ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ

ಮಂಗಳೂರು : ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಕಾಶೀ ಸಂಸ್ಥಾನದ ಶಾಖಾ ಮಠದಲ್ಲೀಗ ಎಂದಿಲ್ಲದ ಸಂಭ್ರಮ. ಭಕ್ತಿ ಕೈಂಕರ್ಯದಲ್ಲಿ ಭಕ್ತ ಸಮೂಹ ತಲ್ಲೀನವಾಗಿದ್ದು ಇದೇ ಸಂದರ್ಭದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥರಿಗೆ ನೀಡಿದ ಅದ್ದೂರಿ ಸ್ವಾಗತ ಕೈಂಕರ್ಯ ನಾಡಿನ ಗಮನಸೆಳೆಯಿತು. ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೆರವೇರಲಿದೆ. ಈ ಪ್ರಯುಕ್ತ ಇಂದು ಬೆಂಗಳೂರು ಕಾಶೀ ಮಠದ ಮೊಕ್ಕಾಂನಿಂದ ಆಗಮಿಸಿದ ಶ್ರೀಗಳವರಿಗೆ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಭವ್ಯ ಸ್ವಾಗತ ನೀಡಿದರು . ಈ ಸಂದರ್ಭದಲ್ಲಿ ಶ್ರೀಗಳು ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಳಕ್ಕೆ ಭೇಟಿ ನೀಡಿದರು. ಈ ವೇಳೆ ವಿಶೇಷ…

ಟಿಕ್ ಟಾಕ್ ಸಹಿತ ನಿಷೇಧಿತ ಆಪ್ ಬಳಕೆ ಮುಂದುವರಿಸಬಹುದೇ? ಮುಂದೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಚೀನೀ ಮೂಲದ ಸುಮಾರು 59 ಆ್ಯಪ್​ಗಳನ್ನು ನಿಷೇಧಿಸುವ ಮೂಲಕ ಡ್ರಾಗನ್ ರಾಷ್ಟ್ರಕ್ಕೆ ಭಾರತ ಸಖತ್ತಾಗಿಯೇ ಹೊಡೆತ ಕೊಟ್ಟಿದೆ. ಭಾರತದಲ್ಲಿ ಸುಮಾರು 10 ಕೋಟಿ ಜನರು ಬಳಸುತ್ತಿದ್ದ ಟಿಕ್ ಟಾಕ್ ಕೂಡಾ ನಿಷೇಧಕ್ಕೊಳಗಾಗಿದ್ದು ಚೀನಾ ಪ್ರಾಡಕ್ಟ್ ವಿರುದ್ಧ ಅಭಿಯಾನ ಆರಂಭಿಸುವವರು ಸಂತಸಗೊಂಡಿದ್ದಾರೆ. ಆದರೆ ಇದೀಗ ಈ ನಿಷೇಧಿತ ಆ್ಯಪ್​ಗಳ ಕಥೆಯೇನು ಎಂಬುದೇ ಎಲ್ಲರ ಕುತೂಹಲ. ದೇಶದ ಭದ್ರತೆಯ ಕಾರಣವೊಡ್ಡಿ ಈ ಆ್ಯಪ್​ಗಳನ್ನು ನಿಷೇಧಿಸಲಾಗಿದೆ. ಇದರ ಮುಂದಿನ ಭಾಗವಾಗಿ ಸರ್ಕಾರವು ಈ ಆ್ಯಪ್​ಗಳನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳಿಗೆ ನೀಡುತ್ತದೆ. ಅನಂತರ ಭಾರತದಲ್ಲಿ ಪ್ಲೇಸ್ಟೋರ್’​ಗಳಿಂದ ಈ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವುದಾಗಲೀ, ಅದನ್ನು ಇಂಟರ್ನೆಟ್ ಮೂಲಕ ಬಳಕೆ ಮಾಡಲಾಗಲೀ ಸಾಧ್ಯವಾಗದು. ಕೆಲವು ಆ್ಯಪ್​ಗಳನ್ನು ಆಫ್​ಲೈನ್​ ಬಳಕೆ ಮಾಡಬಹುದಾದರೂ, ಟಿಕ್ ಟಾಕ್, ಹೆಲೋ ಇತ್ಯಾದಿ ಆ್ಯಪ್​ಗಳನ್ನು ಇಂಟರ್ನೆಟ್ ಇಲ್ಲದೆ ಬಳಸಲು ಸಾಧ್ಯವಿಲ್ಲ. ಹಾಗಾಗಿ ಭಾರತದಲ್ಲಿ ಟಿಕ್ ಟಾಕ್ ಯುಗ ಅಂತ್ಯವಾಯಿತೆಂದೇ ಹೇಳಬಹುದು.  …

ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರ ಯಶ್ ದಂಪತಿ? ಹಣೆ ಮೇಲೆ ಮೂರು ಬೆರಳಿನ ರಹಸ್ಯವೇನು ಗೊತ್ತಾ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ? ಇಂಥದ್ದೊಂದು ಮಾತು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಹರಿದಾಡಲು ಕಾರಣ ಯಶ್​ ಇತ್ತೀಚೆಗಷ್ಟೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವ ಪೋಸ್ಟ್. ಲಾಕ್​ಡೌನ್​ನ ನಿಯಮ ನನ್ನ ಪತ್ನಿಗೆ ತುಂಬಾ ಇಷ್ಟವಾಗಿದೆ. ರಾತ್ರಿ 8ಕ್ಕೆ ಮನೆಗೆ ಬರುವುದು ಹಾಗೂ ಭಾನುವಾರ ಇಡೀ ದಿನ ಜೊತೆಗಿರುವುದು ನನ್ನ ಹೆಂಡತಿಗೂ ಬೇಕಿತ್ತು ಎಂದು ಹಾಕಿರುವ ಪೋಸ್ಟ್ ಕುತೂಹಲ ಕೆರಳುವಂತೆ ಮಾಡಿದೆ. ಅಷ್ಟೇ ಅಲ್ಲ ಹಣೆಯ ಮೇಲೆ ಮೂರು ಬೆರಳು ಇಟ್ಟುಕೊಂಡಿರುವ ಫೋಟೋ ಮತ್ತಷ್ಟು ಕುತೂಹಲಕಾರಿ ವಿಚಾರಗಳತ್ತ ಬೊಟ್ಟು ಮಾಡಿದೆ. ಈ ತಾರಾ ದಂಪತಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಹಲವಾರು ಪ್ರಶ್ನಿಸಿದ್ದಾರೆ. View this post on Instagram A post shared by Yash (@thenameisyash) ಅಭಿಮಾನಿಗಳ ಕುತೂಹಲಕಾರಿ ಕಾಮೆಂಟ್ ಕುರಿತಂತೆ ಪ್ರತಿಕ್ರಿಯಿಸಿರುವ ರಾಧಿಕಾ ಪಂಡಿತ್, ಆ ರೀತಿಯ…

ಸಾಮಾಜಿಕ ಜಾಲತಾಣಗಳಲ್ಲಿ ‘ಚಕ್ರ’ ಟ್ರೈಲರ್ ಸದ್ದು

ಬಹು ನಿರೀಕ್ಷೆಯ ‘ಚಕ್ರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತಮಿಳು ನಟ ವಿಶಾಲ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ‘ಚಕ್ರ’ ಚಿತ್ರ ಸಿನಿ ರಸಿಕರಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಈ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ತಾಗಿ ಸದ್ದು ಮಾಡುತ್ತಿದೆ. ‘ಚಕ್ರ’ ಚಿತ್ರವನ್ನು ಎಂಎಸ್ ಆನಂದನ್ ನಿರ್ದೇಶನ ಮಾಡಿದ್ದಾರೆ.        

Uncategorized

27ರೊಳಗೆ ದೇಶಕ್ಕೆ ರಫೇಲ್ ಯುದ್ಧ ವಿಮಾನಗಳು

ದೆಹಲಿ: ಚೀನಾ ಭಾರತ ಗಡಿ ಸಂಘರ್ಷ ತಾರಕಕ್ಕೇರುತ್ತಿರುವಂತೆಯೇ ರಫೇಲ್ ಯುದ್ಧ ವಿಮಾನಗಳು ಭಾರತದ ತೆಕ್ಕೆಗೆ ಸೇರಲು ದಿನಗಣನೆ ಆರಂಭವಾಗಿದೆ. ಆರು ರಫೇಲ್ ಯುದ್ಧ ವಿಮಾನಗಳು ಜುಲೈ 27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆಗೆ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ಬಳಿಕ ಭಾರತ ಮತ್ತಷ್ಟು ಚುರುಕಾಗಿದೆ. ಈ ಸಂಬಂಧ ಕೆಲ ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲೆ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಯುದ್ಧ ವಿಮಾನಗಳನ್ನು ತಲುಪಿಸಲು ಫ್ರಾನ್ಸ್ ಒಪ್ಪಿದೆ. ಸುಮಾರು 58,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದರಂತೆ ಆರು ಯುದ್ಧ ವಿಮಾನಗಳು ಜುಲೈ 27ರೊಳಗೆ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತ ಯಶಸ್ವಿ

ದೆಹಲಿ: ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತೀಯ ಸಂಶೋಧಕರು ಯಶಸ್ವಿಯಾಗಿದ್ದಾರೆ. ಆದರೆ ಮಾನವನಿಗೆ ಅದನ್ನು ಪ್ರಯೋಗಿಸುವ ಪ್ರಕ್ರಿಯೆಯಷ್ಟೇ ಬಾಕಿ ಇದೆ. ಅದಕ್ಕೂ ಇದೀಗ ಅನುಮೋದನೆ ಸಿಕ್ಕಿದೆ. ಕೋವಿಡ್-19 ವಿರುದ್ಧದ ದೇಶದ ಮೊದಲ ಲಸಿಕೆ ‘ಕೊವಾಕ್ಸಿನ್ ‘ನ ಮಾನವ ಪ್ರಯೋಗಕ್ಕೆ ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್’ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ. ಇದು ನಿಷ್ಕ್ರಿಯ ಲಸಿಕೆಯಾಗಿದ್ದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಇದನ್ನು ಅಭಿವೃದ್ಧಿಪಡಿಸಿದೆ. ಜುಲೈ ತಿಂಗಳಲ್ಲಿ ದೇಶಾದ್ಯಂತ ಈ ಲಸಿಕೆಯ ಮಾನವ ಪ್ರಯೋಗ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಂಪನಿ ಈ ಹಿಂದೆ ಪೋಲಿಯೋ, ಚಿಕಾನ್ ಗುನ್ಯಾ, ರೇಬಿಸ್, ರೊಟಾ ವೈರಸ್, ಜಿಂಕಾ ಸಹಿತ ಹಲವು ಕಾಯಿಲೆಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಹಾಗಾಗಿ ಇದೀಗ ಕೋವಿಡ್-೧೯ ಲಸಿಕೆ ವಿಚಾರದಲ್ಲೂ ಬಹಳಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಿಶಾಖಪಟ್ಟಣದಲ್ಲಿ ಮತ್ತೊಂದು ಅನಿಲ ದುರಂತ

ವಿಶಾಖಪಟ್ಟಣ: ಕೆಲ ಸಮಯದ ಹಿಂದೆ ಭೀಕರ ಅನಿಲ ದುರಂತಕ್ಕೆ ಸಾಕ್ಷಿಯಾದ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮತ್ತೊಂದು ಅನಿಲ ದುರಂತ ಸಂಭವಿಸಿದೆ. ಫಾರ್ಮಾ ಕಂಪೆನಿಯೊಂದರಲ್ಲಿ ಅನಿಲ ಸೋರಿಕೆಯಾಗಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಅಸ್ವಸ್ಥಗೊಂಡು ಆಸ್ಪತ್ರೆಪಾಲಾಗಿದ್ದಾರೆ. ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್’ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದ್ದು ತಡ ರಾತ್ರಿ 11.30ರ ವೇಳೆ ಬೆಂಜಿಮಿಡಾಜೋಲ್ ಎಂಬ ವಿಷಾನಿಲ ಸೋರಿಕೆಯಾಗಿದೆ ಎನ್ನಲಾಗಿದೆ. ದುರಂತ ಘಟಿಸಿದ ವೇಳೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಈ ಘಟನೆ ನಂತರ ಆ ಕಾರ್ಖಾನೆಯನ್ನು ಮುಚ್ಚಲಾಗಿದ್ದು ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಅಂದು ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್, ಇದೀಗ ಚೀನಾ ವಿರುದ್ದ ಡಿಜಿಟಲ್ ಸ್ಟ್ರೈಕ್; 59 ಚೀನೀ ಆ್ಯಪ್‌ಗಳಿಗೆ ನಿಷೇಧ

ದೆಹಲಿ: ದಿಢೀರ್ ನಿರ್ಧಾರವೊಂದರಲ್ಲಿ ಟಿಕ್‌ಟಾಕ್ ಸಹಿತ ಚೀನಾ ನಿರ್ಮಿತ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಬಹುದಿನಗಳಿಂದ ಚೀನಾ ಆ್ಯಪ್ ನಿಷೇಧಕ್ಕೆ ಒತ್ತಾಯಿಸಿ ಆಂದೋಲನ ನಡೆದಿದೆ. ಲಡಾಖ್ ಗಡಿ ಭಾಗದಲ್ಲಿ ಜಗಳ ತೆಗೆಯುತ್ತಿರುವ ಚೀನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ 59 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಹಿಂದೆ ಭಾರತವನ್ನು ಕೆಣಕಿದ್ದ ಪಾಕಿಸ್ತಾನದ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದರೆ, ಇದೀಗ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ನಡೆಸಲಾಗಿದೆ ಎಂದೇ ಜನ ಬಣ್ಣಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆಯೇ ಈ ಆ್ಯಪ್‌ಗಳ ಅನ್‌ಇನ್‌ಸ್ಟಾಲ್ ಪ್ರಕ್ರೆಯೆಯಲ್ಲಿ ಜನ ತೊಡಗಿದ್ದಾರೆ. ನಿಷೇಧಿತ ಆ್ಯಪ್‌ಗಳ ಪಟ್ಟಿ ಹೀಗಿದೆ: 1. TikTok 2. Shareit 3. Kwai 4. UC Browser 5.…

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ

ಚಿಕ್ಕಬಳ್ಳಾಪುರ: ಕೊರೋನಾ ಇಡೀ ರಾಜ್ಯವನ್ನು ಆವರಿಸಿಕೊಂಡಿದ್ದು, ಶಾಲಾ ಕಾಲೇಜು ಆರಂಭಕ್ಕೆ ಗ್ರಹಣ ಆವರಿಸಿದೆ. ಇದೇ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಕುರಿತಂತೆ ತೀವ್ರ ಚರ್ಚೆಯೂ ಸಾಗಿದೆ. ಪುಟ್ಟ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ತಜ್ಞರು ಹೇಳಿದರೆ, ಹಲವಾರು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣ ಬೇಕು ಎಂದು ಹೇಳುತ್ತಿದ್ದಾರೆ. ಆನ್ಲೈನ್ ಶಿಕ್ಷಣ ಬೇಕು ಎಂದು ಕೆಲವು ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದು ರಾಜ್ಯ ಸರ್ಕಾರದ ವಿರುದ್ಧ ಸಮರ ಕೈಗೊಂಡಿದ್ದಾರೆ. ಇದೆ ವೇಳೆ ಕೇಂದ್ರ ಸರ್ಕಾರ ಕೂಡಾ ಮಾರ್ಗಸೂಚಿ ಸಿದ್ದಪಡಿಸಿ ಕುತೂಹಲಕಾರಿ ಹೆಜ್ಜೆ ಇಟ್ಟಿದೆ. ಈ ನಡುವೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಪದ್ಧತಿ ಅನುಷ್ಟಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು ರಾಜ್ಯದ ಪರಿಸ್ಥಿತಿ ಆಧರಿಸಿ, ತಜ್ಞರ ಅಭಿಪ್ರಾಯ…

ಜುಲೈ ಅಂತ್ಯದ ವೇಳೆಗೆ ಪಿಯುಸಿ ಫಲಿತಾಂಶ; ಆಗಸ್ಟ್’ನಲ್ಲಿ ಎಸ್ಸೆಸ್ಸೆಲ್ಸಿ ರಿಸಲ್ಟ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೋನಾ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಇಂದು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರೌಢ ಶಾಲೆ, ಬಿಜಿಎಸ್. ನ್ಯೂ ಹಾರಿಜಾನ್, ಸಂತ‌ ಜೋಸೆಪ್ ಶಾಲೆಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿನೀಡಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದರು. ಜುಲೈ ಅಂತ್ಯದ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದೂ ಅವರು ಹೇಳಿದರು.