ವಾಜಪೇಯಿ ಜಯಂತಿ ದಿನದಂದು ‘ರೈತ ದಿನ’; ಬಿಜೆಪಿಯಿಂದ ಸಿದ್ಧತೆ

ಬೆಂಗಳೂರು: ಕೃಷಿ ಕಾಯ್ದೆ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರದ ಈ ಕಾಯ್ದೆಗಳನ್ನು ಸಮರ್ಥಿಸಲು ಆಡಳಿತಾರೂಢ ಬಿಜೆಪಿ ಅನೇಕಾನೇಕ ಮಾರ್ಗಗಳನ್ನು ಹುಡುಕಾಡುತ್ತಿದೆ. ಇದೇ ಸಂದರ್ಭದಲ್ಲಿ, ಈ ಬಾರಿಯ ವಾಜಪೇಯಿ ಜಯಂತಿ ದಿನವನ್ನು ರೈತ ದಿನವನ್ನಾಗಿ ಬಿಜೆಪಿ ಘೋಷಿಸಿದೆ. ದಿವಂಗತ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ನ್ನು ಬಿಜೆಪಿ, ರೈತರ ದಿನವಾಗಿ ಆಚರಿಸಲಿದೆ. ಪ್ರತಿ ಹೋಬಳಿಗಳಲ್ಲಿ ರೈತರ ಸಮಾವೇಶಗಳನ್ನು ಆಯೋಜಿಸಲು ಬಿಜೆಪಿ ನಾಯಕ್ರು ನಿರ್ಧರಿಸಿದ್ದಾರೆ. ಕೇಂದ್ರ ಸರಕಾರದ ಕೃಷಿ ಸುಧಾರಣಾ ಕಾಯ್ದೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು. ಅದೇದಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು 9 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 2,000 ರೂಪಾಯಿಯನ್ನು ಬಿಡುಗಡೆ ಮಾಡಿ, ದೇಶದ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಹಾಸನಕ್ಕೆ ದಿಗಂತ್ ಸೈಕಲ್ ಸವಾರಿ

ಸ್ಯಾಂಡಲ್ ವುಡ್ ನಟ ದಿಗಂತ್ ಮಾತ್ರ ಹೊಸ ಸಾಹಸವೊಂದನ್ನು ಮಾಡಿದ್ದಾರೆ. ಬರೋಬ್ಬರಿ 192 ಕಿಲೋ ಮೀಟರ್ ದೂರವನ್ನು ಸೈಕಲ್ ಮೂಲಕ ಕ್ರಮಿಸಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್’ನಲ್ಲಿ ತೆರಳಿ ಈ ಕುರಿತ ಮಾಹಿತಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. View this post on Instagram A post shared by diganthmanchale (@diganthmanchale)  

ಖಾಸಗಿ ಶಾಲೆಗಳಿಂದ ಆನ್ ಲೈನ್ ಕ್ಲಾಸ್ ಬಂದ್?

ಬೆಂಗಳೂರು: ಆನ್ಲೈನ್ ಕ್ಲಾಸ್ ವಿರುದ್ಧ ರುಪ್ಸಾ ಧ್ವನಿ ಎತ್ತಿದೆ. ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಖಾಸಗಿ ಶಿಕ್ಷಣ ಆಡಳಿತ ಮಂಡಳಿ, ರುಪ್ಸಾ ಮುಂದಾಗಿದೆ. ಆನ್ ಲೈನ್ ಕ್ಲಾಸ್ ಬಂದ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ಸರ್ಕಾರ ಶಾಲೆಗಳನ್ನ ಪುನಾರಂಭಿಸುವ ಸಮಯದಲ್ಲಿ ಶಾಲೆಗಳನ್ನ ಮುಚ್ಚಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಶಿಕ್ಷಣ ಮಂಡಳಿಯ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಖಾಸಗಿ ಶಿಕ್ಷಣ ಆಡಳಿತ ಮಂಡಳಿಯು ಶಾಲೆಯನ್ನ ಮುಚ್ಚಿ ಆನ್ ಲೈನ್ ಕ್ಲಾಸ್ ಬಂದ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್’ನಲ್ಲಿ ಭಾನುವಾರ ರುಪ್ಸಾ, ಖಾಸಗಿ ಶಾಲೆಗಳ ಒಕ್ಕೂಟದ ಪ್ರತಿನಿಧಿಗಳ ಸಭೆ ಕುತೂಹಲದ ಕೇಂದ್ರಬಿಂದುವಾಯಿತು. ಜನವರಿ 6ರಿಂದ ಬೆಂಗಳೂರಿನಲ್ಲಿ ಹೋರಾಟಕ್ಕಿಳಿಯುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದ್ದು, ಅಂದಿನಿಂದ ರಾಜ್ಯದಾದ್ಯಂತ ಶಾಲೆ ಬಂದ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಜನವರಿಯಲ್ಲೇ ದೇಶದ ಜನರಿಗೆ ಕೋವಿಡ್ ಲಸಿಕೆ ಲಭ್ಯ?

ದೆಹಲಿ: ಕೊರೋನಾ ಹಾವಳಿಗೆ ಬ್ರೇಕ್ ಬೀಳುತ್ತಿಲ್ಲ. ಆದರೆ ಸೋಂಕು ತಡೆಗೆ ಸಕಲ ಪ್ರಯತ್ನ ಸಾಗಿದೆ. ಇದೇ ಸಂದರ್ಭದಲ್ಲಿ ದೇಶದ ಜನತೆಗೆ ಕೋವಿಡ್ ಸೋಂಕು ನಿರೋಧಕ ಲಸಿಕೆ ನೀಡಲು ಕೇಂದ್ರ ಸರ್ಕಾರ ಕ್ರಮವಹಿಸಿದೆ. ಭಾರತದಲ್ಲಿ ಜನವರಿಯಿಂದ ದೇಶದ ಜನತೆಗೆ ಲಸಿಕೆ ವಿತರಿಸುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನೀಡಿದ್ದಾರೆ. ಜನವರಿಯಿಂದ ದೇಶದ ಜನರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದಿರುವ ಅವರು, ದೇಶದ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ದೇಶದ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೆಲಸ ಮಾಡಿದ್ದಾರೆ ಮತ್ತು ಮುಂಬರುವ ಆರರಿಂದ ಏಳು ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.

‘ಸಮುದಾಯ ಬೆಂಗಳೂರು’; ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಮಹಿಳೆ ಆಯ್ಕೆ

ಬೆಂಗಳೂರು: ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾರ್ಯದರ್ಶಿಯಾಗಿ ಮಹಿಳೆ ಆಯ್ಕೆಯಾಗಿದ್ದಾರೆ. ಸಂಘದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಾವ್ಯ ಅಚ್ಯುತ್ ಅವರನ್ನು ರಂಗಕರ್ಮಿಗಳು, ಸಾಹಿತಿಗಳು ಅಭಿನಂದಿಸಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮತ್ತು ವಹಿಸುತ್ತಿರುವ ‘ಸಮುದಾಯ ಬೆಂಗಳೂರು’ ಇದರ ಸರ್ವಸದಸ್ಯರ ಸಭೆ ಬೆಂಗಳೂರಿನ ಕೆಂಪೇಗೌಡ ನಗರ ಬಡಾವಣೆಯಲ್ಲಿರುವ ಉದಯಭಾನು ಕಲಾಸಂಘದಲ್ಲಿ ನಡೆಯಿತು. ಪ್ರಸಕ್ತ ಸಾಂಸ್ಕೃತಿಕ, ರಾಜಕಾರಣ ಮತ್ತು ಕರ್ನಾಟಕದಾದ್ಯಂತ ನಡೆದ “ಒಳಿತು ಮಾಡು ಮನುಸ” ಬೀದಿ ರಂಗ ನಮನ ಕಾರ್ಯಕ್ರಮದ ವಿಮರ್ಷೆ ನಡೆಯಿತು. ಜೊತೆಗೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗಮನಸೆಳೆಯಿತು. ಸಮುದಾಯ ಬೆಂಗಳೂರು ಅಧ್ಯಕ್ಷರಾಗಿಅಗ್ರಹಾರ ಕೃಷ್ಣ ಮೂರ್ತಿ, ಉಪಾಧ್ಯಕ್ಷರಾಗಿ ಪದ್ಮ‌ ಶಿವಮೊಗ್ಗ ಹಾಗೂ ಕೀರ್ತಿ ತೊಂಡಗೆರೆ, ಕಾರ್ಯಾಧ್ಯಕ್ಷರಾಗಿ ಜೆ.ಸಿ.ಶಶಿಧರ, ಕಾರ್ಯದರ್ಶಿಯಾಗಿ ಕಾವ್ಯ ಅಚ್ಯುತ್ ಆಯ್ಕೆಯಾದ್ದರು. ಜಂಟಿ ಕಾರ್ಯದರ್ಶಿಗಳಾಗಿ ಗಣೇಶ…

ಮೂರು ಕೋತಿ, ನೂರಾರು ಜನ’; ವಿಶಿಷ್ಟ ಜಾಗೃತಿ ಅಭಿಯಾನ

ಬೆಂಗಳೂರು: ಸಿಲಿಕಾನ್ ಸಿಟಿ ಇಡೀ ವಿಶ್ವದ ಗಮನಕೇಂದ್ರೀಕರಿಸಿರುವುದಂತೂ ಸತ್ಯ. ಭಾರತದಲ್ಲಿ ಐಟಿ-ಬಿಟಿ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇದೇ ಉದ್ಯಾನ ನಗರಿಯಿಂದ. ಆದರೆ ಪ್ರಸಕ್ತ ಪರಿಸ್ಥಿತಿ ನೋಡಿದರೆ ಅಧ್ವಾನದ ನಗರಿಯಾಗಿ ಪರಿವರ್ತಿತವಾಗಿದೆ. ಇದಕ್ಕೆ ಕಾರಣವೇನು? ಪರಿಸ್ಥಿತಿ ಹೀಗಾಗಲು ಜನಪ್ರತಿನಿಧಿಗಳು ಎಡವಿದ್ದೆಲ್ಲಿ ಎಂಬುದನ್ನು ಸಾರ್ವಜನಿಕರ ಗಮನೆಳೆಯಲು ಮೂರು ಗಾಂಧಿ ಕೋತಿಗಳು ಬೆಂಗಳೂರಿನ ಬೀದಿಗಳಲ್ಲಿ ಆಗಾಗ್ಗೆ ಗಮನಸೆಳೆಯುತ್ತಿವೆ. ಏನಿದು ಗಾಂಧಿ ಕೋತಿ? ರಾಜಧಾನಿ ಬೆಂಗಳೂರು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದು. ಆದರೆ ಅಭಿವೃಧ್ದಿ ಕಾಮಗಾರಿಯ ಹೆಸರಲ್ಲಿ ಇಡೀ ವ್ಯವಸ್ಥೆಯು ಜನರ ಸಹನೆಯನ್ನು ಪ್ರಶ್ನಿಸುವಂತಿದೆ. ಜನರ ನಿದ್ದೆಗೆಡಿಸುವ ಈ ಪರಿಸ್ಥಿತಿಯನ್ನು ಅಣಕಿಸುವ ರೀತಿಯಲ್ಲಿತ್ತು ಗಾಂಧಿ ಕೋತಿಗಳ ಪ್ರದರ್ಶನ ವೈಖರಿ. ‘ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಹೇಳಲಾರೆ, ಕೆಟ್ಟದ್ದನ್ನು ಕೇಳಲಾರೆ’ ಎಂದು ಮೂರು ಕೋತಿಗಳ ಫಲಕದೊಂದಿಗೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ಮೂಲಕ ಸಾರ್ವಜನಿರಲ್ಲಿ ಪರಿಸರ ಹಾಗೂ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ…

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ: ಲಿಂಬಾವಳಿ

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ವಿಶ್ಲೇಷಿಸಿದ್ದಾರೆ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯ ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಮತ್ತು ಕೃಷಿಕರ ಪರವಾದ ಆಡಳಿತವನ್ನು ಗಮನಿಸಿ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಂಚಾಯತ್‌ಗಳಿಗೆ ಇದೀಗ ನೇರವಾಗಿ ಗರಿಷ್ಠ ಅನುದಾನ ಲಭಿಸುತ್ತಿದೆ. ಇದರ ಸದ್ಬಳಕೆಗಾಗಿ ಜನರು ಬಿಜೆಪಿಯ ಬೆಂಬಲಿತರನ್ನೇ ಆಯ್ಕೆ ಮಾಡಲಿದ್ದಾರೆ ಎಂದರು. ಜನವರಿ 2 ಮತ್ತು 3ರಂದು ರಾಜ್ಯದ ವಿಶೇಷ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ಜನವರಿ 8ರಿಂದ 11ರವರೆಗೆ ಜನಪ್ರತಿನಿಧಿ ಸಮಾವೇಶಗಳನ್ನು ಜಿಲ್ಲೆಗಳಲ್ಲಿ ನಡೆಸಿ ಗ್ರಾಮ ಪಂಚಾಯತ್‌ಗಳಿಗೆ…

‘ಅವನಲ್ಲಿ ಇವಳಿಲ್ಲಿ’ ಟ್ರೈಲರ್ ಬಿಡುಗಡೆ

ಸಿನಿಮಾ ಲೋಕದ ಕೌತುಕ ಎಂಬಂತೆ ಭಾರೀ ನಿರೀಕ್ಷೆಯಲ್ಲಿರುವ ‘ಅವನಲ್ಲಿ ಇವಳಿಲ್ಲಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ಪ್ರಭು ಮುಂದ್ಕೂರ್ ಮತ್ತು ಜಾನ್ವಿ ಜ್ಯೋತಿ ಭಿನಯಿಸಿರುವ ಈ ಚಿತ್ರವನ್ನು ಸಂದೇಶ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ.

ಗಡಿನಾಡಲ್ಲಿ ಅನಂತೇಶ್ವರ ವೈಭವ; ಷಷ್ಠಿ ಉತ್ಸವದಲ್ಲಿ ಭಕ್ತಸಾಗರ

ಮಂಗಳೂರು: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಕರಾವಳಿಯ ದೇವಾಲಯಗಳಲ್ಲಿ ಷಷ್ಠಿ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು. ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ಷಷ್ಠಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಮಂಜೇಶ್ವರ ಬ್ರಹ್ಮ ರಥೋತ್ಸವ ಎಂದೇ ಗುರುತಾಗಿರುವ ಈ ಉತ್ಸವಾರದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನನ್ಯ ವೈಭವವನ್ನು ಕಣ್ತುಂಬಿಕೊಂಡರು.

ಜೆಡಿಎಸ್-ಬಿಜೆಪಿ ವಿಲೀನದ ಮಾತುಗಳು ಸತ್ಯಕ್ಕೆ ದೂರ; ಬಿಎಸ್ವೈ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ವಿಲೀನದ ಮಾತುಗಳು ಸತ್ಯಕ್ಕೆ ದೂರವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಯಾವುದೇ ಜೆ.ಡಿ.ಎಸ್. ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆ.ಡಿ.ಎಸ್. ಪಕ್ಷವನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳಿಸುವಂತಹ ಬೆಳವಣಿಗೆ ಇಲ್ಲ ಎಂದಿದ್ದಾರೆ. ಈ ಕುರಿತ ವರದಿಗಳು ಶುದ್ಧ ಸುಳ್ಳು. ಅಂತಹ ಯಾವುದೇ ಸಂದರ್ಭ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.