ರಾಜ್ಯದಲ್ಲಿನ್ನು ಲಾಕ್’ಡೌನ್ ಇಲ್ಲ; ಪರ್ಯಾಯ ಕ್ರಮಕ್ಕೆ ಸೂಚಿಸಿದ ಸಿಎಂ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವೈರಾಣು ಹಾವಳಿ ತೀವ್ರಗೊಂಡಿದ್ದರೂ ಜನರ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಲ್ಲಿ ಲಾಕ್’ಡೌನ್ ಮುಂಡಿವರಿಸದಿರಲು ನಿರ್ಧರಿಸಿದೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಬುಧ್ವಾರ ಬೆಳಗ್ಗೆ ಅಂತ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ವಿಸ್ತರಿಸುವುದಿಲ್ಲ ಎಂದು ಅವರು ಹೇಳುವ ಮೂಲಕ ಲಾಕ್’ಡೌನ್ ಮುಂದುವರಿಕೆ ಬಗ್ಗೆ ಇದ್ದ ಅಂತೆ-ಕಂತೆಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಕೊರೋನಾ ನಿಯಂತ್ರಣಕ್ಕೆ ಲಾಕ್ ​ಡೌನ್​ ಒಂದೇ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು. ಕೋವಿಡ್​ ನಿಯಂತ್ರಣ ಸಂಬಂಧ ಜನರೇ ಸ್ವಯಂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪರ್ಯಾಯ ಮಾರ್ಗ ಬಗ್ಗೆ ನೀತಿ ಪಾಠ ಹೇಳಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು ಎಂದು ಸಿಎಂ ಸಾರ್ವಜನಿಕರಲ್ಲಿ ಮನವಿ…

ಸುಶಾಂತ್ ಆತ್ಮದ ಜೊತೆ ತಜ್ಞನ ಸಂವಾದ; ಸಾವಿನ ರಹಸ್ಯದ ಹಿಂದಿದೆ ನಿಗೂಢತೆ

ದೆಹಲಿ: ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣ ಅನೇಕಾನೇಕ ತಿರುವುಗಳನ್ನು ಪಡೆಯುತ್ತಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾತುಗಳೂ ಹರಿದಾಡುತ್ತಿವೆ. ಈ ಸಂದರ್ಭದಲ್ಲೇ ಸುಶಾಂತ್ ಆತ್ಮ ಜೊತೆಗಿನ ಸಂವಾದದ ವಿಚಾರ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಸತ್ತವರ ಆತ್ಮದ ಜೊತೆ ಮಾತನಾಡಲು ಸಾಧ್ಯವೇ? ಇಂಥದ್ದೊಂದು ಪ್ರಶ್ನೆ ಎಲ್ಲರಲ್ಲೂ ಮೂಡುತ್ತವೆ. ಸಿನಿಮಾಗಳಲ್ಲಿ ಇಂತಹಾ ಸನ್ನಿವೇಶ ಸೃಷ್ಟಿಸಲಾಗುತ್ತಿದ್ದರೆ, ಅತ್ತ ಸಾಗರೋತ್ತರ ದೇಶದಿಂದ ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಸಂವಾದದ ಸುದ್ದಿ ಪ್ರತಿಧ್ವನಿಸಿದೆ. ಅತೀಂದ್ರಿಯ ತಜ್ಞ ಎಂದೇ ಖ್ಯಾತಿಯಾಗಿರುವ ಪ್ಯಾರಾನಾರ್ಮಲ್ ತಜ್ಞ ಸ್ವೀವ್‌ ಹಫ್ ತನ್ನ ಅಪ್ರತಿಮ ಪ್ರತಿಭೆ ಮೂಲಕ ನಟ ಸುಶಾಂತ್ ಸಿಂಗ್ ಆತ್ಮದ ಜೊತೆ ಮಾತನಾಡಿದರಂತೆ. ಈ ಹಿಂದೆ ಮೈಕಲ್ ಜಾಕ್ಸನ್ ಆತ್ಮದ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಂಡಿದ್ದ ಸ್ವೀವ್‌ ಹಫ್ ಜಗತ್ತಿನಾದ್ಯಂತ ಕುತೂಹಲಕಾರಿ ಚರ್ಚ್ಗೆ ಸಾಕ್ಷಿಯಾಗಿದ್ದರು. ಇದೀಗ ಸುಶಾಂತ್ ಆತ್ಮದ ಜೊತೆಗೂ ಮಾತನಾಡಿ ಸಾವಿನ ನಿಗೂಢತೆಯನ್ನು ಬೇಧಿಸುವಂತೆ ಅನೇಕರು…

ಕೊರೋನಾ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ದುರ್ವರ್ತನೆ; ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಕೊರೋನಾ ವೈರಾಣು ಹಾವಳಿಯಿಂದಾಗಿ ಜನ ಜೇವನ ತತ್ತರಗೊಂಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ವ್ಯವಸ್ಥೆಗೆ ಹೊಡೆತ ನೀಡುತ್ತಿದೆ. ಬೆಂಗಳೂರಿನಲ್ಲಿ ನಡೆದ ಪ್ರಸಂಗವೊಂದು ಕೊರೋನಾ ವಾರಿಯರ್ಸ್’ಗಳು ಇಂತಹಾ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೊರೋನಾ ಸೋಂಕಿತರನ್ನು ಕರೆದೊಯ್ಯುವ ವಾಹನ ಚಾಲಕನೊಬ್ಬ ತನ್ನ ಸುರಕ್ಷತೆಯ ಆವಶ್ಯಕತೆ ಬಗ್ಗೆ ಮನವರಿಕೆ ಮಾಡಿದಾಗ ಬಿಬಿಎಂಪಿ ಸಿಬ್ಬಂದಿಯೆನ್ನಲಾದ ವ್ಯಕ್ತಿಯೊಬ್ಬರು ವರ್ತಿಸಿದ ಈ ವೀಡಿಯೋ ವ್ಯವಸ್ಥೆಯನ್ನು ಅನಾವರಣಮಾಡಿದೆ. ಈ ವೀಡಿಯೊವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ನಮ್ಮ ಚಾಲಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನಾ ಪೇಷಂಟ್ ನ ಕರ್ಕೊಂಡು ಹೋಗಿ ಡ್ರಾಪ್ ಮಾಡಿ ಬಂದಮೇಲೆ ಸ್ನಾನದ ವ್ಯವಸ್ಥೆ ಕೊಡಿ ಅಂದಿದ್ದಕ್ಕೆ ಬಿಬಿಎಂಪಿ ಅವರು ಯಾವ್ತರ ಉತ್ತರ ಕೊಡುತ್ತಿದ್ದಾರೆ ನೋಡಿ ಫ್ರೆಂಡ್ಸ್’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಆಕ್ರೋಶ:…

ಸೆಪ್ಟೆಂಬರ್‌ನಲ್ಲಿ ಶಾಲೆ-ಕಾಲೇಜು ಆರಂಭ?

ಬೆಂಗಳೂರು: ಅಗೋಚರ ಕೊರೋನಾ ವೈರಸ್ ವಕ್ಕರಿಸಿದ್ದು, ಜನ ಕಂಗಾಲಾಗಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳು ಸ್ತಬ್ಧವಾಗಿವೆ. ಭಾರತದಲ್ಲೂ ಈ ವೈರಾಣು ಹಾವಳಿ ತೀವ್ರಗೊಂಡಿದೆ. ಹಾಗಾಗಿ ಎಲ್ಲಾ ರಾಜ್ಯಗಳಲ್ಲೂ ಶಾಲಾ-ಕಾಲೇಜುಗಳಲ್ಲಿ ಚಟುವಟಿಕೆಗಳು ಆರಂಭವಾಗಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯ ಸರ್ಕಾರದ ಪ್ರಮುಖರ ಜೊತೆ ನಡೆಸಿದ್ದ ವೀಡಿಯೋ ಕಾನ್ಫರೆನ್ಸ್ ಸಮಾಲೋಚನೆ ಗಮನಸೆಳೆದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜು ಆರಂಭ ಸಾಧ್ಯವಿಲ್ಲ. ಇನ್ನೆರಡು ತಿಂಗಳು ಯಾವುದೇ ಸಾಹಸ ಬೇಡ ಎಂಬುದು ಅನೇಕರ ವಾದ. ಅದರಂತೆ ಸೆಪ್ಟೆಂಬರ್‌ವರೆಗೂ ಶಾಲೆ ಆರಂಭ ಬೇಡ ಎಂದು ಕರ್ನಾಟಕ ಸೇರಿ ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿವೆ. ಈ ನಡುವೆ, ಕೇರಳದಲ್ಲಿ ಸೆಪ್ಟೆಂಬರ್‌ನಲ್ಲಿ ಶಾಲೆ ಅರಂಭಕ್ಕೆ ತಯಾರಿ ನಡೆದಿದೆ. ದೆಹಲಿ, ಅಸ್ಸಾಂ ರಾಜ್ಯಗಳಲ್ಲೂ ಸೆಪ್ಟೆಂಬರ್ ತಿಂಗಳಿನಿಂದ ಶಾಲಾ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಾಗುತ್ತದೆ. ಆದರಂತೆ ಕರ್ನಾಟಕದಲ್ಲೂ ತಯಾರಿ ನಡೆಯುವ ಸಾಧ್ಯತೆಗಳಿವೆ ಎಂಬ…

ಕೊರೋನಾ ಸೋಂಕಿತ ತಾಯಿ ಗುಣಮುಖರಾಗಿ ಮರಳಿದಾಗ; ಅಮ್ಮ-ಮಗಳ ಸಕತ್ ಡಾನ್ಸ್ ನೋಡಿದ್ರೆ ನೀವೂ ಖುಷಿ ಪಡ್ತೀರಿ..

ಕೊರೋನಾ ಅಂದರೆ ಇದೀಗ ಆತಂಕದ ವಿಚಾರ. ಅಗೋಚರ ವೈರಾಣು ವಕ್ಕರಿಸಿದರೆ ಸಾಕು ಗೆದ್ದು ಬರುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇರಲ್ಲ. ಯಾಕೆಂದರೆ ಜಗತ್ತಿನ 200 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ವೈರಾಣು ಮಾರಣ ಹೋಮವನೆ ನಡೆಸಿದೆ. ಇಂತಹಾ ವೈರಾಣು ಸೋಂಕಿಗೆ ಒಳಗಾಗಿ ಬದುಕಿ ಬಂದಾಗ ಖುಷಿ ಹೇಗಿರುತ್ತೆ? ನಿಜಕ್ಕೂ ಅದು ಪುನರ್ಜನ್ಮ. ಪರಿಸ್ಥಿತಿ ಹೀಗಿರುವಾಗ ಹಲವು ದಿನಗಳ ಕಾಲ ವೈರಾಣು ವಿರುದ್ಧ ಹೋರಾಡಿ ತಾಯಿ ಗೆದ್ದು ಬಂದಾಗ ಮಕ್ಕಳು ಸಂಭ್ರಮಾಚರಣೆ ಮಾಡಿದ ಸನ್ನಿವೇಶವೊಂದು ಇಡೀ ದೇಶದ ಗಮನಸೆಳೆದಿದೆ. ಮಾಡದ ತಪ್ಪಿಗೆ ಸೋಂಕಿನ ಸ್ಪರ್ಶವಾದ ಕಾರಣಕ್ಕಾಗಿ ಏಕಾಏಕಿ ಆಸ್ಪತ್ರೆಪಾಲಾದ ಮಹಿಳೆ ತನ್ನ ಕುಟುಂಬ ಸದಸ್ಯರಿಂದ ದೂರ ಉಳಿಯಬೇಕಾಗಿತ್ತು. ಹಲವು ದಿನಗಳ ಕಾಲ ಆಕೆಯ ಮನೆಯವರು ಆತಂಕದಲ್ಲೇ ಇದ್ದರು. ಮಗಳಂತೂ ನಿತ್ಯವೂ ಅಮ್ಮನನ್ನು ಕಾಣಲಾಗದೆ ಆಕ್ರಂದನ ತೋಡಿಕೊಳ್ಳುತ್ತಿದ್ದಳು. ಮುಂಬೈನ ಬಡಾವಣೆಯೊಂದರಲ್ಲಿ ವಾಸವಾಗಿರುವ ತುಳು ಭಾಷಿಗ ಕುಟುಂಬದ ಈ ಮಹಿಳೆ ಗುಣಮುಖಳಾಗಿ…

ಭಾರತದಲ್ಲಿ ಕೊರೋನಾ ತಲ್ಲಣ: 4 ದಿನಗಳಲ್ಲಿ 1.10 ಲಕ್ಷ ಮಂದಿಯಲ್ಲಿ ಸೋಂಕು

ದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದೆ, ಭಾನುವಾರ ಬೆಳಿಗ್ಗೆ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಕಳೆದ 24 ತಾಸುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 38,902 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ. ಗುರುವಾರದಿಂದೀಚೆಗೆ 1,10,040 ಸೋಂಕಿನ ಪ್ರಕರಣಗಳು ದೃಢಪಟ್ಟಿದೆ. ಈ ಅವಧಿಯಲ್ಲಿ ಸುಮಾರು 1913 ಜನರು ಸಾವನ್ನಪ್ಪಿದ್ದಾರೆ ಎಂಬ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ. ಮಹಾರಾಷ್ಟ್ರದಲ್ಲಿ 8 ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ತಮಿಳುನಾಡಿನಲ್ಲಿ 4807, ಕರ್ನಾಟಕದಲ್ಲಿ 4537 ಮಂದಿಯಲ್ಲಿ ನಿನ್ನೆ ಒಂದೇ ದಿನದಲ್ಲಿ ಸೋಂಕು ದೃಢಪಟ್ಟಿದೆ. ಆಂಧ್ರಪ್ರದೇಶದಲ್ಲಿ 3963, ಪಶ್ಚಿಮ ಬಂಗಾಳ 2198, ಬಿಹಾರ 1667, ದೆಹಲಿಯಲ್ಲಿ 1475 ಹೊಸ ಕೇಸ್’ಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿದೆ.

ಒಂದೇ ದಿನದಲ್ಲಿ 38,902 ಮಂದಿಯಲ್ಲಿ ಸೋಂಕು; 543 ಮಂದಿ ಬಲಿ

ದೆಹಲಿ: ಭಾರತವೂ ಕೊರೋನಾ ಕರಾಳತೆಗೆ ಸಾಕ್ಷಿಯಾಗುತ್ತಿದ್ದು ಸೋಂಕಿನಿಂದಾಗಿ ಸಂಭವಿಸುತ್ತಿರುವ ಮಾರಣ ಹೋಮ ಮುಂದುವರಿದೆ. ಭಾನುವಾರ ಕೂಡ ಕೊರೋನಾ ಕುರಿತ ಆತಂಕದ ಸುದ್ದಿ ಅಪ್ಪಳಿಸಿದೆ. ಕೋವಿಡ್-19 ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದೆ, ಭಾನುವಾರ ಬೆಳಿಗ್ಗೆ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಸೋಂಕು ಅಷ್ಟೇ ಅಲ್ಲ ಮರಣ ಪ್ರಮಾಣವೂ ಹೆಚ್ಚಿದೆ. ಕಳೆದ 24 ತಾಸುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 38,902 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ. ಈ ನಡುವೆ ಈ ಅವಧಿಯಲ್ಲಿ ಉಮಾರು 543 ಮಂದಿ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ. ಇದೇ ವೇಳೆ 10,77,618 ಮಂದಿ ಸೋಂಕಿತರ ಪೈಕಿ 6,77,423 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, 3,73,379 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ.

ಭಾರತ-ಚೀನಾ ಗಡಿ ಬಿಕ್ಕಟ್ಟು; ಕೇಂದ್ರದ ಹೇಡಿತನದ ಕ್ರಮ- ರಾಹುಲ್ ಟೀಕೆ

ದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಾಸ್ತ್ರ ಪ್ರಯೋಗವನ್ನು ಮುಂದುವರಿಸಿದ್ದಾರೆ. ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಚೀನಾ ನಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ಭಾರತ ಸರ್ಕಾರದ ಚೇಂಬರ್ಲೇನ್ ವರ್ತನೆಯಿಂದ ಚೀನಾ ಮತ್ತಷ್ಟು ಧೈರ್ಯದಿಂದ ಬೀಗುತ್ತಿದೆ. ಕೇಂದ್ರದ ಹೇಡಿತನದ ಕ್ರಮಗಳಿಂದಾಗಿ ಭಾರತ ಭಾರೀ ಬೆಲೆ ತೆರಬೇಕಾದೀತು ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. China has taken our land and GOI is behaving like Chamberlain. This will further embolden China. India is going to pay a huge price because of GOI’s cowardly actions. pic.twitter.com/5ewIFvj5wy — Rahul Gandhi (@RahulGandhi) July 18, 2020

ರಾಮಮಂದಿರ ನಿರ್ಮಾಣಕ್ಕೆ ಮುಂದಿನ ತಿಂಗಳು ಶಿಲಾನ್ಯಾಸ; ಹಲವು ವಿಶೇಷತೆ

ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯಲ್ಲೇ ಭವ್ಯ ರಾಮ ದೇಗುಲ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ಲಾಕ್’ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಶಿಲಾನ್ಯಾಸ ಕಾರ್ಯಕ್ರಮ ಮುಂದಿನ ತಿಂಗಳಲ್ಲಿ ನೆರವೇರಲಿದೆ. ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದ್ದು ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ನೆರವೇರಿಸಲು ಚಿಂತನೆ ನಡೆದಿದೆ ಎಂದು ಟ್ರ್ರಸ್ಟ್ ಮೂಲಗಳು ತಿಳಿಸಿವೆ. ಈ ಸಂಬಂಧ ಸಂಬಂಧ ಟ್ರಸ್ಟಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಹಿತ ಪ್ರಮುಖ ಯತಿಗಳೂ ಭಾಗವಹಿಸಿದ್ದರು. ಈ ಸಭೆಯಲ್ಲಿನ ಮಾತುಕತೆ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡ ವಿಶ್ವಪ್ರಸನ್ನ ತೀರ್ಥರು ಆಗಸ್ಟ್ ಮೊದಲ ವಾರದ ಮೂರು ಅಥವಾ ಐದರಂದು ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆಗಳಿವೆ ಎಂದರು. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಜೊತೆಗೆ ಇನ್ನುಳಿದ 70 ಎಕರೆ…

ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ದಿಢೀರ್; ಸರ್ಕಾರದ ಆದೇಶ ವರ್ಗಾವಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಎನ್. ಮಂಜುನಾಥ್ ಪ್ರಸಾದ್ ಅವರನ್ನು ಬಿಬಿಎಂಪಿ ಕಮಿಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ ಆರೋಪದ ಅನಿಲ್ ಕುಮಾರ್ ಅವರನ್ನು ವರ್ಗಾವಣೆಗೆ ಬೆಂಗಳೂರಿನ ಹಳವಾರು ಸಚಿವರು ಶಾಸಕರ ಒತ್ತಡ ಹಿನ್ನೆಲೆಯಲ್ಲಿ ಮುಖ್ಯಮತ್ರಿ ಯಡಿಯೂರಪ್ಪ ಅವರು ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ. ಅನಿಲ್ ಕುಮಾರ್ ಸಾರ್ವಜನಿಕ ಉದ್ದಿಮೆ ಅಪರ ಮುಖ್ಯ ಕಾರ್ಯದರ್ಶಿ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.