ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಿದರೆ ಕ್ರಮ; ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ರಾಜ್ಯ ಸರ್ಕಾರ ಗುರುತಿಸಿರುವ ಕೋವಿಡ್ ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿದ್ದು, ಇದೀಗ ಖಾಸಗಿ ಆಸ್ಪತ್ರೆಗಳ ಪಾತ್ರ ಮಹತ್ವವಾಗಿದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್​ ಭಾಸ್ಕರ್​ ಸೂಚಿಸಿದ್ದಾರೆ. ಈ ಕುರಿತಂತೆ ಸರ್ಕಾರದ ಆದೇಶ ಹೊರಡಿಸಿರುವ ಅವರು, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಚಿಕಿತ್ಸೆ ಮತ್ತು ಪರೀಕ್ಷೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅನ್ವಯ ಕೇಸ್ ದಾಖಲಿಸಿ ಕ್ರಮ ಜರುಗಿಸುವ ಬಗ್ಗೆ ಅವರು ತಿಳಿಸಿದ್ದಾರೆ.

ಕೊರೋನಾ ಸೋಂಕಿತರ ಗುಣಮುಖ ಪ್ರಮಾಣವೂ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ಹೆಚ್ಚುತಲಿದ್ದು, ಸೋಂಕಿತರ ಗುಣಮುಖ ಪ್ರಮಾಣವೂ ಹೆಚ್ಚಾಗುತ್ತಿದೆ. ಶೇ 57ರಷ್ಟು ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ 5,66,542 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, ಶೇಕಡ 2.21 ರಷ್ಟು ಮಂದಿಗೆ ಮಾತ್ರ ಸೋಂಕು ಕಂಡುಬಂದಿದೆ. ರಾಷ್ಟ್ರಮಟ್ಟದಲ್ಲಿ ಶೇಕಡ 3ರಷ್ಟಿರುವ ಮರಣ ಪ್ರಮಾಣ ರಾಜ್ಯದಲ್ಲಿ ಕೇವಲ ಶೇ 1.56ರಷ್ಟಿದೆ ಎಂಬ ಮಾಹಿತಿಯನ್ನು ಟ್ವೀಟ್ ಮೂಲಕ ಅವರು ವಿವರಿಸಿದ್ದಾರೆ. Karnataka COVID recovery rate stands at 57% with 7507 discharges & 5472 active cases. So far we tested 5,95,470 samples and 5,66,543 of them are negative with positivity rate of 2.21%. Our state's mortality rare remains low…

ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆ

ದೆಹಲಿ: ದೇಶದಲ್ಲಿ ತೈಲ ದರ ಏರಿಕೆಯ ಪರ್ವ ಮುಂದುವರಿದಿದೆ. ಇದೀಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಇಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 5 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 13 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್‌ ದರ ೮೦.೫೩ ರೂಪಾಯಿಗಳಿಗೆ ಏರಿಕೆಯಾಗಿದೆ. ಪೆಟ್ರೋಲ್‌ ದರ 80.43 ರೂಪಾಯಿಗಳಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್‌ ದರ 76.58 ರೂಪಾಯಿಗಳಿಗೆ ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್‌ ಬೆಲೆ 83.045 ರೂಪಾಯಿ ತಲುಪಿದೆ.

ಜುಲೈ 26 ರವರೆಗೆ ನಿಷೇಧಾಜ್ಞೆ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸಪಡುತ್ತಿದೆ. ಲಾಕ್’ಡೌನ್ ನಿಯಮ ಜಾರಿಯಲ್ಲಿದ್ದರೂ ಜನರ ನಿರ್ಲಕ್ಷ್ಯ ಕಂಡುಬರುತ್ತಿವೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆಯೂ ಸಾಗಿದೆ. ಈ ನಡುವೆ, ಬೆಂಗಳೂರು ನಗರದಲ್ಲಿ ಕೊರೋನಾ ತಡೆಗಟ್ಟಲು ಮತ್ತೆ ಒಂದು ತಿಂಗಳ ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಜುಲೈ 26 ರವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ

ಹಳ್ಳಿ ಸೊಗಡಿನ ಊಟ ಅಂದ್ರೆ ಅದು ಭರ್ಜರಿ ಭೋಜನ. ಬಗೆ ಬಗೆಯ ಖಾದ್ಯಗಳನ್ನು ಊಹಿಸಿದರೆ ಸಾಕು, ಮತ್ತೆ ಹಳ್ಳಿಗೆ ಹೋಗಬೇಕೆನಿಸುತ್ತದೆ. ಈ ಹಳ್ಳಿ ತಿಂಡಿ ತಯಾರಿ ವಿಧಾನವೂ ಸುಲಭ. ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ ಇಲ್ಲಿದೆ. ಬದನೆ ಸುಟ್ಟು ಗೊಜ್ಜು ಬೇಕಾದ ಸಾಮಗ್ರಿ ಬದನೆ 2 ಕಾಯಿಮೆಣಸು 1 ಬೆಲ್ಲ 5 ಚಮಚ ನೀರು 1 ಗ್ಲಾಸ್ ಹುಳಿ 1 ನಿಂಬೆ ಗ್ರಾತ್ರದಷ್ಟು ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ 4 ಚಮಚ ಬೆಳ್ಳುಳ್ಳಿ 5-6 ಸಾಸಿವೆ 1 ಚಮಚ ಕರಿಬೇವು ಮಾಡುವ ವಿಧಾನ ಬದನೆಕಾಯಿಯನ್ನು ತೊಳೆದು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಬದನೆ ಬೇಯುವ ವರೆಗೂ ಸುಡಬೇಕು. ಹೊರಗಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಬೇಕು. ನಂತರ ಅದಕ್ಕೆ ಹುಳಿ, ಬೆಲ್ಲ, ಕಾಯಿಮೆಣಸು, ಎಷ್ಟು ಬೇಕೋ ಅಷ್ಟು ನೀರು, ಉಪ್ಪು ಸೇರಿಸಬೇಕು. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ,…

ಕುತೂಹಲ ಕೆರಳಿಸಿದ ‘ ರಾಸ್ಬಾರಿ’

ಕೊರೋನಾ ಸಂಕಟ ಪರಿಸ್ಥಿತಿ ಇಲ್ಲ ಅಂದಿದ್ದಾರೆ ಭಾರತೀಯ ಚಿತ್ರೋದ್ಯಮದಲ್ಲಿ ಬಗೆಬಗೆಯ ವಿದ್ಯಮಾನಗಳು ಘಟಿಸುತ್ತಿತ್ತೇನೋ? ಆದರೆ ಸುದೀರ್ಘ ಲಾಕ್’ಡೌನ್ ಜಾರಿಯಾಗಿದ್ದರಿಂದಾಗಿ ಸಿನಿ ಉದ್ಯಮವೂ ಮಂಕಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಒಂದೊಂದೇ ಟೀಸರ್, ಟ್ರೇಲರ್’ಗಳು ಬಿಡುಗಡೆಯಾಗುತ್ತಿದೆ. ನಟಿ ಸ್ವರಾ ಭಾಸ್ಕರ್ ಅಭಿನಯದ ರಾಸ್ಬಾರಿ ಟ್ರೈಲರ್ ಸಿನಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಕರಾವಳಿಯ ಮನೆಮಗನಾದ ಐಪಿಎಸ್ ಅಧಿಕಾರಿ; ಟ್ವೀಟ್ ಬಗ್ಗೆ ತುಳುವರು ‘ಹರ್ಷ’

ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತ ಡಾ.ಹರ್ಷಾ ವರ್ಗವಾಗಿದ್ದಾರೆ. ಮಂಗಳೂರು ಕಮಿಷನರೇಟ್ ಮುಖ್ಯಸ್ಥರಾಗಿ ಅವರು ಬಂದರು ನಗರಿಯಲ್ಲಿ ಕಳೆದಿದ್ದು ಕೇವಲ 11 ತಿಂಗಳು. ಆದರೆ ಅಷ್ಟರಲ್ಲೇ ಅವರು ಕರಾವಳಿ ಜನರ ಪಾಲಿಗೆ ಮನೆ ಮಗನಾಗಿ ಗುರುತಾದರು. ಭಾವನಾತ್ಮಕ ಸಂಬಂಧದ ಬೆಸುಗೆಯನ್ನು ಗಟ್ಟಿಯಾಗಿಸಿ ಅವರು ಬೆಂಗಳೂರಿಗೆ ಮರಳುವಾಗ ವೇದನೆ ಅನುಭವಿಸಿದವರು ಅನೇಕರು. ಮೀನಾ ನಂತರ ಹರ್ಷ ಸುಮಾರು 2 ದಶಕಗಳ ಹಿಂದೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಭರತ್ ಲಾಲ್ ಮೀನಾ ಜನಪರ ಕಾರ್ಯಕ್ರಮಗಳಿಂದಾಗಿ ಗಮನಸೆಳೆದಿದ್ದರು. ಅಪ್ನಾ ದೇಶ್ ಕಾರ್ಯಕ್ರಮ ಮೂಲಕ ಜನಾನುರಾಗಿಯಾಗಿದ್ದ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ ಅವರನ್ನು 1999ರಲ್ಲಿ ದಕ್ಷಿಣಕನ್ನಡದಿಂದ ರಾಜ್ಯ ಸರ್ಕಾರ ವರ್ಗಾಯಿಸಿದಾಗ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆದು ಇಡೀ ಕರಾವಳಿ ಬಂದ್ ಆಗಿತ್ತು. ಇದೀಗ ಈವರೆಗೂ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಆಗಿದ್ದ ಮಂಗಳೂರು ಪೊಲೀಸ್ ಆಯುಕ್ತ ಹಿರಿಯ ಐಪಿಎಸ್ ಅಧಿಕಾರಿ ಡಾ.ಹರ್ಷಾ…

ರಾಜ್ಯದಲ್ಲಿ 1267 ಹೊಸ ಕೊರೋನಾ ಕೇಸ್; ಬೆಂಗಳೂರಿನಲ್ಲಿ ಒಂದೇ ದಿನ 783 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಬಹಳಷ್ಟು ಮಂದಿಯನ್ನು ಈ ಅಗೋಚರ ವೈರಾಣು ಆವರಿಸಿಕೊಂಡಿದ್ದು ಇಂದಿನ ಹೆಲ್ತ್ ಬುಲೆಟಿನ್ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ. ಇಂದು ಸಂಜೆಯಹೊತ್ತಿಗೆ ಅನಾವರಣಗೊಂಡ ಮಾಹಿತಿಯಂತೆ ರಾಜ್ಯದಲ್ಲಿ 1267 ಹೊಸ ಕೊರೋನಾ ಸೋಂಕಿನ ಕೇಸ್’ಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ 16 ಮಂದಿ ಸೋಂಕಿತರು ಶನಿವಾರ ಸಂಜೆಯಿಂದೀಚೆಗೆ ಸಾವನ್ನಪ್ಪಿದ್ದಾರೆಂದು ಬುಲೆಟಿನ್ ಹೇಳಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇಂದು 783 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿವೆ. ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳಲ್ಲೂ ಕೊರೋನಾ ತಲ್ಲಣ ಉಂಟಾಗಿದ್ದು ದಕ್ಷಿಣಕನ್ನಡದಲ್ಲಿ 97 ಹಾಗೂ ಉಡುಪಿಯಲ್ಲಿ 40 ಹೊಸ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 71 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಗದಗ್’ನಲ್ಲಿ 30, ಬೆಂಗಳೂರು ಗ್ರಾಮಾಂತರದಲ್ಲಿ 27, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ 18, ಬಾಗಲಕೋಟೆ 17, ಉತ್ತರಕನ್ನಡದಲ್ಲಿ 14 ಪ್ರಕರಣಗಳು ಬೆಳಕಿಗೆ ಬಂದಿವೆ. ಹಾವೇರಿಯಲ್ಲಿ…

ರಾಜ್ಯಕ್ಕೆ ಕೊರೋನಾಘಾತ; ಒಂದೇ ದಿನ 918 ಮಂದಿಯಲ್ಲಿ‌ ಸೋಂಕು, ಬೆಂಗಳೂರಲ್ಲೇ 596 ಕೇಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಆತಂಕಕಾರಿ ರೀತಿಯಲ್ಲಿ ಹರಡುತ್ತಿದೆ. ಇಂದು ರಾಜ್ಯದಲ್ಲಿ ಒಟ್ಟು 918 ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿವೆ. 596 ಪಾಸಿಟಿವ್ ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ರಾಜ್ಯ ಸರ್ಕಾರ ಇಂದು ಸಂಜೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಬಹಿರಂಗಪಡಿಸಿರುವ ಅಂಕಿ ಅಂಶ ಕಳವಳಕಾರಿ ಸಂಗತಿಗಳತ್ತ ಬೊಟ್ಟು ಮಾಡಿದೆ. ದಕ್ಷಿಣ ಕನ್ನಡದಲ್ಲಿ 49, ಕಲಬುರಗಿಯಲ್ಲಿ 33, ಬಳ್ಳಾರಿಯಲ್ಲಿ 24, ಗದಗದಲ್ಲಿ 24, ಧಾರವಾಡದಲ್ಲಿ 19, ಬೀದರ್‌ನಲ್ಲಿ 17, ಉಡುಪಿಯಲ್ಲಿ 14, ಹಾಸನದಲ್ಲಿ 14, ಕೋಲಾರದಲ್ಲಿ 14, ಯಾದಗಿರಿಯಲ್ಲಿ 13, ಶಿವಮೊಗ್ಗದಲ್ಲಿ 13, ತುಮಕೂರಿನಲ್ಲಿ 13, ಚಾಮರಾಜನಗರದಲ್ಲಿ 13, ಮಂಡ್ಯದಲ್ಲಿ 12, ಮೈಸೂರಿನಲ್ಲಿ 12, ಕೊಡಗಿನಲ್ಲಿ 9, ರಾಯಚೂರಿನಲ್ಲಿ 6, ದಾವಣಗೆರೆಯಲ್ಲಿ 6, ಬೆಂಗಳೂರು ಗ್ರಾಮಾಂತರದಲ್ಲಿ 5, ಉತ್ತರ ಕನ್ನಡದಲ್ಲಿ 2, ಬಾಗಲಕೋಟೆಯಲ್ಲಿ, 2, ಚಿಕ್ಕಮಗಳೂರಿನಲ್ಲು 2, ಚಿತ್ರದುರ್ಗದಲ್ಲಿ 2, ಬೆಳಗಾವಿ, ಚಿಕ್ಕಬಳ್ಳಾಪುರ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಂದು…

ಕೇಂದ್ರ ವಲಯ ಐಜಿಪಿಯಾಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ

ಬೆಂಗಳೂರು: ಕೇಂದ್ರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರವಹಿಸಿಕೊಂಡಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಸೀಮಂತ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ರಾಜ್ಯ ಕೇಂದ್ರ ವಲಯ ಐಜಿಪಿಯನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಈವರೆಗೂ ಕೇಂದ್ರ ವಲಯ ಐಜಿಪಿಯಾಗಿದ್ದ ಶರತ್ ಚಂದ್ರ ಅವರು ಸೀಮಂತ್ ಕುಮಾರ್ ಸಿಂಗ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.  ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಕೆಜಿಎಫ್ ಜಿಲ್ಲೆಗಳನ್ನು ಹೊಂದಿರುವ ಕೇಂದ್ರ ವಲಯ ಪೊಲೀಸ್ ಮುಖ್ಯಸ್ಥರಾಗಿ ಸೀಮಂತ್ ಕುಮಾರ್ ಸಿಂಗ್ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ.. ರಾಜ್ಯದ ಖಡಕ್ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಮೊಬೈಲ್ ನಂಬರ್ ಉತ್ತರ ಭಾರತದ ಮಂದಿಗೆ ಹೆಲ್ಪ್’ಲೈನ್..!!