ಭಾರೀ ಸದ್ದು ಮಾಡುತ್ತಿದೆ ರಾಗಿಣಿ ಪ್ರಜ್ವಲ್ ಅಭಿನಯದ ‘ಲಾ’ ಚಿತ್ರ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ನಿರ್ಮಾಣದ ‘ಲಾ’ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್’ಗಳಲ್ಲಿ ಪ್ರದರ್ಶನವಿಲ್ಲದ ಕಾರಣದಿಂದಾಗಿ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಕ್ರೈಮ್-ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರ, ಭೀಕರ ಅಪರಾಧದ ವಿರುದ್ಧ ನ್ಯಾಯಕ್ಕಾಗಿ ಹೋರಾಡಲು ಯುವತಿಯೊಬ್ಬಳು ಅನುಸರಿಸಿದ ಮಾರ್ಗವನ್ನು ಅನಾವರಣ ಮಾಡಿದೆ. ನಟಿ ರಾಗಿಣಿ ಪ್ರಜ್ವಲ್ ತನ್ನ ಪಾತ್ರಕ್ಕೆ ಜೀವ ತುಂಬುವಲ್ಲೂ ಯಶಸ್ವಿಯಾಗಿದ್ದಾರೆ.

ತನ್ನ ಮಾರ್ಗದರ್ಶಕರ ಸಹಾಯದಿಂದ ಕಾನೂನು ವ್ಯವಸ್ಥೆಯ ವಿರುದ್ಧ ಹೋರಾಡುವ ಈ ಚಲನಚಿತ್ರವು ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ಧ ಧ್ವನಿ ಎತ್ತುತ್ತದೆ. ‘ಲಾ’ ಚಿತ್ರವನ್ನು ರಘು ಸಮರ್ತ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಸಕತ್ ಲೈಕ್ ಗಿಟ್ಟಿಸಿಕೊಂಡಿದೆ.

 

 

Related posts