ಘಾಟಿ ಕ್ಷೇತ್ರದಲ್ಲಿ ‘ಕಾದಲನ್’; ಪ್ರಭುದೇವ್ ಸೆಲ್ಫೀಗಾಗಿ ಮುಗಿಬಿದ್ದ ಜನ

ದೊಡ್ಡಬಳ್ಳಾಪುರ: ಭಾರತದ ಮೈಕೆಲ್‌ ಜಾಕ್ಸನ್‌ ಎಂದು ಖ್ಯಾತರಾದ ಖ್ಯಾತ ಬಹುಭಾಷಾ ಚಲನಚಿತ್ರ ನಟ, ನಿರ್ದೇಶಕ, ಕೊರಿಯೊಗ್ರಾಫರ್ ಪ್ರಭುದೇವ ಅವರು ಸೋಮವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ದೇವಾಲಯದ ವತಿಯಿಂದ ನಟ ಪ್ರಭುದೇವ ಅವರನ್ನು ಸನ್ಮಾನಿಸಿ ಪ್ರಸಾದ ವಿತರಿಸಲಾಯಿತು. ನಟ ಪ್ರಭುದೇವ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯ ಸೇರಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪ್ರಭುದೇವ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು‌‌ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ‌ ಅಧಿಕಾರಿ ಕೃಷ್ಣಪ್ಪ, ಪ್ರಧಾನ‌ ಅರ್ಚಕ‌ ನಾಗೇಂದ್ರ ಶರ್ಮಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ?  ಇದು ಗಾಳಿಸುದ್ದಿ ಎಂದ ಹೆಚ್ಡಿಕೆ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರದ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ, ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ.ಗೆದ್ದ ಸೋತ ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿದ್ದೇವೆ ಎಂದು ಅವರು ನೇರವಾಗಿ ಹೇಳಿದರು. ನೀವು ರಾಷ್ಟ್ರ ರಾಜಕಾರಣದ ಬಗ್ಗೆ ಒಲವು ವಿಚಾರ ಹೊಂದಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು; ನನಗೆ ರಾಷ್ಟ್ರ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ…

‘ಶಕ್ತಿ’ ಗ್ಯಾರೆಂಟಿ ಗೊಂದಲ; ಕರಾವಳಿ ಮಂದಿಯನ್ನು ವಾಚಿಸಿತೇ ಸಿದ್ದು ಸರ್ಕಾರ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ‘ಗ್ಯಾರೆಂಟಿ’ಯಿಂದ ಎಂಬುದು ಸ್ಪಟಿಕ ಸತ್ಯ. ಇದೀಗ ಸರ್ಕಾರ ಉಳಿದರೂ, ವರ್ಚಸ್ಸು ಉಳಿಸಿಕೊಂಡರೂ ಅದು ‘ಗ್ಯಾರೆಂಟಿ’ಯಿಂದಲೇ. ಆದರೆ ಈ ಭರವಸೆಗಳ ವಿಚಾರದಲ್ಲಿ ಅಪಸ್ವರಗಳು, ಅಪವಾದಗಳು ಮಾರ್ದನಿಸುತ್ತಿರುವುದು ಕುತೂಹಲಕಾರಿ ಬೆಳವಣಿಗೆ. ಚುನಾವಣೆಗಳಿಗೆ ಮುನ್ನ ಪ್ರದೇಶ ಕಾಂಗ್ರೆಸ್ ಪಕ್ಷ ಐದು ಪ್ರಮುಖ ‘ಗ್ಯಾರೆಂಟಿ’ ಭರವಸೆಗಳನ್ನು ನೀಡಿತ್ತು. ಈ ಪೈಕಿ ನಾರಿಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನಾವರಣವಾಗಿದೆ. ಆದರೆ, ಮುನ್ನುಡಿ ಬರೆದಾಗಲೇ ಭಾರೀ ಪ್ರಚಾರ ಗಿಟ್ಟಿಸಿಕೊಂಡಿರುವ ಈ ‘ಶಕ್ತಿ’ ಕೊಡುಗೆ ಕರಾವಳಿ ಮಲೆನಾಡಿನ ಮಂದಿಗೆ ಮರೀಚಿಕೆಯಾಗಿದೆ. KARNATAKA SHAKTI GUARANTEE LAUNCH:#CongressGuarantee: 📌CM Siddaramaiah, DK, CS Vandita Sharma, & others leaves to MAJESTIC'S KSRTC BUS STATION TO LAUNCH #CongressShaktiToWomen Henceforth, for the Next 5-Years across state all women of KA will travel…

ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆತಾಗಿದೆ. ರಾಜ್ಯದ ಇತಿಹಾಸದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರಾಂಡ್‌ ಸ್ಟೆಪ್ಸ್‌ ಮುಂಭಾಗ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆ ಉದ್ಘಾಟಿಸಿದರು. ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹಿತ ಸಚಿವರನೇಕರು ಉಪಸ್ಥಿತರಿದ್ದರು. ರಾಜಧಾನಿಯಲ್ಲಷ್ಟೇ ಅಲ್ಲ, ವಿವಿಧ ಜಿಲ್ಲಾ ಕೇಂದ್ರಗಳಲ್ಲೂ. ಶಕ್ತಿ ಯೋಜನೆಯನ್ನು ಉದ್ಘಾಟಿಸಲಾಯಿತು. ‘ಶಕ್ತಿ’ ಯೋಜನೆಯ ಪ್ರಮುಖ ಅಂಶಗಳು : ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು. ʼ ಶಕ್ತಿ ಯೋಜನೆʼಯ ಸೌಲಭ್ಯವು…