=289090592517976 ಇದನ್ನೂ ಓದಿ.. ಮಹಿಳಾ ಪೊಲೀಸ್ ಟ್ರೈನಿಂಗ್…